ನೋಯ್ಡಾ (ಉತ್ತರ ಪ್ರದೇಶ):ಉತ್ತರ ಪ್ರದೇಶದ ನೋಯ್ಡಾದಲ್ಲಿರುವ ಬೃಹತ್​ ಅವಳಿ ಗೋಪುರ ಸೂಪರ್​ ಟೆಕ್​ ಅಪೆಕ್ಸ್​ ಮತ್ತು ಸಿಯಾನಿಯನ್ನು ಕೆಡವಲು ಇಂದು ಮಧ್ಯಾಹ್ನದ ಮುಹೂರ್ತ ಫಿಕ್ಸ್​ ಆಗಿದೆ. 2004ರಲ್ಲಿ ಸುಮಾರು 70 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗಿರುವ ಈ ಗೋಪುರವನ್ನು ಇದೀಗ 20 ಕೋಟಿ ರೂಪಾಯಿ ಖರ್ಚು ಮಾಡಿ ನೆಲಸಮ ಮಾಡಲಾಗುತ್ತಿದೆ.
ಈ ಗೋಪುರಗಳನ್ನು ಅಕ್ರಮವಾಗಿ ಕಟ್ಟಿರುವ ಕಾರಣ ನೆಲಸಮಕ್ಕೆ ಸುಪ್ರೀಂಕೋರ್ಟ್​ ಆದೇಶಿಸಿದೆ. ಸೂಪರ್‌ ಟೆಕ್ ಎಮರಾಲ್ಡ್ ಸಂಸ್ಥೆ ನಿಯಮಾವಳಿ ಉಲ್ಲಂಘಿಸಿ ನಿರ್ಮಿಸಿದ್ದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ನಿಬಂಧನೆಗಳಿಗೆ ವಿರುದ್ಧವಾಗಿ ನಿರ್ಮಿಸುತ್ತಿದ್ದ ಅವಳಿ ಗೋಪುರಗಳನ್ನು ಕೆಡವಲು ಆಗಸ್ಟ್​ 31, 2021ರಂದು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಕಟ್ಟಡವನ್ನು ಇಂದು ಮಧ್ಯಾಹ್ನ 2.30ಕ್ಕೆ ನೆಲಸಮ ಮಾಡಲಾಗುತ್ತಿದೆ. 103 ಮೀಟರ್ ಹಾಗೂ 97 ಮೀಟರ್ ಎತ್ತರ ಇರುವ ಈ ಕಟ್ಟಡ ನೆಲಸಮ ಮಾಡಲು ತಗಲುವ ವೇಳೆ ಕೇವಲ 12 ಸೆಕೆಂಡ್!
ಈ ಸ್ಫೋಟಕ ಬ್ಲಾಸ್ಟ್‌ ಮಾಡುವ ಕಾರ್ಯವನ್ನು ಎಡಿಫೈಸ್ ಇಂಜಿನಿಯರಿಂಗ್ ಕಂಪೆನಿಗೆ ವಹಿಸಿಕೊಡಲಾಗಿದೆ. ಇದನ್ನು ಬ್ಲಾಸ್ಟ್​ ಮಾಡಲು ನಿಯೋಜನೆಗೊಂಡಿರುವವರು ಹರಿಯಾಣದ ಹಿಸಾರ್‌ನವರಾದ ಚೇತನ್ ದತ್ತಾ. ಇದೀಗ ಇತಿಹಾಸದ ಪುಟ ಸೇರಲಿರುವ ಈ ಬೃಹತ್​ ಕಟ್ಟಡ ಒಡೆಯಲು ತಮಗಿದ್ದ ಕನಸಿನ ಕುರಿತು ಚೇತನ್​ ಮಾತನಾಡಿರುವುದು ಹೀಗೆ:
“ಕಳೆದ ವರ್ಷ ಆಗಸ್ಟ್‌ನಲ್ಲಿ ನೋಯ್ಡಾದಲ್ಲಿ ಸೂಪರ್‌ಟೆಕ್‌ನ ಅವಳಿ ಗೋಪುರಗಳನ್ನು ಕೆಡವಲು ಸುಪ್ರೀಂಕೋರ್ಟ್​ ಆದೇಶ ನೀಡುತ್ತಿದ್ದಂತೆಯೇ ಆ ಕಾರ್ಯ ನನ್ನಿಂದ ಆಗಬಾರದೇ ಎಂದುಕೊಂಡೆ. ಕಟ್ಟಡಗಳನ್ನು ಉರುಳಿಸಲು ಗುಂಡಿಯನ್ನು ಒತ್ತುವ ಅವಕಾಶಕ್ಕಾಗಿ ದೇವರಲ್ಲಿ ಬೇಡಿಕೊಂಡಿದ್ದೆ. ಸುಪ್ರೀಂ ತೀರ್ಪು ನೀಡುತ್ತಿದ್ದಂತೆಯೇ ನನ್ನ ಸ್ನೇಹಿತರೊಬ್ಬರು ವಾಟ್ಸ್​ಆ್ಯಪ್​ನಲ್ಲಿ ಮೆಸೇಜ್​ ಕಳುಹಿಸಿದರು. ಆಗಿನಿಂದಲೂ ನನ್ನದು ಒಂದೇ ಕನಸು. ಕಟ್ಟಡವನ್ನು ಬ್ಲಾಸ್ಟ್‌ ಮಾಡಲು ನನಗೆ ಅವಕಾಶ ಸಿಗಬೇಕು ಎನ್ನುವುದು, ಅದಕ್ಕಾಗಿ ದೇವರಲ್ಲೂ ಪ್ರಾರ್ಥಿಸುತ್ತಿದ್ದೆ” ಎಂದಿದ್ದಾರೆ ಚೇತನ್​.
“ಇದು ಬರಿಯ ಕನಸು ಎಂದುಕೊಂಡಿದ್ದೆ. ಆದರೆ ನನಸಾಗುತ್ತದೆ ಎಂದು ಅಂದು ಕೊಂಡೇ ಇರಲಿಲ್ಲ. ಕಳೆದ ಜುಲೈನಲ್ಲಿ, ಎಡಿಫೈಸ್ ಕಂಪೆನಿ ಸ್ಫೋಟಕಗಳನ್ನು ಲೋಡ್ ಮಾಡಲು ನನ್ನನ್ನು ಸಂಪರ್ಕಿಸಿತು. ನನಗೆ ಆಗ ನನ್ನ ಕನಸು ನನಸಾಯಿತು ಎಂಬ ಭಾವನೆ ಮೂಡಿತು. 10 ದಿನಗಳಲ್ಲಿ, ನಾವು ಸ್ಫೋಟಕಗಳನ್ನು ಬಹಳ ಎಚ್ಚರಿಕೆಯಿಂದ ಕಟ್ಟಡದೊಳಗೆ ಲೋಡ್ ಮಾಡಿದ್ದೇವೆ” ಎಂದರು.
“ನಾನು 2002 ರಿಂದ ಈ ವ್ಯವಹಾರದಲ್ಲಿ ತೊಡಗಿಕೊಂಡಿದ್ದೇನೆ. ನಾನು ಉಷ್ಣ ವಿದ್ಯುತ್ ಸ್ಥಾವರಗಳು, ಗಣಿಗಳು ಮತ್ತು ಇತರ ರಚನೆಗಳ ನೆಲಸಮ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದ್ದೇನೆ. ಆದರೆ ಇದು ನಾನು ಬ್ಲಾಸ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಮೊದಲ ವಸತಿ ಕಟ್ಟಡವಾಗಿದೆ. ಕಾರ್ಯಾಚರಣೆಯನ್ನು ಕೈಗೊಳ್ಳಲು ಸಾಕಷ್ಟು ಸಿದ್ಧತೆಗಳನ್ನು ಮಾಡಿದ್ದೇವೆ. ಎಲ್ಲಾ ಸೂಕ್ಷ್ಮ ವಿವರಗಳು ಮತ್ತು ಸಮಸ್ಯೆಗಳ ಬಗ್ಗೆ ಗಮನಹರಿಸಿದ್ದೇವೆ. ಕಟ್ಟಡ ಧ್ವಂಸ ಕಾರ್ಯ ಯಶಸ್ವಿ ಮತ್ತು ಸುರಕ್ಷಿತ ರೀತಿಯಲ್ಲಿ ಕೈಗೊಳ್ಳುವ ವಿಶ್ವಾಸವಿದೆ” ಎಂದು ಚೇತನ್​ ಹೇಳಿದರು.
“ಸ್ಫೋಟಕಗಳನ್ನು ತುಂಬಿದ ನಂತರ, ಮೂರು ಬಾರಿ ತಪಾಸಣೆ ಮಾಡಲಾಗಿದೆ. ಸ್ಫೋಟದ ಸಂದರ್ಭದಲ್ಲಿ ಹಾರುವ ಅವಶೇಷಗಳು ಒಂದು ಪ್ರಮುಖ ಕಾಳಜಿಯಾಗಿದ್ದು ಅದನ್ನು ತಡೆಯಲು, ಸ್ಫೋಟದ ಪ್ರದೇಶವನ್ನು ನಾಲ್ಕು ಪದರಗಳ ಕಬ್ಬಿಣದ ಜಾಲರಿ ಮತ್ತು ಎರಡು ಪದರಗಳ ಕಂಬಳಿಯಿಂದ ಮುಚ್ಚಲಾಗಿದೆ. ಇದರಿಂದಾಗಿ ಯಾವುದೇ ಕಲ್ಲುಮಣ್ಣುಗಳು ಹಿಂದೆ ಹಾರುವುದಿಲ್ಲ, ಆದರೆ ಧೂಳು ಮೇಲೇರಬಹುದು, ಬ್ಲಾಸ್ಟ್‌ ಮಾಡುವ ಗುಂಡಿಯನ್ನು ಒತ್ತುವ ಸಂದರ್ಭದಲ್ಲಿ ಕಟ್ಟಡದಿಂದ ಸುಮಾರು 50-70 ಮೀಟರ್ ದೂರದಲ್ಲಿ ಇರಿಸಲಾಗುವುದು. ಇದೊಂದು ಸರಳ ಪ್ರಕ್ರಿಯೆ” ಎಂದು ಅವರು ವಿವರಣೆ ನೀಡಿದರು.(ಏಜೆನ್ಸೀಸ್​)
ಕೆಲವೇ ಗಂಟೆಗಳಲ್ಲಿ ಧರೆಗೆ ಉರುಳಲಿದೆ ಈ ಬೃಹತ್​ ಅವಳಿ ಗೋಪುರ: 12 ಸೆಕೆಂಡ್​ಗಳ ಕಾರ್ಯಾಚರಣೆ ಹೀಗಿದೆ…

ಕಾರವಾರದಲ್ಲೊಂದು ಇಂಟರೆಸ್ಟಿಂಗ್​ ಲವ್​ ಸ್ಟೋರಿ: ಎರಡು ಮಕ್ಕಳ ಅಮ್ಮನಿಗೂ ಬಿಡದ ಸೆಳೆತ- ಪ್ರೇಯಸಿಗಾಗಿ ಗಾರೆ ಮಾಡಿದ ಇಂಜಿನಿಯರ್​!

ಪತ್ನಿ ಕಾಟ ಸಹಿಸದೇ ತಿಂಗಳಿನಿಂದ ಮರದ ಮೇಲೆ ಪತಿರಾಯ: ಅಕ್ಕ-ಪಕ್ಕದ ಮಹಿಳೆಯರಿಗೆ ಶುರುವಾಯ್ತು ಗ್ರಹಚಾರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 11 =
Remember me
