ವಿಜಯವಾಡ (ಆಂಧ್ರಪ್ರದೇಶ):ಆಂಧ್ರ ಪ್ರದೇಶದ ಆಡಳಿತಾರೂಢ ವೈಎಸ್​ಆರ್​ಸಿಪಿಯ ಶಾಸಕ ಅನಂತ ಬಾಬು ಅಲಿಯಾಸ್​ ಅನಂತ ಉದಯ್​ ಭಾಸ್ಕರ್​ ಅವರ ಕಾರಿನಲ್ಲಿ ಮೃತದೇಹವೊಂದು ಪತ್ತೆಯಾಗಿದ್ದು, ಈ ಸುದ್ದಿ ಆಂಧ್ರದಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿತ್ತು.
ಮೃತ ವ್ಯಕ್ತಿಯನ್ನು ಸುಬ್ರಮಣ್ಯಂ ಎಂದು ಗುರುತಿಸಲಾಗಿದ್ದು,ಕಳೆದ ನಾಲ್ಕೈದು ದಿನಗಳಿಂದ ಆಂಧ್ರದಲ್ಲಿ ಸಂಚಲನ ಮೂಡಿಸಿತ್ತು. ಈ ಕೊಲೆ ರಹಸ್ಯವನ್ನು ಪೊಲೀಸರು ಕೊನೆಗೂ ಭೇದಿಸಿದ್ದಾರೆ. ಆಂಧ್ರದ ಕಾಕಿನಾಡ ಕ್ಷೇತ್ರ ಎಂಎಲ್​ಸಿ ಅನಂತ ಬಾಬು ಅವರ ಕಾರು ಚಾಲಕನಾಗಿದ್ದ ಸುಬ್ರಹ್ಮಣ್ಯ ಅವರ ಕೊಲೆ ಮಾಡಿದ್ದು ತಾವೇ ಎಂದು ಶಾಸಕ ಅನಂತ ಬಾಬು ಒಪ್ಪಿಕೊಂಡಿದ್ದಾರೆ.
ಮಧ್ಯರಾತ್ರಿ ನಡೆದ ಕಾರು ಅಪಘಾತದಲ್ಲಿ ಗಾಯಗೊಂಡಿದ್ದಾನೆ ಎಂದು ಸುಬ್ರಮಣ್ಯಂ ಸಹೋದರನಿಗೆ ಶಾಸಕ ಅನಂತ ಬಾಬು ಮೊದಲು ತಿಳಿಸಿದ್ದರು. ಆದರೆ, ಮಾರನೇ ದಿನ ನಸುಕಿನ ಜಾವ ತಾವೇ ಸುಬ್ರಮಣ್ಯಂ ಮೃತದೇಹವನ್ನು ಅವರ ನಿವಾಸಕ್ಕೆ ಕಾರಿನಲ್ಲಿ ತೆಗೆದುಕೊಂಡು ಬಂದ ಅನಂತ ಬಾಬು ಕಾರನ್ನು ಅಲ್ಲಿಯೇ ಬಿಟ್ಟು ಬೇರೊಂದು ಕಾರಿನಲ್ಲಿ ಮರಳಿದ್ದರು.
ಮೃತದೇಹವನ್ನು ಮನೆಗೆ ತಂದಾಗ ಅಪಘಾತಕ್ಕೆ ಕಾರಣ ಏನು ಎಂಬುದನ್ನು ಸುಬ್ರಮಣ್ಯಂ ಕುಟುಂಬಸ್ಥರು ಶಾಸಕ ಅನಂತ ಬಾಬುರನ್ನು ಪ್ರಶ್ನಿಸಿದರು. ಆದರೆ, ಏನನ್ನೂ ಹೆಚ್ಚಿಗೆ ಹೇಳದೆ ಮೃತದೇಹ ಹಸ್ತಾಂತರಿಸಿ ಹಿಂದಿರುಗಿದರು. ಇದೀಗ ತನಿಖೆಯಿಂದ ನಿಜಾಂಶ ಬಯಲಿಗೆ ಬಂದಿದ್ದು, ಕೊಲೆ ಮಾಡಿರುವುದನ್ನು ಅವರು ಒಪ್ಪಿಕೊಂಡಿದ್ದಾರೆ.
ಕೊಲೆಗೆ ಕಾರಣವೇನು?
ಸುಬ್ರಮಣ್ಯಂ ಅವರ ಪತ್ನಿ ಗರ್ಭಿಣಿಯಾಗಿರುವ ಕಾರಣಕ್ಕೆ ಇತ್ತೀಚೆಗೆ ಆತ ಚಾಲಕ​ ಹುದ್ದೆ ತೊರೆದಿದ್ದರು. ಇದಕ್ಕೂ ಮುನ್ನ ಮದುವೆಯ ವೇಳೆ ಅನಂತಬಾಬು ಸುಬ್ರಮಣ್ಯಂ 20 ಸಾವಿರ ರೂ ಸಾಲ ನೀಡಿದ್ದರು. ಮೇ 19ರಂದು ಸುಬ್ರಮಣ್ಯಂ ಸ್ನೇಹಿತರೊಂದಿಗೆ ಮದ್ಯ ಸೇವಿಸಲು ಹೋಗಿ ಪಾನಮತ್ತರಾಗಿದ್ದರಿಂದ ಅನಂತಬಾಬು ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ.
ಈ ಸಂದರ್ಭದಲ್ಲಿ ಕುಡಿತದ ಬಗ್ಗೆ ತೀವ್ರ ಸಿಟ್ಟುಗೊಂಡು ಮದುವೆ ಸಂದರ್ಭದಲ್ಲಿ ನೀಡಿದ ಸಾಲ ಮರುಪಾವತಿಸುವಂತೆ ಕೇಳಿದ್ದಾರೆ. ಅದಕ್ಕೆ ಸುಬ್ರಹ್ಮಣ್ಯಂ ಇನ್ನೂ ಟೈಂ ಬೇಕು ಎಂದಿದ್ದಾರೆ. ಕುಡಿಯುವುದಕ್ಕೆ ದುಡ್ಡು ಇರುತ್ತದೆ, ಹೀಗೆ ಕುಡಿದು ಕುಡಿದು ಹಾಳಾಗುತ್ತಿಯಾ, ನನ್ನ ಹಣ ವಾಪಸ್​ ಕೊಡಲು ಆಗುವುದಿಲ್ಲ ಎಂದು ಅನಂತಬಾಬು ಗಲಾಟೆ ಮಾಡಿದ್ದಾರೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಈ ಸಂದರ್ಭದಲ್ಲಿ ಅನಂತಬಾಬು ಬಲವಾಗಿ ಸುಬ್ರಮಣ್ಯಂಗೆ ಹೊಡೆದಿದ್ದಾರೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಸುಬ್ರಮಣ್ಯಂನನ್ನು ಅವರೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದರು. ನಂತರ ಅಪಘಾತ ಆಗಿದೆ ಎಂಬಂತೆ ಬಿಂಬಿಸಿ ತಾವೇ ಶವವನ್ನು ಅವರ ಮನೆಗೆ ಕರೆದುಕೊಂಡು ಹೋಗಿದ್ದರು.
ಆದರೆ ಸುಬ್ರಹ್ಮಣ್ಯಂ ಅವರ ಪಾಲಕರಿಗೆ ಅನುಮಾನ ಬಂದು ದೂರು ದಾಖಲಿಸಿದ್ದಾಗ ಸತ್ಯ ಬಹಿರಂಗಗೊಂಡಿದೆ. ಈ ನಡುವೆ ಸುಬ್ರಮಣ್ಯಂ ಕುಟುಂಬ ಸದಸ್ಯರಿಗೆ ಟಿಡಿಪಿ ಮುಖ್ಯಸ್ಥ ಚಂದ್ರಬಾಬು 5 ಲಕ್ಷ ರೂಪಾಯಿ ಆರ್ಥಿಕ ನೆರವು ಘೋಷಿಸಿದ್ದಾರೆ. ಮೃತರ ಕುಟುಂಬ ಸದಸ್ಯರಿಗೆ ನ್ಯಾಯ ದೊರಕಿಸಿಕೊಡಲು ಎಸ್‌ಸಿ ಸಂಘಗಳೊಂದಿಗೆ ಸೇರಿ ನಾವು ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.
ಕನ್ನಡದ ಖ್ಯಾತ ನಟಿಯೊಬ್ಬಳು ಮಂಚಕ್ಕೆ ಕರೆದಿದ್ಲು: ಶಾಕಿಂಗ್​ ಹೇಳಿಕೆ ನೀಡಿದ ನಿರ್ದೇಶಕ

ವಿವಾಹಿತ ಮತ್ತೊಬ್ಬಳ ಜತೆ ಲೈಂಗಿಕ ಸಂಬಂಧ ಹೊಂದಿದರೆ ಅದು ಶಿಕ್ಷಾರ್ಹ ಅಪರಾಧವಲ್ಲ- ಕಾನೂನು ಹೀಗೆ ಹೇಳಿದೆ…

ತಾಳಿ ಕಟ್ಟಿಸಿಕೊಳ್ಳದೇ ವಧುವಿನ ಹೈಡ್ರಾಮಾ: ಇವ್ನು ಬೇಡ, ಅವ್ನೇ ಬೇಕು ಎಂದು ಕುಸಿದುಬಿದ್ದ ಮೈಸೂರಿನ ವಧು

ಖ್ಯಾತ ಹಿನ್ನೆಲೆ ಗಾಯಕಿ ಸಂಗೀತಾ ಇನ್ನಿಲ್ಲ: ಇವರ ಹಾಡಿಗೆ ಮನಸೋತು ಚಿನ್ನದ ಸರವನ್ನೇ ಕೊಟ್ಟಿದ್ದ ಜಯಲಲಿತಾ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × 2 =
Remember me
