ಮುಂಬೈ:ಕೆಲ ದಿನಗಳಿಂದ ನಡೆಯುತ್ತಿದ್ದ ಮಹಾರಾಷ್ಟ್ರ ಸರ್ಕಾರದ ಬಿಕ್ಕಟ್ಟು ನಿನ್ನೆ ಕೊನೆಗೂ ಅಂತ್ಯಹಾಡಿದ್ದು, ಶಿವಸೇನೆಗೆ ರೆಬೆಲ್​ ಶಾಸಕ ಏಕನಾಥ್​ ಶಿಂಧೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದಾರೆ. ಕೊನೆ ಕ್ಷಣದವರೆಗೂ ಕುತೂಹಲ ಮೂಡಿಸಿದ್ದ ಈ ರಾಜಕೀಯ ಆಟದಲ್ಲಿ ಶಿಂಧೆ ಅವರಿಗೆ ಸಿಎಂ ಪಟ್ಟ ಒಲಿದಿದ್ದು, ಪ್ರಮಾಣ ವಚನವನ್ನೂ ಸ್ವೀಕರಿಸಲಾಗಿದೆ.
ಇದೀಗ ಕುತೂಹಲ ಎಂಬಂತೆ, ಏಕನಾಥ ಶಿಂಧೆ ಅವರು ತಮ್ಮ ಟ್ವಿಟರ್ ಖಾತೆಯಲ್ಲಿರುವ ಪ್ರೊಫೈಲ್​ ಫೋಟೋವನ್ನು ಬದಲಾಯಿಸಿದ್ದಾರೆ. ತಮ್ಮ ಫೋಟೋ ತೆಗೆದು ಆ ಜಾಗದಲ್ಲಿ ಮಾಜಿ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರ ತಂದೆ ಬಾಳಾಸಾಹೇಬ್ ಠಾಕ್ರೆಯವರ ಫೋಟೋ ಹಾಕಿಕೊಂಡಿದ್ದಾರೆ.
ಅಷ್ಟಕ್ಕೂ ಇದಕ್ಕೆ ಕಾರಣವೂ ಇದೆ. ಅದೇನೆಂದರೆ ಬಾಳಾಸಾಹೇಬ್ ಠಾಕ್ರೆಯವರು ಶಿವಸೇನೆ ಸಂಸ್ಥಾಪಕ, ಹಿಂದೂತ್ವ ವಾದಿ ಮತ್ತು ಮರಾಠಿಗರ ಹೆಮ್ಮೆಯ ನಾಯಕ. ಅಷ್ಟೇ ಅಲ್ಲದೇ, ಇವರು ಏಕನಾಥ ಶಿಂಧೆ ಅವರ ರಾಜಕೀಯ ಗುರು. ಆಟೋ ಚಾಲಕನಾಗಿದ್ದ ತಾವು ಈ ಮಟ್ಟಕ್ಕೆ ಬೆಳೆಯಬೇಕಾದರೆ ಅದಕ್ಕೆ ಬಾಳಾಸಾಹೇಬ್​ ಠಾಕ್ರೆಯವರೂ ಕಾರಣ ಎಂದು ಶಿಂಧೆ ಈ ಮೊದಲೇ ಹೇಳಿಕೊಂಡಿದ್ದರು.
ಆದ್ದರಿಂದ ಇದೀಗ ಪ್ರೊಫೈಲ್​ ಚಿತ್ರ ಬದಲಾಯಿಸಿದ್ದಾರೆ. ಈ ಮೂಲಕ, ತಮ್ಮ ಗುರುವಿಗೆ ನಮನ ಸಲ್ಲಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಬೆಂಬಲದೊಂದಿಗೆ ಶಿವಸೇನೆ ಬಂಡಾಯ ಶಾಸಕರು ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದರೆ, ಪಕ್ಷವನ್ನು ಹಿಡಿತಕ್ಕೆ ತರುವ ಪ್ರಯತ್ನ ನಡೆಸಲಾಗುತ್ತಿದೆ.
ಆಟೋಡ್ರೈವರ್​ನಿಂದ ‘ಮಹಾ’ ಸಿಎಂ ಖುರ್ಚಿಯವರೆಗೆ… ಬಾಳಾಸಾಹೇಬರ ಶಿಷ್ಯನ ಕುತೂಹಲದ ಪಯಣವಿದು…

ಮಹಾರಾಷ್ಟ್ರದ ಮುಖ್ಯಮಂತ್ರಿ ಖುರ್ಚಿಗೆ ಮಹಾ ಟ್ವಿಸ್ಟ್​: ಕೊನೆ ಕ್ಷಣದಲ್ಲಿ ಬದಲಾಯ್ತು ನಿರ್ಧಾರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 7 =
Remember me
