ಮುಂಬೈ :ಪ್ರೇಯಸಿ ಕೈಕೊಟ್ಟ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಕೇರಳದ ಭಗ್ನಪ್ರೇಮಿಯೊಬ್ಬನನ್ನು ಟ್ವಿಟರ್​ ಉಳಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.
ಡಿಪ್ಲೋಮಾ ಯುವಕನೊಬ್ಬನಿಗೆ ಆತನ ಸ್ನೇಹಿತೆ ಕೈಕೊಟ್ಟಿದ್ದಾಳೆ. ಮದುವೆಯಾಗಲು ನಿರಾಕರಿಸಿದ್ದಾಳೆ. ಇದರಿಂದ ಬೇಸತ್ತ ಯುವಕ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಟ್ವಿಟರ್‌ ನಲ್ಲಿ ‘ಸಾಯುತ್ತೇನೆ’ ಎಂದು ಪೋಸ್ಟ್ ಹಾಕಿದ್ದಾ‌ನೆ.
ಕೇರಳದ ಈ ಯುವಕ ಮುಂಬೈನ ದಾದರ್‌ನಲ್ಲಿರುವ ಹೋಟೆಲ್‌ಗೆ ರೂಮ್ ಬುಕ್ ಮಾಡಿದ್ದನು. ಅಲ್ಲಿಂದಲೇ ಆತ ಪೋಸ್ಟ್​ ಮಾಡಿದ್ದಾನೆ. ಇದನ್ನು ಗಮನಿಸಿದ ಪೊಲೀಸರು ಕೂಡಲೇ ಟ್ವಿಟರ್​ಗೆ ಈ ಮಾಹಿತಿ ನೀಡಿದ್ದಾರೆ. ಅಲ್ಲಿಂದ ಆತ ಎಲ್ಲಿದ್ದಾನೆ ಎಂಬ ಬಗ್ಗೆ ತನಿಖೆ ನಡೆಸಲಾಗಿದೆ. ನಂತರ ಹೋಟೆಲ್​ನಲ್ಲಿ ಇರುವುದು ತಿಳಿದಿದೆ.
ಇನ್ಸ್‌ಪೆಕ್ಟರ್ ಸಂಜಯ್ ಗೋವಿಲ್ಕರ್ ಮತ್ತು ಹೋಟೆಲ್ ಮ್ಯಾನೇಜರ್ ನೇತೃತ್ವದ ತಂಡ ನಕಲಿ ಕೀಲಿಯೊಂದಿಗೆ ಕೊಠಡಿಯನ್ನು ತೆರೆದಿದೆ. ಆ ಸಮಯದಲ್ಲಿ ಯುವಕ ಕೈಯಲ್ಲಿ ಚಾಕು ಹಿಡಿದು ನಿಂತಿದ್ದ. ಕೂಡಲೇ ಆತನನ್ನು ರಕ್ಷಣೆ ಮಾಡಲಾಗಿದೆ. ಖಿನ್ನತೆಗೆ ಜಾರಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಕೌನ್ಸೆಲಿಂಗ್​ ನೀಡಲಾಗಿದೆ. ಯುವಕ ಈಗ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಯುವಕರೇ ಹುಷಾರ್​! ಫಸ್ಟ್​ ನೈಟೇ ಶಾಕ್ ಕೊಟ್ಟ ಸುಂದರಿ​- ಟೆರೇಸ್​ ಹಾರಿ ಎಸ್ಕೇಪ್​!

VIDEO: ಸಚಿವರು ಹುಟ್ಟು ಹಾಕಿದ್ದೇ ಹಾಕಿದ್ದು, ದೋಣಿ ಮಾತ್ರ ಕದಲಲೇ ಇಲ್ಲ: ಜಾಲತಾಣದಲ್ಲಿ ಭಾರಿ ಟ್ರೋಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − six =
Remember me
