ಯೂಕ್ರೇನ್​:ಯೂಕ್ರೇನ್​ ಮೇಲೆ ರಷ್ಯಾ ದಾಳಿ ನಡೆಸಿ ಮೂರು ತಿಂಗಳು ಗತಿಸಿದೆ. ಇನ್ನೂ ಸಮರ ಮುಗಿದಿಲ್ಲ. ರಷ್ಯಾ ಪಡೆ ದಾಳಿಯನ್ನು ಮುಂದುವರೆಸುತ್ತಿದ್ದು, ಇಡೀ ದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ.
ಈ ನಡುವೆಯೇ, ಸುಮಾರು ಎರಡೂವರೆ ಲಕ್ಷ ಭಾರತೀಯರು ಈ ಯುದ್ಧದಿಂದ ಕೆಲಸ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ! ಇದಕ್ಕೆ ಕಾರಣ, ರಷ್ಯಾದ ವಜ್ರ ಗಣಿಗಾರರಿಂದ ಸರಬರಾಜುಗಳಾದ ವಜ್ರ ಕತ್ತರಿಸುವ ಮತ್ತು ಪಾಲಿಶ್ ಮಾಡುವ ಉದ್ಯಮಕ್ಕೆ ಈ ಯುದ್ಧದಿಂದ ಭಾರೀ ಹೊಡೆತ ಬಿದ್ದಿದೆ. ರಷ್ಯಾ ಸರ್ಕಾರದ ಭಾಗಶಃ ಒಡೆತನದಲ್ಲಿರುವ ಅತಿದೊಡ್ಡ ವಜ್ರದ ಗಣಿ ಅಲ್ರೋಸಾದಿಂದ ಕಚ್ಚಾ ವಜ್ರಗಳ ಸರಬರಾಜು ಸ್ಥಗಿತಗೊಂಡಿದೆ. ಹೀಗಾಗಿ ಸೂರತ್‌ನ ವಜ್ರ ಪಾಲಿಶ್‌ ಮತ್ತು ಕತ್ತರಿಸುವ ಘಟಕಗಳಲ್ಲಿ ಕೆಲಸ ಇಲ್ಲದಾಗಿದೆ. ಈ ಹಿನ್ನೆಲೆಯಲ್ಲಿ ಸುಮಾರು ಎರಡೂವರೆ ಲಕ್ಷ ಕಾರ್ಮಿಕರಿಗೆ ಮೇ 16 ರಿಂದ 15 ದಿನಗಳವರೆಗೆ ರಜೆ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಭವಿಷ್ಯ ಅತಂತ್ರವಾಗಿದ್ದು, ಈ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಸೂರತ್‌ನಲ್ಲಿರುವ ವಜ್ರದ ಘಟಕಗಳಲ್ಲಿ ಸುಮಾರು 10 ಲಕ್ಷ ಜನರು ಕೆಲಸ ಮಾಡುತ್ತಿದ್ದಾರೆ. ಉಕ್ರೇನ್‌-ರಷ್ಯಾ ಯುದ್ಧದಿಂದಾಗಿ ಇದೀಗ ಇವರಿಗೆ ದುಡಿಮೆಯೇ ಇಲ್ಲದಂತಾಗಿದೆ. ಅಮೆರಿಕ ಮತ್ತು ಯುರೋಪ್​ಗಳಲ್ಲಿ ಭಾರತದಲ್ಲಿ ಪಾಲಿಶ್ ಮಾಡಿದ ರಷ್ಯಾದ ವಜ್ರಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದ್ದರಿಂದ ಕಂಪನಿಗಳು ನಗದು ಹರಿವು ಮತ್ತು ಪೂರೈಕೆಯಲ್ಲಿ ಕಡಿತ ಉಂಟಾಗಿದೆ ಎಂದು ಗುಜರಾತ್ ಡೈಮಂಡ್ ವರ್ಕರ್ಸ್ ಯೂನಿಯನ್ ಅಧ್ಯಕ್ಷ ರಮೇಶ್ ಜಿಲೇರಿಯಾ ಬೇಸರ ವ್ಯಕ್ತಪಡಿಸಿದ್ದಾರೆ.
ಈ ನಡುವೆ, ‘ಡೈಮಂಡ್ ವರ್ಕರ್ಸ್ ಯೂನಿಯನ್ ಗುಜರಾತ್‌’ನ ಸೂರತ್ ಘಟಕವು ಮೇ 4 ರಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ವಜ್ರ ಕಾರ್ಮಿಕರಿಗೆ ಆರ್ಥಿಕ ನೆರವು ಕೋರಿ ಮನವಿ ಸಲ್ಲಿಸಿದೆ.
ಪಕ್ಕದ್ಮನೆ ಆಂಟಿ ಮೇಲೆ ಕಣ್ಣು ಹಾಕಿದ ಕಿರಾತಕ, ಗಂಡನಿಗೆ ಕೆಲ್ಸ ಕೊಡಿಸಿ ಆಸೆ ತೀರಿಸಿಕೊಂಡ: ಹುಬ್ಬಳ್ಳಿ ಪೊಲೀಸರೂ ಗಪ್​ಚುಪ್​?

ಗೂಗಲ್​ ಮ್ಯಾಪ್​ ಎಡವಟ್ಟು, ‘ನೇರವಾಗಿ ಹೋಗಿ…’ ಎಂಬ ಮಾತು ಕೇಳಿ ನಡೆದದ್ದು ಭಾರಿ ದುರಂತ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
