ಮಿಜೋರಾಂ:ಜನಸಂಖ್ಯೆ ಹೆಚ್ಚುತ್ತಿರುವ ಈ ದಿನಗಳಲ್ಲಿ ಗಂಡಾಗಲಿ, ಹೆಣ್ಣಾಗಲೀ ಒಂದೇ ಮಗುವಿರಲಿ ಎಂದು ಕೆಲ ದೇಶಗಳು ಹೇಳುತ್ತಿದ್ದರೆ, ಇಲ್ಲೊಬ್ಬ ಸಚಿವ ಹೆಚ್ಚು ಮಕ್ಕಳನ್ನು ಹೇರಿ. ಹೀಗೆ ಮಾಡಿದರೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಘೋಷಣೆ ಮಾಡಿ ಇದೀಗ ಭಾರಿ ವಿವಾದಕ್ಕೆ ಈಡಾಗಿದ್ದಾರೆ.
ಈಶಾನ್ಯ ರಾಜ್ಯ ಮಿಜೋರಾಂನ ಕ್ರೀಡಾ ಸಚಿವ ರಾಬರ್ಟ್ ರೊಮಾವಿಯಾ ಈ ಮಾತನ್ನು ಹೇಳಿದ್ದಾರೆ. ಎಷ್ಟು ಮಕ್ಕಳನ್ನು ಹೇರಬೇಕು ಎಂದು ಸಚಿವರು ಹೇಳಲಿಲ್ಲ. ಆದರೆ ಜನಸಂಖ್ಯೆ ನಿಯಂತ್ರಣಕ್ಕೆ ದೇಶಗಳು ಯೋಜನೆ ರೂಪಿಸುತ್ತಿರುವ ಈ ಸಮಯದಲ್ಲಿ ಇಂಥದ್ದೊಂದು ಹೇಳಿಕೆ ಬಂದಿರುವುದು ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಇದೇನು ವಿವಾದಕ್ಕೆ ಕಾರಣವಾಗುವ ಅಂಶವಲ್ಲ. ನಾನು ಹೇಳಿರುವುದು ನಮ್ಮ ದೇಶದ ಒಳಿತಿಗೆ ಎಂದಿದ್ದಾರೆ ಸಚಿವರು. ಏಕೆಂದರೆ ಮಿಜೋ ಸಮುದಾಯಗಳಲ್ಲಿ ಜನಸಂಖ್ಯೆ ಕಡಿಮೆ ಇದೆ. ಇದನ್ನು ಹೆಚ್ಚಿಸುವ ಕಾರಣದಿಂದ ಹೇಳಿಕೆ ನೀಡಿದ್ದೇನೆ. ಮಿಜೋ ಬುಡಕಟ್ಟು ಪಂಗಡದ ಉಳಿವು ಮತ್ತು ಅಭಿವೃದ್ಧಿಗೆ ಜನಸಂಖ್ಯೆ ಹೆಚ್ಚಿಸುವ ಅಗತ್ಯವಿದೆ. ನಾನು ಈಗಲೂ ಹೇಳಿಕೆಗೆ ಬದ್ಧನಾಗಿದ್ದು, ಹೆಚ್ಚು ಮಕ್ಕಳನ್ನು ಹೊಂದಿರುವ ಪೋಷಕರಿಗೆ ಒಂದು ಲಕ್ಷ ನೀಡಲಾಗುವುದು. ಮಾತ್ರವಲ್ಲದೇ ಟ್ರೋಫಿ ಮತ್ತು ಪ್ರಮಾಣ ಪತ್ರವನ್ನು ನೀಡಲಾಗುತ್ತದೆ ಎಂದಿದ್ದಾರೆ.
ಅಪ್ರಾಪ್ತ ಗಂಡನಿಂದ ಆಂಟಿಗೆ ಮಗು! ಬಾಲಕ ಪತಿಯ ಜೀವನ ನಿಮ್‌ ಕೈಗೆ ಕೊಡಲಾಗದು ಎಂದ ಹೈಕೋರ್ಟ್‌

ಇಲ್ಲಿ ಅನಿಲ, ಅಲ್ಲಿ ಸುನೀಲ- ಎರಡೆರಡು ಸರ್ಕಾರಿ ಸಂಬಳ ಪಡೀತಿದ್ದೋನ ಇಂಟರೆಸ್ಟಿಂಗ್‌ ಸ್ಟೋರಿ ಇದು…

https://www.vijayavani.net/s-british-woman-abbie-bela-says-she-fell-in-love-with-alien/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 18 =
Remember me
