ಪಣಜಿ (ಗೋವಾ):ಮಹಾರಾಷ್ಟ್ರ ಸರ್ಕಾರದ ಬಿಕ್ಕಟ್ಟು ಅಂತ್ಯಗೊಂಡು ರೆಬೆಲ್​ ಶಾಸಕ ಏಕನಾಥ ಶಿಂಧೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಎರಡು ದಿನಗಳೇ ಕಳೆದಿವೆ. ಇದಕ್ಕೂ ಮೊದಲು ಅಸ್ಸಾಂನ ಗುವಾಹಟಿಯಲ್ಲಿ ಶಿಂಧೆ ನೇತೃತ್ವದ ಬಂಡಾಯ ನಾಯಕರ ಗುಂಪು ಬೀಡು ಬಿಟ್ಟಿತ್ತು. ಅಲ್ಲಿಂದ ಅವರು ಗೋವಾದ ರೆಸಾರ್ಟ್​ನಲ್ಲಿ ತಂಗಿದ್ದರು. ಈ ಸಂದರ್ಭದಲ್ಲಿ ತಾವು ಈ ಗುಂಪಿನವರು ಎಂದು ಹೇಳಿಕೊಂಡು ಓರ್ವ ಪುರುಷ ಮತ್ತು ಓರ್ವ ಮಹಿಳೆ ಹೋಟೆಲ್​ನಲ್ಲಿ ಉಳಿದುಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಏಕನಾಥ್​ ಶಿಂಧೆ ಮತ್ತು ಅವರ ಬಣದ 50 ಶಾಸಕರು ಉಳಿದುಕೊಂಡಿದ್ದ ಗೋವಾದ ಡೊನಾ ಪೌಲಾದ ಸ್ಟಾರ್​ ಹೋಟೆಲ್​ನಲ್ಲಿ ತಾವು ರಾಜಕೀಯ ಪಕ್ಷಕ್ಕೆ ಸೇರಿದವರು ಎಂದು ಸುಳ್ಳು ಹೇಳಿ ವಾಸ್ತವ್ಯ ಹೂಡಿದ್ದ ಮಹಿಳೆ, ಓರ್ವ ವ್ಯಕ್ತಿಯನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.
ರೆಬೆಲ್​ ಶಾಸಕರು ಹೋಟೆಲ್​ಗೆ ಉಳಿದುಕೊಂಡಿದ್ದ ಸಂದರ್ಭದಲ್ಲಿ ಬಿಗಿ ಭದ್ರತೆ ನೀಡಲಾಗಿತ್ತು. ಸಾರ್ವಜನಿಕರು, ಮಾಧ್ಯಮದವರಿಗೂ ಪ್ರವೇಶ ನಿಷೇಧಿಸಲಾಗಿತ್ತು. ಆದರೆ ಈ ಜೋಡಿ, ತಾವು ರೆಬೆಲ್​ ಶಾಸಕರ ಗುಂಪಿಗೆ ಸೇರಿದವರು ಎಂದು ಸುಳ್ಳು ಹೇಳಿ ಹೋಟೆಲ್​ನಲ್ಲಿ ಒಂದು ದಿನ ತಂಗಿದ್ದರು. ತಪಾಸಣೆ ನಡೆಸಿದಾಗ ಸುಳ್ಳು ದಾಖಲೆ ನೀಡಿದ್ದು ಗೊತ್ತಾಗಿ ಮಹಿಳೆ ಮತ್ತು ಪುರುಷನನ್ನು ಪೊಲೀಸರು ಬಂಧಿಸಿದ್ದಾರೆ.
ಹೋಟೆಲ್​ ಸುತ್ತ ನಿರ್ಬಂಧ ಹೇರಿದಾಗಲೂ ಈ ಜೋಡಿ ಬಂದದ್ದು ಹೇಗೆ ಎಂಬ ಬಗ್ಗೆ ಈಗ ತನಿಖೆ ಶುರುವಾಗಿದೆ. ಅದೂ ಅಲ್ಲದೇ ಒಂದು ದಿನ ಹೋಟೆಲ್‌ನಲ್ಲಿ ಆರಾಮಾಗಿ ಉಳಿದುಕೊಂಡರೂ ಯಾರ ಗಮನಕ್ಕೆ ಬರಲಿಲ್ಲ ಹೇಗೆ ಎಂಬ ಬಗ್ಗೆ ಪೊಲೀಸರೂ, ಹೋಟೆಲ್​ನವರೂ ತಲೆ ಕೆಡಿಸಿಕೊಂಡಿದ್ದಾರೆ. ಬಂಧಿತರ ಹೆಸರು, ಮಾಹಿತಿಯನ್ನು ಪೊಲೀಸರು ಸದ್ಯ ಬಹಿರಂಗಪಡಿಸಿಲ್ಲ. ಶಿಂಧೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಗೋವಾದಲ್ಲಿ ತಂಗಿದ್ದ ಶಿವಸೇನೆ ಬಂಡಾಯ ಶಾಸಕರು ನಿನ್ನೆ ಮಹಾರಾಷ್ಟ್ರಕ್ಕೆ ಮರಳಿದ್ದಾರೆ.
ತಮ್ಮ ಫೋಟೋ ತೆಗೆದು ಟ್ವಿಟರ್​ನಲ್ಲಿ ಮಾಜಿ ಸಿಎಂ ತಂದೆಯ ಫೋಟೋ ಹಾಕಿಕೊಂಡ ನೂತನ ಮುಖ್ಯಮಂತ್ರಿ!

ಟೈಲರ್​ ರುಂಡ ಕಡಿದವನ ಬೈಕ್​​ ನಂಬರ್​ ಬಿಚ್ಚಿಟ್ಟ ಭಯಾನಕ ಕಥೆ! ಈ ಸಂಖ್ಯೆ ಪಡೆಯಲು ಲಕ್ಷ ಲಕ್ಷ ನೀಡಿದ್ದ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + sixteen =
Remember me
