ಮಥುರಾ (ಉತ್ತರ ಪ್ರದೇಶ):ಮಹಾರಾಷ್ಟ್ರ ಪಾಲ್ಘರ್​ನಲ್ಲಿ ನಡೆದ ಸಾಧುಗಳ ಹತ್ಯೆ, ರಾಜಸ್ಥಾನದಲ್ಲಿ ನಡೆದ ಸಾಧುಗಳ ಕೊಲೆ ಇವೆಲ್ಲವುಗಳ ನೆನಪು ಮಾಸುವ ಮೊದಲೇ ಉತ್ತರ ಪ್ರದೇಶದ ಮಥುರಾದಲ್ಲಿ ನಿಗೂಢವಾಗಿ ಸಾಧುಗಳಿಬ್ಬರು ಮೃತಪಟ್ಟಿದ್ದಾರೆ.
ಚಹ ಸೇವನೆ ಮಾಡಿದ್ದ ಮೂವರು ಸಾಧುಗಳ ಪೈಕಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ಸಾಧುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಹದಲ್ಲಿ ವಿಷ ಹಾಕಿ ನೀಡಿರುವುದು ಸಾವಿಗೆ ಕಾರಣ ಎನ್ನಲಾಗಿದ್ದು, ಈ ಬಗ್ಗೆ ಇನ್ನಷ್ಟು ತನಿಖೆ ನಡೆಯುತ್ತಿದೆ.
ಗುಲಾಬ್ ಸಿಂಗ್ ಮತ್ತು ಶ್ಯಾಮ್ ಸುಂದರ್ ಎಂಬ ಇಬ್ಬರು ಸಾಧುಗಳು ಮೃತಪಟ್ಟವರು. ರಾಮ್ ಬಾಬು ಎಂಬ ಮತ್ತೊಬ್ಬ ಸಾಧುವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 60 ವರ್ಷದ ಗುಲಾಬ್ ಸಿಂಗ್ ಚಹಾ ಕುಡಿದ ಸ್ಥಳದಲ್ಲೇ ಮೃತಪಟ್ಟರೆ, 61 ವರ್ಷದ ಶ್ಯಾಮ್ ಸುಂದರ್ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಹೇಳಲಾಗಿದೆ.
ಇದನ್ನೂ ಓದಿ:ಇಲ್ಲಿ ಇನ್ಮುಂದೆ ಮಕ್ಕಳನ್ನು ಅಪ್ಪ- ಅಮ್ಮ ಹೊಡೆದ್ರೆ ಅಷ್ಟೇ ಕಥೆ… ನೇರ ಜೈಲಿಗೆ!
ತಾವು ತಂಗಿದ್ದ ಪ್ರದೇಶದಲ್ಲಿಯೇ ಇವರು ಚಹ ತರಿಸಿಕೊಂಡು ಸೇವಿಸಿದ್ದರು. ಚಹದಲ್ಲಿ ವಿಷ ಬೆರೆಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಆದರೆ ಈ ಬಗ್ಗೆ ಇನ್ನಷ್ಟು ತನಿಖೆ ಮಾಡಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಧಿವಿಜ್ಞಾನದ ತಂಡವು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದು, ಮೃತ ವ್ಯಕ್ತಿಗಳ ಮರಣೋತ್ತರ ಪರೀಕ್ಷೆಯನ್ನು ವೈದ್ಯರ ತಂಡವು ನಡೆಸುತ್ತಿದೆ. ಮೃತಪಟ್ಟ ಗುಲಾಬ್ ಸಿಂಗ್ ಕೋಸಿ ಕಲನ್ ಪೊಲೀಸ್ ಠಾಣೆ ವ್ಯಾಪ್ತಿಯ ದಲೌತಾ ಗ್ರಾಮದವರಾಗಿದ್ದು, ಶ್ಯಾಮ್ ಸುಂದರ್ ಮತ್ತು ರಾಮ್ ಬಾಬು ಅವರು ಗೋವರ್ಧನ್ ಪೊಲೀಸ್ ಠಾಣೆ ವ್ಯಾಪ್ತಿಯ ಪೈಂತಾ ಗ್ರಾಮದ ನಿವಾಸಿಗಳು.
ಆಶ್ರಮದೊಳಗೆ ಸಾಧುಗಳಿಗೆ ವಿಷ ನೀಡಲಾಗಿದೆ ಎಂದು ಮೃತ ಗೋಪಾಲ್‌ ಅವರ ಸೋದರರು ಆರೋಪಿಸಿದ್ದಾರೆ.
ಕೇರಳದ ಮುಸ್ಲಿಂ ಬಾಹುಳ್ಯದ ಜಿಲ್ಲೆಯಲ್ಲಿ ಬಿಜೆಪಿಯಿಂದ ಹೀಗೊಂದು ದಾಖಲೆ!

ಸತ್ರೂ ನಾನು ಆ ಪಕ್ಷ ಸೇರಲ್ಲ ಎಂದು ಕೆಂಡಾಮಂಡಲನಾದ ಸಂಸದ…

ಸದಾ ನಗಿಸುವ ಹಿಂದಿದೆ ಡ್ರಗ್ಸ್​ ಮುಖ! ದಂಪತಿ ಒಪ್ಪಿಕೊಂಡರು ಸತ್ಯ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:8 − six =
Remember me
