ರೂರ್ಕಿ (ಉತ್ತರಾಖಂಡ):ಇದು ಇಬ್ಬರು ಹೆಂಡಿರ ಮುದ್ದಿನ ಗಂಡನ ಕಥೆ. ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ರೂರ್ಕಿಯಲ್ಲಿರುವ ಪೊಲೀಸ್ ಠಾಣೆ ಏರಿರುವ ಈ ಘಟನೆ ಬಹು ಕುತೂಹಲವಾಗಿದೆ. ಸಹೋದರಿಯರಿಬ್ಬರು ಒಬ್ಬನಿಗಾಗಿ ಕಾದಾಟ ನಡೆಸುತ್ತಿರುವ ಘಟನೆ ಇದು.
ಅಷ್ಟಕ್ಕೂ ಆಗಿರುವುದು ಏನೆಂದರೆ, ಮಾವನಾ ನಗರದ ವ್ಯಕ್ತಿಯೊಬ್ಬ ಈ ಘಟನೆಯ ಹೀರೋ. ಈತ 10 ವರ್ಷಗಳ ಹಿಂದೆ ಅಂಬರ್​ ತಾಲಾಬ್​ ಊರಿನ ಯುವತಿಯನ್ನು ಮದುವೆಯಾಗಿದ್ದ. ಇವರಿಗೆ ನಾಲ್ಕು ಮಂದಿ ಮಕ್ಕಳು ಇದ್ದಾರೆ.
ನಾಲ್ಕು ಮಕ್ಕಳಾಗುತ್ತಿದ್ದಂತೆಯೇ ಪತ್ನಿಯ ಮೇಲೆ ಇಂಟರೆಸ್ಟ್​ ಕಳೆದುಕೊಂಡ ಈ ಪತಿಮಹಾಶಯನಿಗೆ ಪತ್ನಿಯ ಚಿಕ್ಕಮ್ಮನ ಮಗಳ ಮೇಲೆ ಮೋಹವಾಗಿದೆ. ಇದೇ ವಿಷಯವಾಗಿ ದಂಪತಿ ನಡುವೆ ಜಗಳವಾಗಿದೆ. ಜಗಳ ವಿಕೋಪಕ್ಕೆ ಹೋಗಿ ಪತ್ನಿ ತವರು ಸೇರಿದ್ದಾಳೆ.
ರೋಗಿ ಬಯಸಿದ್ದೂ ಹಾಲು ಅನ್ನ.. ವೈದ್ಯ ಹೇಳಿದ್ದೂ… ಅನ್ನೋ ಗಾದೆಮಾತಿನಂತೆ ಅತ್ತ ಪತ್ನಿ ತವರಿಗೆ ಹೋಗುತ್ತಿದ್ದಂತೆಯೇ ಇತ್ತ ಪತ್ನಿಯ ತಂಗಿ (ಚಿಕ್ಕಮ್ಮನ ಮಗಳು) ಜತೆ ಗಂಡ ಪರಾರಿ.
ನಂತರ ಪತ್ನಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ತನ್ನ ತಂಗಿಯನ್ನು ಗಂಡ ಹಾರಿಸಿಕೊಂಡು ಹೋಗಿದ್ದಾನೆ ಎಂದು ದೂರಿದ್ದಾಳೆ. ನಂತರ ಪೊಲೀಸರು ತನಿಖೆ ಕೈಗೊಂಡಾಗ ಅವರಿಬ್ಬರೂ ಒಂದೇ ಕೋಣೆಯಲ್ಲಿ ಇರುವುದು ಪತ್ತೆಯಾಗಿದೆ.
ಇದೀಗ ಈಕೆ ನನ್ನ ಗಂಡನನ್ನು ಬಿಟ್ಟುಕೊಡು ಎಂದು ತಂಗಿಯ ಬಳಿ ಜಗಳ ಕಾದಿದ್ದರೆ, ನಾವು ಮದುವೆಯಾಗಿದ್ದೇವೆ. ಈತ ನನ್ನ ಗಂಡ ಎಂದು ತಂಗಿ ಹೇಳುತ್ತಿದ್ದಾಳೆ. ಅಕ್ಕ-ತಂಗಿಯ ಜಗಳ ಈಗ ಪುನಃ ಠಾಣೆ ಮೆಟ್ಟಿಲೇರಿದೆ.
ಒಬ್ಬನಿಗಾಗಿ ಇಬ್ಬರೂ ಕಿತ್ತಾಟ ಶುರು ಮಾಡಿದ್ದು, ಇಬ್ಬರನ್ನೂ ಸಮಾಧಾನಪಡಿಸುವುದು ಪೊಲೀಸರಿಗೆ ತಲೆನೋವಾಗಿದೆಯಂತೆ. ಕಾನೂನಿನ ಪ್ರಕಾರ ಮೊದಲಿನಾಕೆಯೇ ಕಾನೂನುಬದ್ಧ ಪತ್ನಿಯಾಗಿದ್ದರೂ, ಗಂಡ ಅವಳ ಬಳಿ ಹೋಗಲು ಸಿದ್ಧವಿಲ್ಲದೇ ಇರುವುದು ಒಂದೆಡೆಯಾದರೆ ಇಬ್ಬರೂ ಇವನಿಗಾಗಿ ಕಿತ್ತಾಟ ನಡೆಸುತ್ತಿರುವುದು ಇನ್ನೊಂದೆಡೆ. ಅಂತಿಮವಾಗಿ ಏನಾಗುವುದೋ ಕಾದು ನೋಡಬೇಕಿದೆ.
ಸ್ನೇಹಿತೆಯ ದೈಹಿಕ ಸಂಪರ್ಕ ಮಾಡಿದಾಗ ಕೆಲವು ಅನುಮಾನ ಶುರುವಾಗಿದೆ; ಹೇಗೆ ಬಗೆಹರಿಸಿಕೊಳ್ಳಲಿ?

ಅಮ್ಮನಿಗಾಗಿ ಬದುಕಬೇಕೆಂದು ಹುಡುಗನನ್ನು ನಿರಾಕರಿಸಿ ಈಗ ಒದ್ದಾಡುತ್ತಿದ್ದೇನೆ- ಏನು ಮಾಡಲಿ?

ಪಿಯುಸಿ ಪಾಸ್​ ಆಗಿರುವಿರಾ? ಹಾಗಿದ್ದರೆ ಬೆಂಗಳೂರಿನಲ್ಲಿ ಐಸಿಎಂಆರ್​ನಲ್ಲಿವೆ ಉದ್ಯೋಗ

VIDEO: ಟಿ.ವಿ ನೇರಪ್ರಸಾರದ ಮೂಲಕ ಕರೊನಾ ಲಸಿಕೆ ಪಡೆದ ಅಮೆರಿಕ ಉಪಾಧ್ಯಕ್ಷೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × one =
Remember me
