ಮುಂಬೈ:ಮನೆಯೆದುರು ಆಟವಾಡುತ್ತಿದ್ದ ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಒಬ್ಬ ಕಾಮುಕ ಯುವಕನಿಗೆ 20 ವರ್ಷಗಳ ಜೈಲುಶಿಕ್ಷೆಯನ್ನು ಮುಂಬೈ ಕೋರ್ಟ್​ ನೀಡಿದೆ. ಈತ ಅತ್ಯಾಚಾರ ಎಸಗುತ್ತಿದ್ದ ಸಂದರ್ಭದಲ್ಲಿ ಯಾರೂ ಬರದಂತೆ ನೋಡಿಕೊಳ್ಳುವ ಸಲುವಾಗಿ ಕಾಯುತ್ತಿದ್ದವನೂ ಸಮಾನ ಅಪರಾಧಿ ಎಂದಿರುವ ಕೋರ್ಟ್​ ಅವನಿಗೂ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಈ ಇಬ್ಬರೂ 19 ವರ್ಷದ ಯುವಕರಾಗಿದ್ದು, ತಾವು ಮಾಡಿದ ತಪ್ಪಿಗೆ ಇದೀಗ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ.
2018ರಲ್ಲಿ ನಡೆದಿರುವ ಘಟನೆ ಇದಾಗಿದೆ. ಬಾಲಕಿ ಆಟವಾಡುತ್ತಿದ್ದಾಗ ಈ ಇಬ್ಬರು ಕಾಮುಕ ಯುವಕರು ಬಾಲಕಿಯನ್ನು ಮನೆಗೆ ಕರೆದುಕೊಂಡು ಹೋಗಿ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಒಬ್ಬಾತ ಬಾಲಕಿಯ ಮೇಲೆ ಅತ್ಯಾಚಾರ ನಡೆಸುವಾಗ ಮತ್ತೊಬ್ಬ ಯಾರೂ ಬರದಂತೆ ಕಾವಲು ಕಾಯುತ್ತಾ ನಿಂತಿದ್ದ.
ಅಷ್ಟರಲ್ಲಿ ಮಗುವನ್ನು ಹುಡುಕುತ್ತಾ ತಾಯಿ ಬಂದಿದ್ದಾಳೆ. ಯುವಕರು ಓಡಿಹೋಗಿದ್ದಾರೆ. ನಂತರ ಬಾಲಕಿ ವಿಷಯ ತಿಳಿಸಿದ್ದಾಳೆ. ಬಾಲಕಿಯ ಪಾಲಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪೋಲಿಸರು ಈ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಆರೋಪಿಗಳನ್ನು ಬಂಧಿಸಿದಾಗಿನಿಂದಲೂ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿತ್ತು.
ಇದೀಗ ಮಗು ಹೇಳಿಕೆ ಮತ್ತು ವೈದ್ಯಕೀಯ ಪುರಾವೆಗಳನ್ನು ಅವಲಂಬಿಸಿ ಶಿಕ್ಷೆ ನೀಡಿದೆ. ಲೈಂಗಿಕ ಅಪರಾಧಗಳಿಗೆ ಮಕ್ಕಳ ವಿಶೇಷ ಸಂರಕ್ಷಣಾ ಕಾಯ್ದೆ (ಪೋಸ್ಕೊ) ಅಡಿಯಲ್ಲಿ ನ್ಯಾಯಾಲಯವು ಈ ಶಿಕ್ಷೆ ನೀಡಿದೆ.
ಕ್ಲಾಸ್​ರೂಂ ಒಳಗೇ ಗೆಳತಿಯ ಮದ್ವೆಯಾದ ಹೈಸ್ಕೂಲ್​​ ವಿದ್ಯಾರ್ಥಿ! ಮುಂದೇನಾಯ್ತು ನೋಡಿ…

ಶಾಲೆಯಲ್ಲಿ ‘ಭೂತ’- ಬಡಿದುಕೊಳ್ಳುತ್ತಲೇ ಇದ್ದ ಬಾಗಿಲು: ಲಾಕ್​ ತೆಗೆದಾಗ ಏನಾಯ್ತು? ನೀವೇ ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 17 =
Remember me
