ಜೈಪುರ: ರಾಜಸ್ಥಾನದ ಉದಯಪುರದಲ್ಲಿ ಎರಡು ದಿನಗಳ ಹಿಂದೆ ನಡೆದ ಟೈಲರ್​ ಕನ್ಹಯ್ಯಲಾಲ್​ ಅವರ ಭೀಕರ ಹತ್ಯೆ ಪ್ರಕರಣ ಇದೀಗ ರಾಷ್ಟ್ರವ್ಯಾಪಿ ಭಾರಿ ಸುದ್ದಿಯಾಗಿದೆ. ಇದಾಗಲೇ ಕೊಲೆ ಮಾಡಿದ ಪಾತಕಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹಿಂದೂ ದೇವರ ವಿರುದ್ಧ ಅವಹೇಳನಕಾರಿ ಕಮೆಂಟ್​ ಮಾಡಿದವರಿಗೆ ತಿರುಗೇಟು ನೀಡುವ ಉದ್ದೇಶದಿಂದ ಬಿಜೆಪಿ ಮುಖಂಡೆ ನೂಪುರ್​ ಶರ್ಮಾ ಪ್ರವಾದಿ ಮೊಹಮ್ಮದ್​ ಜೀವನದ ಕುರಿತು ಹೇಳಿಕೆ ನೀಡಿದ್ದರು. ಇದು ಕಾಂಗ್ರೆಸ್​ ಪಕ್ಷದ ನಾಯಕರು ಹಾಗೂ ಇಸ್ಲಾಮಿಕ್​ ದೇಶಗಳ ಜನತೆಯನ್ನು ಕೆರಳಿಸಿ ಹಿಂಸಾಚಾರಕ್ಕೆ ಇಳಿದಿದ್ದರು. ನೂಪುರ್​ ಪರ ವಹಿಸಿಕೊಂಡು ಕನ್ಹಯ್ಯಲಾಲ್​ ಜಾಲತಾಣದಲ್ಲಿ ಪೋಸ್ಟ್​ ಹಾಕಿದ್ದರಿಂದ ಕ್ರೂರಿಗಳು ಅವರ ರುಂಡವನ್ನು ಕತ್ತರಿಸಿಹಾಕಿದ್ದಾರೆ. ಜತೆಗೆ ವಿಡಿಯೋ ಮಾಡಿ ಅದರಲ್ಲಿ ವಿಷಯವನ್ನು ತಿಳಿಸಿದ್ದು, ಪ್ರಧಾನಿ ಮೋದಿಯವರಿಗೂ ಕೊಲೆ ಬೆದರಿಕೆ ಹಾಕಿದ್ದಾರೆ.
ಕೂಡಲೇ ಜೀವದ ಹಂಗುತೊರೆದು ಪೊಲೀಸರು ಇಬ್ಬರು ಕೊಲೆಗಾರರನ್ನು ಕೂಡಲೇ ಬಂಧಿಸಿದ್ದಾರೆ. ಜತೆಗೆ ಈ ಘಟನೆಯನ್ನು ಕೇಂದ್ರ ಸರ್ಕಾರ ಕೇಂದ್ರೀಯ ತನಿಖಾ ದಳದ ತನಿಖೆಗೆ ವಹಿಸಿದೆ. ಟೈಲರ್‌ನ ಭೀಕರ ಹತ್ಯೆಗೆ ಬಳಕೆಯಾದ ಆಯುಧವನ್ನು ವಶಕ್ಕೆ ಪಡೆದುಕೊಂಡು ಅದರ ಕುರಿತು ತನಿಖೆ ನಡೆಸಲಾಗಿದೆ.
ಇದೀಗ ಈ ಹರಿತ ಆಯುಧಗಳು ಎಲ್ಲಿ ತಯಾರಾಗಿದ್ದವು ಎನ್ನುವುದು ತನಿಖಾಧಿಕಾರಿಗಳಿಗೆ ತಿಳಿದು ಬಂದಿದೆ. ಟೈಲರ್ ಹತ್ಯೆಗೆ ಬಳಸಿದ್ದ ಆಯುಧವನ್ನು ಉದಯಪುರದ ಎಸ್‌.ಕೆ ಇಂಜಿನಿಯರಿಂಗ್ ವರ್ಕ್ಸ್ ಕಾರ್ಖಾನೆಯಲ್ಲಿ ತಯಾರಿಸಲಾಗಿರುವುದು ಬಹಿರಂಗಗೊಂಡಿದೆ. ಅಷ್ಟೇ ಅಲ್ಲದೇ ಈ ಕ್ರೂರಿಗಳು ಅಲ್ಲಿಯೇ ಆಯುಧ ಬಳಸುವ ಪ್ರಾಕ್ಟೀಸ್​ ಕೂಡ ಮಾಡಿರುವುದು ಕಂಡುಬಂದಿದೆ.
ಆಯುಧವನ್ನು ಹೇಗೆ ಬಳಸಬಹುದು ಎಂಬ ಬಗ್ಗೆ ವಿಡಿಯೋ ಮಾಡಿದ್ದಾರೆ. ರುಂಡವನ್ನು ಹೇಗೆ ಕಟ್​ ಮಾಡಬಹುದು ಎಂದು ತಿಳಿದುಕೊಳ್ಳುವ ಸಲುವಾಗಿ ಐಸಿಸ್​ ಉಗ್ರರ ಕೆಲವು ವಿಡಿಯೋಗಳನ್ನು ನೋಡಿರುವುದು ತನಿಖಾಧಿಕಾರಿಗಳಿಗೆ ತಿಳಿದಿದೆ. ಇದಾಗಲೇ ಈ ಕೊಲೆಗಾರರಿಗೆ ಪಾಕಿಸ್ತಾನದ ನಂಟಿರುವುದು ಕಂಡುಬಂದಿದೆ. ಇಬ್ಬರು ಆರೋಪಿಗಳಲ್ಲಿ ಒಬ್ಬನಾದ ಗೌಸ್ ಮೊಹಮ್ಮದ್ 2014 ರಲ್ಲಿ 45 ದಿನಗಳ ತರಬೇತಿಗಾಗಿ ಕರಾಚಿಗೆ ಹೋಗಿದ್ದ ಎಂದು ತನಿಖಾ ಸಂಸ್ಥೆಗಳು ಹೇಳಿವೆ.
ಟೈಲರ್​ ರುಂಡ ಕಡಿದಿರೋದು ಸಣ್ಣ ಘಟನೆ, ಪಾಪ ಪಾಕ್​ ಏನ್​ ಮಾಡುತ್ತೆ ಎಂದ ಟಿಕಾಯತ್​ ಹೇಳಿದ್ದೇನು ಕೇಳಿ…

ಮೊದಲು ರುಂಡ ಕತ್ತರಿಸಿ, ಇದು ದೇವರ ನಿಯಮ ಎಂದೇ ಹೇಳಿಕೊಡುತ್ತಾರೆ: ರಾಜ್ಯಪಾಲ ಆರೀಫ್ ಖಾನ್​

ಟೈಲರ್​ ಹತ್ಯೆ ಮಾಡಿದ ಕ್ರೂರಿಗಳಿಗೆ ಪಾಕ್​ ಲಿಂಕ್​! ಎನ್​ಐಎ ತನಿಖೆ- ಜೀವದ ಹಂಗುತೊರೆದ ಪೊಲೀಸರಿಗೆ ಬಡ್ತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
