ಮುಂಬೈ:ಮೂರು ತಿಂಗಳುಗಳಿಂದ ಸರಿಯಾದ ಸಂಬಳ ಸಿಗದೇ ಬಸ್​ ಕಂಡಕ್ಟರ್​ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಮಹಾರಾಷ್ಟ್ರ ಸರ್ಕಾರಕ್ಕೆ ಭಾರಿ ಮುಜುಗುರ ಆಗುವ ರೀತಿಯ ಘಟನೆ ನಡೆದಿದೆ.
ಮಹಾರಾಷ್ಟ್ರ ರಾಜ್ಯ ಸಾರಿಗೆ ನಿಗಮದ ಬಸ್ ಕಂಡಕ್ಟರ್ ಆಗಿದ್ದ ಜಲಗಾವ್​ ನಿವಾಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಸಾವಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೇ ಕಾರಣ ಎಂದು ಮೃತ ಕಂಡಕ್ಟರ್ ಹೇಳಿರುವುದಾಗಿ ಅವರ ಸಹೋದರ ತಿಳಿಸಿದ್ದಾರೆ.
ಜಲಗಾಂವ್​ ಡಿಪೋದಲ್ಲಿ ಕಂಡಕ್ಟರ್​ ಆಗಿದ್ದ ಮೃತರು ಸಾಲ ಮಾಡಿಕೊಂಡಿದ್ದರು. ಬರುವ ಸಂಬಳವೇ ಕಡಿಮೆ. ಆದರಲ್ಲಿಯೂ ಇದೀಗ ಅವರಿಗೆ ಸರಿಯಾದ ಸಂಬಳ ಸಿಕ್ಕಿರಲಿಲ್ಲ. ಸಾಲಗಾರರ ಕಾಟ ಹೆಚ್ಚಾಗಿತ್ತು. ಇದರಿಂದಾಗಿ ಜೀವನ ನಡೆಸುವುದು ಸಾಧ್ಯವಾಗದೇ ಬೇಸತ್ತು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ.
ಇದನ್ನೂ ಓದಿ:ಡೈರಿಯ ಹಾಲು ಕೊಳ್ಳುವ ಮುನ್ನ ಎಚ್ಚರ! ಡೈರಿಯ ಹಾಲಿನಲ್ಲೇ ಸ್ನಾನ ಮಾಡಿದ್ದಾನೆ ಈ ಭೂಪ
ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಕಂಡಕ್ಟರ್​ ಅನಿಲ್ ಚೌಧರಿ ತಮ್ಮ ಪುತ್ರನ ಸಾವಿಗೆ ಮಹಾರಾಷ್ಟ್ರ ಸರ್ಕಾರವೇ ಕಾರಣ ಎಂದು ಆರೋಪಿಸಿದ್ದಾರೆ.
ಇದು ಭಾರಿ ಸುದ್ದಿ ಆಗುತ್ತಿದ್ದಂತೆಯೇ, ಮಹಾರಾಷ್ಟ್ರ ರಾಜ್ಯ ಸಾರಿಗೆ ಸಚಿವರು ಸಂಬಳ ಬಾಕಿ ಇರುವ ನೌಕರರಿಗೆ ಇಂದು ಒಂದು ತಿಂಗಳ ಸಂಬಳ ನೀಡಲಾಗುವುದು ಎಂದಿದ್ದಾರೆ. ದೀಪಾವಳಿಗೂ ಮುನ್ನ ಎರಡು ತಿಂಗಳ ಸಂಬಳವನ್ನು ಸಾರಿಗೆ ನೌಕರರು ಪಡೆಯುತ್ತಿದ್ದಾರೆ. ಅವರು ನಿರಾಶರಾಗಬೇಕಾಗಿಲ್ಲ, ಆತ್ಮಹತ್ಯೆಯಂತಹ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಆರ್ಥಿಕ ಸ್ಥಿತಿ ಈಗ ಕೆಟ್ಟದಾಗಿದೆ ಆದರೆ, ನಾವು ಒಂದು ಮಾರ್ಗವನ್ನು ಕಂಡುಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.
ವರದಿಗಾರನ ಜೀವವನ್ನೇ ತೆಗೆದ ಅಪರಾಧ ವರದಿ- ಕುಡುಗೋಲಿನಿಂದ ಭೀಕರ ಹತ್ಯೆ

ಆತ್ಮಹತ್ಯೆಗೆ ಪ್ರಚೋದನೆ ಆರೋಪ: ಅರ್ನಬ್​ಗೆ ಹೈಕೋರ್ಟ್​ನಿಂದ ಸಿಕ್ಕಿಲ್ಲ ಜಾಮೀನು

ಬೈಡೆನ್​ ಗೆಲುವಿನಿಂದ ಹಿರಿಹಿರಿ ಹಿಗ್ಗಿದರೂ ಅಭಿನಂದಿಸದೇ ಮೌನಕ್ಕೆ ಜಾರಿದ ಚೀನಾ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × 4 =
Remember me
