ಮುಂಬೈ:ಡಿಸೆಂಬರ್​ 1 ಪ್ರಸಿದ್ಧ ಗಾಯಕ ಉದಿತ್​ ನಾರಾಯಣ್ ಅವರ ಹುಟ್ಟುಹಬ್ಬ. ಈ ಬಾರಿಯ ಹುಟ್ಟುಹಬ್ಬ ಮಾತ್ರ ಅವರಿಗೆ ಹಿಂದೆಂದಿಗಿಂತಲೂ ವಿಶೇಷವಾಗಿತ್ತು. ಇದಕ್ಕೆ ಕಾರಣ, ಅಂದೇ ಅವರ ಮಗ ಆದಿತ್ಯ ಅವರ ಮದುವೆಯಾಗಿದೆ.
ಕರೊನಾ ವೈರಸ್​ ಹಿನ್ನೆಲೆಯಲ್ಲಿ ಹೆಚ್ಚು ಅದ್ಧೂರಿಯಾಗಿ ಮದುವೆ ನಡೆದಿಲ್ಲ. ಕೋವಿಡ್​ನ ಎಲ್ಲಾ ನಿಯಮಗಳನ್ನು ಅನುಸರಿಸಿ ಹೆಚ್ಚು ಜನರನ್ನು ಕರೆಯದೇ ಮದುವೆ ಮಾಡಲಾಗಿದೆ.
ತಮ್ಮ ಮಗನ ಮದುವೆ ಕುರಿತು ತಿಳಿಸಿರುವ ಉದಿತ್​ ನಾರಾಯಣ್, ನನ್ನ ಮಗ ಆದಿತ್ಯ ಮತ್ತು ಶ್ವೇತಾ ಕಳೆದ 10 ವರ್ಷಗಳಿಂದ ಲಿವ್​ ಇನ್​ ಸಂಬಂಧದಲ್ಲಿದ್ದಾರೆ. 10 ವರ್ಷಗಳ ಬಳಿಕ ಅದಕ್ಕೀಗ ಅಧಿಕೃತ ಮುದ್ರೆ ಸಿಕ್ಕಿದೆ. ನಾನು ಅವರ ಸಂಬಂಧವನ್ನು ಅಧಿಕೃತಗೊಳಿಸುತ್ತಿದ್ದೇನೆ ಎಂದಿದ್ದಾರೆ.
ಇಬ್ಬರೂ ಒಟ್ಟಿಗೇ ಇದ್ದು 10 ವರ್ಷ ಆಗಿದ್ದರಿಂದ ಶ್ವೇತಾಳ ಪಾಲಕರು ಮದುವೆ ಈ ವರ್ಷವೇ ಆಗಲಿ ಎಂದರು. ಆದರೆ ಇರುವ ಒಬ್ಬನೇ ಮಗನ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕು ಎನ್ನುವುದು ನನ್ನ ಮತ್ತು ಪತ್ನಿಯ ಆಸೆಯಾಗಿತ್ತು. ಆದರೆ ಶ್ವೇತಾ ಅವರ ಪಾಲಕರು ಈಗಲೇ ಆಗಲಿ ಎಂದರು. ನಂತರ ಜ್ಯೋತಿಷಿಗಳನ್ನು ಕೇಳಿದಾಗ ಡಿಸೆಂಬರ್​ ಮದುವೆಗೆ ತುಂಬಾ ಅನುಕೂಲ ತಿಂಗಳು ಎಂದರು.
ಅಚ್ಚರಿ ಎಂದರೆ ನನ್ನ ಹುಟ್ಟುಹಬ್ಬ 1ನೇ ತಾರೀಖು ಇತ್ತು. ಇದರ ಅರಿವು ಜ್ಯೋತಿಷಿಗಳಿಗೆ ಇರಲಿಲ್ಲ. ಆದರೆ ಅವರು ಕೂಡ ಮದುವೆಗೆ 1ನೇ ತಾರೀಖನ್ನೇ ಆಯ್ಕೆ ಮಾಡಿದರು. ಆದ್ದರಿಂದ ನನ್ನ ಹುಟ್ಟುಹಬ್ಬದಂತೆ ಮಗನ ಮದುವೆ ಮುಹೂರ್ತ ಫಿಕ್ಸ್​ ಆಯಿತು. ಆದ್ದರಿಂದ ಈ ವರ್ಷದ ನನ್ನ ಹುಟ್ಟುಹಬ್ಬ ಎಂದಿಗೂ ಮರೆಯಲು ಆಗದು ಎಂದಿದ್ದಾರೆ ಉದಿತ್.
ತಂದೆಯಂತೆ ಪ್ರಸಿದ್ಧ ಗಾಯಕ ಆಗಿದ್ದಾರೆ ಆದಿತ್ಯ. ತಮ್ಮ ಸೊಸೆಯನ್ನು ಹೊಗಳಿರುವ ಉದಿತ್​ ನಾರಾಯಣ, ಇಂಥ ಸೊಸೆ ಪಡೆಯಲು ನಾನು ಅದೃಷ್ಟಮಾಡಿದ್ದೇನೆ. ಆಕೆ ತುಂಬಾ ಮೃದು ಸ್ವಭಾವದವಳು. ಮಿತಭಾಷಿ, ಹೆಚ್ಚಿಗೆ ಮಾತನಾಡುವುದಿಲ್ಲ ಎಂದಿದ್ದಾರೆ.
VIDEO: ಐಸ್​ಕ್ರೀಂ ಹಿಡಿದುಕೊಂಡೇ ದರೋಡೆಕೋರರತ್ತ ಗುಂಡುಹಾರಿಸಿ ಅರೆಸ್ಟ್ ಮಾಡಿದ ಪೊಲೀಸ್​​!

ಯೋಗಿ ನಂತರ ಚೌಹಾಣ್​- ಲವ್​ ಜಿಹಾದಿಗಳಿಗೆ ಇಲ್ಲೂ ಶುರಾಗಲಿದೆ ನಡುಕ: 10 ವರ್ಷ ಜೈಲು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:7 + one =
Remember me
