ಅರೆ ವೈದ್ಯಕಿಯ ಕೋರ್ಸ್​ಗಳನ್ನು ವ್ಯಾಸಂಗ ಮಾಡಿದವರಿಗೆ ಭೋಪಾಲ್​ನಲ್ಲಿರುವ ಅಖಿಲ ಭಾರತ ವೈದ್ಯಕಿಯ ವಿಜ್ಞಾನಗಳ ಸಂಸ್ಥೆಯಲ್ಲಿ ಹಲವು ಉದ್ಯೋಗಾವಕಾಶಗಳಿವೆ. ಬ್ರಾಡ್​ಕಾಸ್ಟ್​ ಇಂಜಿನಿಯರಿಂಗ್​ ಕನ್ಸಲ್ಟಂಟ್ಸ್​ ಇಂಡಿಯಾ ಲಿಮಿಟೆಡ್​ (ಬಿಇಸಿಐಎಲ್​) ಮೂಲಕ ಈ ನೇಮಕಾತಿಗಳನ್ನು ಮಾಡಿಕೊಳ್ಳಲಾಗುತ್ತಿದೆ.ಒಟ್ಟು ಹುದ್ದೆಗಳು: 28
ಬಿಇಸಿಐಎಲ್​ ಮೂಲಕ ಏಮ್ಸ್​ನಲ್ಲಿರುವ 28 ಮೆಡಿಕಲ್​ ರೆಕಾರ್ಡ್​ ಟೆಕ್ನಿಷಿಯನ್​ (ಎಂಆರ್​ಟಿ) ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಮಾಸಿಕ 23,550 ರೂ. ವೇತನ ನಿಗದಿಯಾಗಿದೆ. ಆನ್​ಲೈನ್​ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಸರ್ಕಾರದ ನಿಯಮದಂತೆ ಇಪಿಎ್​, ಇಎಸ್​ಐ, ಬೋನಸ್​, ಮೆಟನಿರ್ಟಿ ಹಾಗೂ ಇತರ ಸೌಲಭ್ಯಗಳನ್ನು ನೀಡಲಾಗುವುದು.ಮೆಡಿಕಲ್​ ರೆಕಾರ್ಡ್ಸ್​ನಲ್ಲಿ ಬಿಎಸ್ಸಿ ಅಥವಾ ವಿಜ್ಞಾನ ವಿಷಯದಲ್ಲಿ ದ್ವಿತೀಯ ಪಿಯುಸಿ ಮಾಡಿದ್ದು, ಕನಿಷ್ಠ 6 ತಿಂಗಳ ಡಿಪ್ಲೊಮಾ/ ಪ್ರಮಾಣಪತ್ರ ಕೋರ್ಸ್​ ಮಾಡಿರುವ ಕನಿಷ್ಠ 18 ವರ್ಷ, ಗರಿಷ್ಠ 30 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸಾಮಾನ್ಯವರ್ಗ, ಇತರ ಹಿಂದುಳಿದ ವರ್ಗ, ಮಹಿಳಾ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 750 ರೂ., ಎಸ್​ಸಿ, ಎಸ್​ಟಿ, ಆಥಿರ್ಕವಾಗಿ ಹಿಂದುಳಿದ ವರ್ಗ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 450 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
ಅಧಿಸೂಚನೆಗೆ: https://bit.ly/3ycE3Dl
ಮಾಹಿತಿಗೆ: www.becil.com
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − eleven =
Remember me
