ಉತ್ತರ ಕನ್ನಡ ಜಿಲ್ಲೆಯಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಶಿಶು ಅಭಿವೃದ್ಧಿ ಇಲಾಖೆ ಮಹಿಳೆಯರಿಂದ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಉತ್ತರಕನ್ನಡ ಜಿಲ್ಲಾ ವ್ಯಾಪ್ತಿಯ ಸಮಗ್ರ ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಿಗೆ ಗೌರವಧನ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಕಾರವಾರ, ಕುಮಟಾ, ಹೊನ್ನಾವರ, ಭಟ್ಕಳ, ಸಿರ್ಸಿ, ಸಿದ್ದಾಪುರ, ಯಲ್ಲಾಪುರ, ಹಳಿಯಾಳ, ಸೂಪಾ (ಜೋಯ್ಡಾ) ತಾಲೂಕುಗಳ ಅಂಗನವಾಡಿಗಳಲ್ಲಿ ಹುದ್ದೆಗಳು ಖಾಲಿ ಇದ್ದು, ಸ್ಥಳೀಯರಿಗೆ ಮೊದಲ ಆದ್ಯತೆ ನೀಡಲಾಗುವುದು. ಸಹಾಯಕಿ ಹುದ್ದೆಗೆ ಅಂಗವಿಕಲರು ಅರ್ಹರಾಗಿರುವುದಿಲ್ಲ.
ಅಭ್ಯರ್ಥಿಗಳು ಜನನ ಪ್ರಮಾಣ ಪತ್ರ, ವಿದ್ಯಾರ್ಹತೆ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ ಪತ್ರ (ತಹಸೀಲ್ದಾರ್ ಕಚೇರಿಯಿಂದ ಪಡೆದದ್ದು), ಜಾತಿ ಪ್ರಮಾಣಪತ್ರವನ್ನು ಸಲ್ಲಿಸಬೇಕು.
ಈ ಪ್ರಮಾಣಪತ್ರಗಳಿದ್ದರೆ ಸಲ್ಲಿಸಿಅಭ್ಯರ್ಥಿಗಳು ವಿಧವೆ, ವಿಚ್ಛೇದಿತೆ, ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯಾಗಿದ್ದಲ್ಲಿ ಉಪವಿಭಾಗಾಧಿಕಾರಿಯಿಂದ ಪಡೆದ ಪ್ರಮಾಣ ಪತ್ರ ಸಲ್ಲಿಸಬೇಕು. ದೇವದಾಸಿಯರ ಮಕ್ಕಳು, ಅಂಗವಿಕಲರಾಗಿದ್ದಲ್ಲಿ ಸರ್ಕಾರದಿಂದ ದೃಢೀಕರಿಸಿದ ಪ್ರಮಾಣಪತ್ರ, ಪರಿತ್ಯಕ್ತೆ ಎಂದು ಗ್ರಾಪಂನಿಂದ ನೀಡಿದ ಪತ್ರ, ಯೋಜನಾ ನಿರಾಶ್ರಿತರಾಗಿದ್ದಲ್ಲಿ ತಹಸೀಲ್ದಾರ್‍ರಿಂದ ಪಡೆದ ಪತ್ರಗಳನ್ನು ಅರ್ಜಿಯೊಂದಿಗೆ ಸಲ್ಲಿಸಬಹುದು. ಈ ಪ್ರಮಾಣಪತ್ರಗಳನ್ನು ಆಯಾ ಮೀಸಲಾತಿಗೆ ಪರಿಗಣಿಸಲಾಗುತ್ತದೆ.
ವಿದ್ಯಾರ್ಹತೆ:ಕಾರ್ಯಕರ್ತೆ ಹುದ್ದೆಗೆ ಎಸ್ಸೆಸ್ಸೆಲ್ಸಿ, ಸಹಾಯಕಿಯರ ಹುದ್ದೆಗೆ ಕನಿಷ್ಠ 4ನೇ ತರಗತಿ, ಗರಿಷ್ಠ 9ನೇ ತರಗತಿ. ಕನ್ನಡ ಭಾಷೆ ಜ್ಞಾನ ಅವಶ್ಯ.
ವಯೋಮಿತಿ:18 ರಿಂದ 35 ವರ್ಷ. ಅಂಗವಿಕಲರಿಗೆ 10 ವರ್ಷ ವಯೋಸಡಿಲಿಕೆ ಇದೆ.
ಆಯ್ಕೆ ಪ್ರಕ್ರಿಯೆ:ವಿದ್ಯಾರ್ಹತೆ, ವಯೋಮಿತಿ, ಆಸಿಡ್ ದಾಳಿಗೆ ತುತ್ತಾದವರು, ಇಲಾಖೆಯ ಸಂಸ್ಥೆಗಳಲ್ಲಿ ಹಾಗೂ ರಾಜ್ಯ ಮಹಿಳಾ ನಿಲಯಗಳಲ್ಲಿ ಆಶ್ರಯ ಪಡೆದವರಿಗೆ, ವಿಧವೆಯರಿಗೆ, ಸ್ಥಳೀಯರಿಗೆ ಆದ್ಯತೆ ನೀಡಿ ಆಯ್ಕೆ ಮಾಡಲಾಗುವುದು.
ಗೌರವಧನ ಆಧಾರಿತ ಹುದ್ದೆಈ ನೇಮಕಾತಿಗಳು ಗೌರವಧನ ಆಧಾರಿತವಾಗಿವೆ. ಕಾರ್ಯಕರ್ತೆಗೆ ಮಾಸಿಕ 10,000ರೂ, ಮಿನಿ ಅಂಗನವಾಡಿ ಕಾರ್ಯಕರ್ತೆಗೆ 5,750 ರೂ., ಸಹಾಯಕಿಯರಿಗೆ 5,000 ರೂ. ವೇತನ ನಿಗದಿಯಾಗಿದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 24.12.2020ಅಧಿಸೂಚನೆಗೆ ಇಲ್ಲಿ ಕ್ಲಿಕ್ಕಿಸಿ :https://bit.ly/381YE0X
ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ:https://anganwadirecruit.kar.nic.in
ಇನ್ನೂ ಹೆಚ್ಚಿನ ಉದ್ಯೋಗಗಳ ಮಾಹಿತಿಗೆ https://www.vijayavani.net/ ವಿಭಾಗದ ಅಂಕಣ ಕಾಲಂನಲ್ಲಿ ಉದ್ಯೋಗಮಿತ್ರ ಕ್ಲಿಕ್ಕಿಸಿ
ಕೋರ್ಟ್​ನಲ್ಲಿವೆ ಸ್ಟೆನೋಗ್ರಾಫರ್​, ಟೈಪಿಸ್ಟ್​ , ಕಾಪಿಯಿಸ್ಟ್​ ಹುದ್ದೆಗಳು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eight − 7 =
Remember me
