ಆದಾಯ ತೆರಿಗೆ ಪ್ರಧಾನಮುಖ್ಯ ಆಯುಕ್ತರ ಕಚೇರಿಯಲ್ಲಿ ಖಾಲಿ ಇರುವ ಹಲವು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಒಟ್ಟು ಹುದ್ದೆಗಳು: 14
ದೆಹಲಿಯ ತೆರಿಗೆ ಮುಖ್ಯ ಆಯುಕ್ತರ ಕಚೇರಿಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿರುವ ಹುದ್ದೆಗಳು 2 ವರ್ಷದ ಅವಧಿಗೆ ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅಭ್ಯರ್ಥಿಯ ಕಾರ್ಯಕ್ಷಮತೆ ಆಧರಿಸಿ ಶಾಶ್ವತವಾಗುವ ಸಾಧ್ಯತೆಯೂ ಇರುತ್ತದೆ. ಕ್ರೀಡಾಪಟುಗಳಿಗೆ ವಿಶೇಷ ಆದ್ಯತೆ ಇದೆ.
ಹುದ್ದೆ ವಿವರ* ಇನ್‍ಕಮ್ ಟ್ಯಾಕ್ಸ್ ಇನ್‍ಸ್ಪೆಕ್ಟರ್ – 1* ಟ್ಯಾಕ್ಸ್ ಅಸಿಸ್ಟೆಂಟ್ – 4* ಸ್ಟೆನೋಗ್ರ್ರಾಫರ್ ಗ್ರೇಡ್2 – 3* ಮಲ್ಟಿ ಟಾಸ್ಕಿಂಗ್ ಸ್ಟಾಫ್​ – 6
ಶೈಕ್ಷಣಿಕ ಅರ್ಹತೆ:ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಪದವಿ ಪಡೆದಿರಬೇಕು. ಟ್ಯಾಕ್ಸ್ ಅಸಿಸ್ಟೆಂಟ್‍ಗೆ ಪ್ರತಿ ಗಂಟೆಗೆ 8,000 ಪದಗಳ ಡೇಟಾ ಎಂಟ್ರಿ ವೇಗ ಹೊಂದಿರಬೇಕು. ಸ್ಟೆನೋಗ್ರಾಫರ್​ಗೆ ಡಿಕ್ಟೇಷನ್ ಪ್ರತಿ ನಿಮಿಷಕ್ಕೆ 80 ಪದಗಳ ಟೈಪಿಂಗ್ ಸ್ಪೀಡ್, ಇಂಗ್ಲಿಷ್‍ನಲ್ಲಿ ಪ್ರತಿ ನಿಮಿಷಕ್ಕೆ 50 ಪದ, ಹಿಂದಿ 65 ಪದಗಳ ಪ್ರತಿಲೇಖನ ಕೌಶಲ ಹೊಂದಿರಬೇಕು.
ವಯೋಮಿತಿ: ಎಲ್ಲಹುದ್ದೆಗಳಿಗೂ ಕನಿಷ್ಠ 18 ವರ್ಷ. ಇನ್‍ಕಮ್ ಟ್ಯಾಕ್ಸ್ ಇನ್‍ಸ್ಪೆಕ್ಟರ್​ಗೆ ಗರಿಷ್ಠ 30 ವರ್ಷ, ಉಳಿದ ಹುದ್ದೆಗಳಿಗೆ ಗರಿಷ್ಠ 27 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.
ವೇತನ:ಇನ್‍ಕಮ್ ಟ್ಯಾಕ್ಸ್ ಆಫೀಸರ್​ಗೆ ಮಾಸಿಕ 34,800 ರೂ. ವೇತನ ಇದೆ. ಉಳಿದ ಹುದ್ದೆಗಳಿಗೆ ಮಾಸಿಕ 20,200 ರೂ. ವೇತನ ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ:ಶಾರ್ಟ್‍ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಸಂದರ್ಶನದ ದಿನಾಂಕ, ಸ್ಥಳ, ಸ್ಥಳ ಹಾಗೂ ಇತರ ಮಾಹಿತಿಯನ್ನು ಶಾರ್ಟ್‍ಲಿಸ್ಟ್ ಮಾಡಲಾದ ಅಭ್ಯರ್ಥಿಗಳಿಗೆ ಮೇಲ್ ಮೂಲಕ ತಿಳಿಸಲಾಗುವುದು.
ಅರ್ಜಿ ಸಲ್ಲಿಕೆ ವಿಧಾನ:ಅಭ್ಯರ್ಥಿಗಳು ಯಾವ ಹುದ್ದೆಗೆ ಅರ್ಜಿ ಸಲ್ಲಿಸಲಾಗುತ್ತಿದೆ ಹಾಗೂ ಕ್ರೀಡಾ ವಿಭಾಗದಲ್ಲಿ ಯಾವ ಕ್ರೀಡೆ ಎಂಬುದನ್ನು ಅರ್ಜಿಯಲ್ಲಿ ತಿಳಿಸಬೇಕು. ಅಗತ್ಯ ದಾಖಲೆಗಳ ಸಹಿತ ಅರ್ಜಿಯನ್ನುThe Deputy Commissioner of Income-tax (Hqrs.- Personnel), Room No. 378A, C.R. Building, I.P. Estate, New Delhi-110 002 ವಿಳಾಸಕ್ಕೆ ಕಳುಹಿಸಬೇಕು.
ಅರ್ಜಿ ಸಲ್ಲಿಕೆಗೆ ಕೊನೇ ದಿನ: 15.4.2021ಅಧಿಸೂಚನೆಗೆ:https://bit.ly/3dBG3v9ಮಾಹಿತಿಗೆ:http://www.incometaxdelhi.org
ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:
https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/
ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವಿರಾ?ವಿಜ್ಞಾನ, ತಂತ್ರಜ್ಞಾನ ಇಲಾಖೆಯಲ್ಲಿ ಇವೆ ಹುದ್ದೆಗಳು…

ಕ್ರೀಡಾ ಪ್ರಾಧಿಕಾರದಲ್ಲಿ ಯುವ ವೃತ್ತಿಪರರಿಗೆ ಅವಕಾಶ- 60 ಸಾವಿರ ರೂ.ವರೆಗೆ ಸಂಬಳ

ಮಷಿನ್ ಟೂಲ್ಸ್ ಇಂಡಸ್ಟ್ರಿಯ ಅನುಭವಸ್ಥರಿಗೆ ಎಚ್‌ಎಂಟಿಯಲ್ಲಿದೆ ದೊಡ್ಡ ಅವಕಾಶ: ಅರ್ಜಿ ಆಹ್ವಾನ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:2 × four =
Remember me
