ಭಾರತ ಮತ್ತು ವಿದೇಶಗಳಲ್ಲಿ19 ಶಾಖೆಗಳನ್ನು ಹೊಂದಿರುವ, ಭಾರತದ ಪ್ರಧಾನ ಹಣಕಾಸು ಸಂಸ್ಥೆ ಹಾಗೂ ರಫ್ತು-ಆಮದು ಬ್ಯಾಂಕ್ ಆಗಿರುವ ಇಂಡಿಯನ್ ಎಕ್ಸಿಮ್ ಬ್ಯಾಂಕ್‍ನಲ್ಲಿ ಮ್ಯಾನೇಜ್‍ಮೆಂಟ್ ಟ್ರೈನಿ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. 60ಎಕ್ಸಿಮ್ ಬ್ಯಾಂಕ್‍ಗೆ ಎಕ್ಸ್​ಪೋರ್ಟ್​- ಇಂಪೋರ್ಟ್​ ಬ್ಯಾಂಕ್ ಎಂದೂ ಕರೆಯಲಾಗುವುದು. ಪ್ರಸ್ತುತ 60 ಮ್ಯಾನೇಜ್‍ಮೆಂಟ್ ಟ್ರೇನಿಯಲ್ಲಿನ (ಎಂಟಿ) ವಿವಿಧ ವಿಭಾಗಗಳಲ್ಲಿನ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 27 ಸ್ಥಾನ, ಎಸ್‍ಸಿಗೆ 8, ಎಸ್‍ಟಿಗೆ 4, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 16, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 5 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಇವುಗಳಲ್ಲಿ ನಾಲ್ಕು ಸ್ಥಾನಗಳನ್ನು ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಹವೆಂದು ಪರಿಗಣಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 40,000 ರೂ. ಸ್ಟೈಪೆಂಡ್ ನೀಡಲಾಗುವುದು. ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಮೂಲಕ ಅಭ್ಯರ್ಥಿ ಆಯ್ಕೆ ಮಾಡಲಾಗುವುದು.
ಹುದ್ದೆ ಖಾಲಿ ಇರುವ ವಿಭಾಗಗಳ ವಿವರ* ಕಾರ್ಪೋರೇಟ್​ ಲೋನ್ಸ್ ಆ್ಯಂಡ್ ಅಡ್ವಾನ್ಸ್/ ಪ್ರಾಜೆಕ್ಟ್ ಟ್ರೇಡ್/ ಲೈನ್ಸ್ ಆï ಕ್ರೆಡಿಟ್/ ಇಂಟರ್‍ರ್ನಲ್ ಕ್ರೆಡಿಟ್ ಆಡಿಟ್/ ರಿಸ್ಕ್ ಮ್ಯಾನೇಜ್‍ಮೆಂಟ್/ ಕಾಂಪ್ಲಿಯನ್ಸ್/ ಟ್ರೆಷರಿ ಆ್ಯಂಡ್ ಅಕೌಂಟ್ಸ್* ಕಾನೂನು* ಇಂಟರ್‍ನ್ಯಾಷನಲ್ ಟ್ರೇಡ್ ಆ್ಯಂಡ್ ಫೈನಾನ್ಸ್/ ಇಂಡಸ್ಟ್ರಿ/ ಕಂಟ್ರಿ ರಿಸ್ಕ್ ಅನಾಲಿಸಿಸ್ ಆ್ಯಂಡ್ ಎಕನಾಮಿಕ್ ರಿಸರ್ಚ್* ಇನ್ಫಾರ್ಮೇಷನ್ ಟೆಕ್ನಾಲಜಿ* ಹ್ಯೂಮನ್ ರಿಸೋರ್ಸ್
ಶೈಕ್ಷಣಿಕ ಅರ್ಹತೆ:ಬಿಇ, ಬಿ.ಟೆಕ್, ಹಣಕಾಸು ವಿಷಯದಲ್ಲಿ ಎಂಬಿಎ, ಪಿಜಿಡಿಬಿಎ ಅಥವಾ ಚಾರ್ಟರ್ಡ್ ಅಕೌಂಟೆಂಟ್ ಪದವಿ. ಕಾನೂನು ಪದವಿ, ಅರ್ಥಶಾಸ್ತ್ರ, ಅಂತಾರಾಷ್ಟ್ರೀಯ ವ್ಯವಹಾರ, ಕೃಷಿ ಅರ್ಥಶಾಸ್ತ್ರ, ಇಂಡಸ್ಟ್ರಿಯಲ್ ಎಕನಾಮಿಕ್ಸ್‍ನಲ್ಲಿ ಸ್ನಾತಕೋತ್ತರ ಪದವಿಗಳಲ್ಲಿ ಕನಿಷ್ಠ ಶೇ.60 ಅಂಕ ಪಡೆದಿರಬೇಕು. 2019 ಅಥವಾ 2020ರಲ್ಲಿ ಉತ್ತೀರ್ಣರಾದ ಹಾಗೂ ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವಯೋಮಿತಿ:ಸಾಮಾನ್ಯ ವರ್ಗ ಹಾಗೂ ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ ಗರಿಷ್ಠ 25 ವರ್ಷ, ಎಸ್‍ಸಿ, ಎಸ್‍ಟಿಗೆ ಗರಿಷ್ಠ 30 ವರ್ಷ, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 28 ವರ್ಷ. ಅಂಗವಿಕಲ ಅಭ್ಯರ್ಥಿಗಳಿಗೆ ವರ್ಗಕ್ಕೆ ಅನುಗುಣವಾಗಿ ಗರಿಷ್ಠ 35 ರಿಂದ 40 ವರ್ಷ.
ಅರ್ಜಿ ಶುಲ್ಕ:ಸಾಮಾನ್ಯ ವರ್ಗ, ಆರ್ಥಿಕವಾಗಿ ದುರ್ಬಲವಾಗಿರುವ ವರ್ಗ, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 600 ರೂ., ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳಿಗೆ 100 ರೂ. ಶುಲ್ಕ ಇದೆ.
ಬಾಂಡ್ ನೀಡಬೇಕು:ಅಭ್ಯರ್ಥಿಗಳು ಕೆಲಸಕ್ಕೆ ಹಾಜರಾಗುವ ಸಮಯದಲ್ಲಿ ಬ್ಯಾಂಕ್‍ನಲ್ಲಿ ಕನಿಷ್ಠ 2 ವರ್ಷ ಸೇವೆ ಸಲ್ಲಿಸುವುದಾಗಿ 3 ಲಕ್ಷ ರೂ. ಮೊತ್ತದ ಬಾಂಡ್ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಕೊನೇ ದಿನ: 31.12.2020ಅಧಿಸೂಚನೆಗೆ:https://bit.ly/34zeSxyಮಾಹಿತಿಗೆ:https://www.eximbankindia.in/
ಇನ್ನೂ ಹೆಚ್ಚಿನ ಉದ್ಯೋಗಗಳ ಮಾಹಿತಿಗೆ https://www.vijayavani.net/ ವಿಭಾಗದ ಅಂಕಣ ಕಾಲಂನಲ್ಲಿ ಉದ್ಯೋಗಮಿತ್ರ ಕ್ಲಿಕ್ಕಿಸಿ.
ಕೋರ್ಟ್‍ನಲ್ಲಿವೆ ವಿವಿಧ ಹುದ್ದೆಗಳು: ಎಸ್​ಎಸ್​ಎಲ್​ಸಿ ಪಾಸ್​ ಆದವರಿಗೂ ಇವೆ ಅವಕಾಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − twelve =
Remember me
