ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ದೇಶಾದ್ಯಂತ 4,590 ಶಾಖೆಗಳನ್ನು ಹೊಂದಿದೆ. ಪ್ರಸ್ತುತ ವಿವಿಧ ವಿಭಾಗಗಳಲ್ಲಿನ ಹುದ್ದೆಗಳಿಗೆ ಅರ್ಹ, ಪ್ರತಿಭಾವಂತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ. 115 ಹುದ್ದೆಗಳಲ್ಲಿ ಮೀಸಲಾತಿ ಅಭ್ಯರ್ಥಿಗಳಿಗೆ 68 ಸ್ಥಾನ, ಎಸ್ಸಿಗೆ 12, ಎಸ್ಟಿಗೆ 3, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗೆ 8, ಇತರ ಹಿಂದುಳಿದ ವರ್ಗಕ್ಕೆ 24 ಸ್ಥಾನ ಮೀಸಲಿರಿಸಲಾಗಿದೆ.
ಒಟ್ಟು ಹುದ್ದೆಗಳು: 115
ಹುದ್ದೆ ವಿವರ
– ಸ್ಕೇಲ್ 3 ಹುದ್ದೆಗಳು
* ಕ್ರೆಡಿಟ್ ಆಫೀಸರ್ – 10 * ಡೇಟಾ ಇಂಜಿನಿಯರ್ – 11 * ಐಟಿ ಸೆಕ್ಯುರಿಟಿ ಅನಾಲಿಸ್ಟ್ – 1 * ಐಟಿ ಎಸ್​ಒಸಿ ಅನಾಲಿಸ್ಟ್ – 2 * ರಿಸ್ಕ್ ಮ್ಯಾನೇಜರ್ – 5 * ಟೆಕ್ನಿಕಲ್ ಆಫೀಸರ್ (ಕ್ರೆಡಿಟ್) – 5
– ಸ್ಕೇಲ್ 2
* ಫೈನಾಷಿಯಲ್ ಅನಾಲಿಸ್ಟ್ – 20 * ಇನ್​ಫಮೇಷನ್ ಟೆಕ್ನಾಲಜಿ – 15 * ಕಾನೂನು ಅಧಿಕಾರಿ- 20 * ರಿಸ್ಕ್ ಮ್ಯಾನೇಜರ್- 10 * ಸೆಕ್ಯುರಿಟಿ- 12 (ಸ್ಕೇಲ್ 1ರ ಅಡಿಯಲ್ಲಿ 3 ಹುದ್ದೆ ಇದೆ)
– ಸ್ಕೇಲ್ 4
* ಡೇಟಾ ಸೈಂಟಿಸ್ಟ್- 1
– ಸ್ಕೇಲ್ 5 ಹುದ್ದೆಗಳು
* ಎಕನಾಮಿಸ್ಟ್ – 1 * ಇನ್​ಕಂ ಟ್ಯಾಕ್ಸ್ ಆಫೀಸರ್ – 1 * ಇನ್​ಫಮೇಷನ್ ಟೆಕ್ನಾಲಜಿ – 1
ವಿದ್ಯಾರ್ಹತೆ:ಇಂಜಿನಿಯರಿಂಗ್​ನಲ್ಲಿ ಪದವಿ/ ಸ್ನಾತಕೋತ್ತರ ಪದವಿ, ಕಾನೂನು ಪದವಿ, ಎಂಬಿಎ, ಸ್ಟ್ಯಾಟಿಸ್ಟಿಕ್ಸ್/ ಅರ್ಥಶಾಸ್ತ್ರ/ ಕಂಪ್ಯೂಟರ್ ಸೈನ್ಸ್/ ಫೈನಾನ್ಸ್/ ಎಕನೋಮೆಟ್ರಿಕ್ಸ್/ ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ/ಸ್ನಾತಕೋತ್ತರ ಡಿಪ್ಲೊಮಾ, ಸಿಎ, ಪಿಎಚ್.ಡಿ (ಅರ್ಥಶಾಸ್ತ್ರ, ಬ್ಯಾಂಕಿಂಗ್, ವ್ಯವಹಾರ, ಆರ್ಥಿಕ ನೀತಿ, ಸಾರ್ವಜನಿಕ ನೀತಿ). ಹುದ್ದೆಗಳಿಗೆ ಅನುಗುಣವಾಗಿ ವೃತ್ತಿ ಅನುಭವ ಕೇಳಲಾಗಿದೆ.
ವಯೋಮಿತಿ: ಹುದ್ದೆಗಳಿಗೆ ಅನುಗುಣವಾಗಿ ಕನಿಷ್ಠ 20-26 ವರ್ಷ, ಗರಿಷ್ಠ 30 ರಿಂದ 50 ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ 3-5 ವರ್ಷ ವಯೋಸಡಿಲಿಕೆ ಇದೆ.
ವೇತನ: ಸ್ಕೇಲ್ 1 ಹುದ್ದೆಗಳಿಗೆ ಮಾಸಿಕ 36,000-63,840 ರೂ., ಸ್ಕೇಲ್ 2ಗೆ 48,1740-69,810 ರೂ., ಸ್ಕೇಲ್ 3ಗೆ 63,840-78,230 ರೂ., ಸ್ಕೇಲ್ 4ಕ್ಕೆ 76010-89,890 ರೂ., ಸ್ಕೇಲ್ 5ಗೆ ಮಾಸಿಕ 89,890-1,00,350 ರೂ. ವೇತನ ಇದೆ.
ಆಯ್ಕೆ ಪ್ರಕ್ರಿಯೆ: ಶಾರ್ಟ್​ಲಿಸ್ಟ್ ಮಾಡಲಾದ ಅಭ್ಯರ್ಥಿಗಳಿಗೆ ಆನ್​ಲೈನ್ ಮೂಲಕ ಲಿಖಿತ ಪರೀಕ್ಷೆ ನಡೆಸಿ, ಇದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ವೈಯಕ್ತಿಕ ಸಂದರ್ಶನಕ್ಕೆ ಆಹ್ವಾನಿಸಲಾಗುವುದು.ಲಿಖಿತ ಪರೀಕ್ಷೆಯ ಸಂಭಾವ್ಯ ದಿನಾಂಕ 22.1.2022 ಎಂದು ಹೇಳಲಾಗಿದೆ.
ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 175 ರೂ. + ಜಿಎಸ್​ಟಿ, ಇತರ ಅಭ್ಯರ್ಥಿಗಳಿಗೆ 850 ರೂ. +ಜಿಎಸ್​ಟಿ.
ಅರ್ಜಿ ಸಲ್ಲಿಸಲು ಕೊನೇ ದಿನ: 17.12.2021
ಅಧಿಸೂಚನೆಗೆ:https://bit.ly/3x7k3So
ಮಾಹಿತಿಗೆ:http://www.centralbankofindia.co.in
ರಕ್ಷಣಾ ಸಂಶೋಧನೆ, ಅಭಿವೃದ್ಧಿ ಸಂಸ್ಥೆಯಲ್ಲಿ ಅಪ್ರೆಂಟಿಸ್‌ಷಿಪ್‌ಗೆ ಅರ್ಜಿ ಆಹ್ವಾನ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 9 =
Remember me
