ಕೌನ್ಸಿಲ್ ಆಫ್ ಸೈಂಟಿಫಿಕ್ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್‍ಐಆರ್) ಅಧೀನದಲ್ಲಿ ಕಾರ್ಯನಿರ್ವಹಿಸುವ ಜಾರ್ಖಂಡ್‍ನ ರಾಂಚಿಯಲ್ಲಿರುವ ಸೆಂಟ್ರಲ್ ಇನ್‍ಸ್ಟಿಟ್ಯೂಟ್ ಆಫ್ ಮೈನಿಂಗ್ ಆ್ಯಂಡ್ ಫ್ಯುಯೆಲ್ ರಿಸರ್ಚ್ ಸಂಸ್ಥೆ (ಸಿಐಎಂಎಫ್ಆರ್) ಹೊಸ ಯೋಜನೆ ಅಭ್ಯರ್ಥಿಗಳ ಹುಡುಕಾಟದಲ್ಲಿದೆ. ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ. ಒಟ್ಟು ಹುದ್ದೆಗಳು 76 ಇವೆ.
ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಿ ಸಾಮಾಜಿಕ ಉನ್ನತಿ ಮತ್ತು ಕೈಗಾರಿಕ ಪ್ರಗತಿಗಾಗಿ ಕಾರ್ಯನಿರ್ವಹಿಸುವ ಸಿಐಎಂಎïಆರ್ ವಿವಿಧೆಡೆ ಇರುವ ಗಣಿಗಳಲ್ಲಿ ಕಲ್ಲಿದ್ದಲು ಗುಣಮಟ್ಟ ಪರಿಶೀಲನಾ ಯೋಜನೆಯಲ್ಲಿ (Third Party Coal Quality Monitoring Projects at different sites of Mines) ಕಾರ್ಯ ನಿರ್ವಹಿಸಲು ಪ್ರಾಜೆಕ್ಟ್ ಅಸಿಸ್ಟೆಂಟ್ ಹಾಗೂ ಪ್ರಾಜೆಕ್ಟ್ ಅಸೋಸಿಯೇಟ್‍ಗಳ ಅವಶ್ಯಕತೆ ಇದ್ದು, ಆಸಕ್ತ, ವಿದ್ಯಾವಂತ, ಪ್ರತಿಭಾವಂತ, ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.
ಹುದ್ದೆಯು ಒಂದು ವರ್ಷದ ಅವಧಿಯದ್ದಾಗಿದ್ದು, ಯೋಜನೆಯ ಕಾಲಾವಧಿ ಆಧರಿಸಿ ಅವಧಿ ವಿಸ್ತರಿಸಬಹುದು. ಸಂದರ್ಶನ ನಂತರ ಆಯ್ಕೆಯಾದ ಅಭ್ಯರ್ಥಿಗಳಿಗ ಸಿಎಸ್‍ಐಆರ್ ಪ್ರಾಂಗಣದಲ್ಲಿ/ ಯೋಜನೆ ನಡೆಯುವ ಸ್ಥಳದಲ್ಲಿ ವಸತಿ ವ್ಯವಸ್ಥೆ ಮಾಡಲಾಗುವುದು ಅಥವಾ ಮನೆ ಬಾಡಿಗೆ ಭತ್ಯೆ ನೀಡಲಾಗುವುದು.
ಹುದ್ದೆ, ಸಂಖ್ಯೆ ವಿವರ* ಪ್ರಾಜೆಕ್ಟ್ ಅಸಿಸ್ಟೆಂಟ್ – 50* ಪ್ರಾಜೆಕ್ಟ್ ಅಸೋಸಿಯೇಟ್ ಐ – 26
ವಿದ್ಯಾರ್ಹತೆ:ಕೆಮಿಸ್ಟ್ರಿ, ಜಿಯೋಲಜಿಯಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್‍ನಲ್ಲಿ ಬಿಇ, ಬಿ.ಟೆಕ್, ಎಂಸಿಎ ಪದವಿ ಪಡೆದಿದ್ದು, ಕನಿಷ್ಠ ಶೇ.60 ಅಂಕ ಗಳಿಸಿರಬೇಕು.
ವಯೋಮಿತಿ:ಪ್ರಾಜೆಕ್ಟ್ ಅಸಿಸ್ಟೆಂಟ್‍ಗೆ ಗರಿಷ್ಠ 50 ವರ್ಷ, ಪ್ರಾಜೆಕ್ಟ್ ಅಸೋಸಿಯೇಟ್‍ಗೆ ಗರಿಷ್ಠ 35 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ನಿಯಮದನ್ವಯ ವಯೋಸಡಿಲಿಕೆ ಇದೆ.
ಸ್ಟೈಪೆಂಡ್:ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗೆ ಮಾಸಿಕ 20,000 ರೂ. ಸ್ಟೈಪೆಂಡ್ ಹಾಗೂ ಪ್ರಾಜೆಕ್ಟ್ ಅಸೋಸಿಯೇಟ್ ಹುದ್ದೆಗೆ ಮಾಸಿಕ 25,000 ರೂ., ಗೇಟ್, ನೆಟ್, ಸಿಎಸ್‍ಐಆರ್-ಯುಜಿಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ 31,000 ರೂ. ಸ್ಟೈಪೆಂಡ್ ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ:ಅಭ್ಯರ್ಥಿಗಳ ಶೈಕ್ಷಣಿಕ ಅಂಕ ಮತ್ತು ವೃತ್ತಿ ಅನುಭವ ಆಧರಿಸಿ ಶಾರ್ಟ್ ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಸಂದರ್ಶನವು ರಾಂಚಿಯ ಸಿಎಸ್‍ಐಆರ್ ಕಚೇರಿಯಲ್ಲಿ ನಡೆಯಲಿದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 15.1.2021ವಿಳಾಸ: Administrative Officer, CSIR-Central Institute Of Mining And Fuel Research, Barwa Road, Dhanbad,Jharkhand- 826001.
ಅಧಿಸೂಚನೆಗೆ:https://bit.ly/3mVrNAdಮಾಹಿತಿಗೆ:http://www.cimfr.nic.in
ಹೆಚ್ಚಿನ ಉದ್ಯೋಗದ ಮಾಹಿತಿಗೆ ಈ ಲಿಂಕ್​ ಕ್ಲಿಕ್ಕಿಸಿ
https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/
ಪಿಯುಸಿ ಪಾಸ್​ ಆಗಿರುವಿರಾ? ಹಾಗಿದ್ದರೆ ಬೆಂಗಳೂರಿನಲ್ಲಿ ಐಸಿಎಂಆರ್​ನಲ್ಲಿವೆ ಉದ್ಯೋಗ

ಸೇನಾಪಡೆಯಲ್ಲಿ ಉನ್ನತ ಹುದ್ದೆಗೇರುವ ಕನಸೆ? ಪಿಯುಸಿ ಕಲಿಯುತ್ತಿದ್ದರೂ ಇಲ್ಲಿದೆ ನೋಡಿ ಅವಕಾಶ

ವಿವಿಧ ಪದವಿ, ಸ್ನಾತಕೋತ್ತರ ಪದವೀಧರರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − 6 =
Remember me
