ನ್ಯಾಷನಲ್​ ಏರೋಸ್ಪೇಸ್​ ಲ್ಯಾಬೋರೇಟರೀಸ್​ (ಎನ್​ಎಎಲ್​) ಬೆಂಗಳೂರು ಟಕದಲ್ಲಿ ತಾಂತ್ರಿಕ ಸಿಬ್ಬಂದಿ (ಟೆಕ್ನಿಕಲ್​ ಸ್ಟಾಫ್‌​) ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯಥಿರ್ಗಳಿಂದ ಅರ್ಜಿ ಆಹ್ವಾನಿಸಿದೆ.ಒಟ್ಟು ಹುದ್ದೆಗಳು: 26
ಕೌನ್ಸಿಲ್​ ಆಫ್‌​ ಸೈಂಟಿಫಿಕ್​ ಆ್ಯಂಡ್​ ಇಂಡಸ್ಟ್ರಿಯಲ್​ ರಿಸರ್ಚ್​ (ಸಿಎಸ್​ಐಆರ್​) ಅಧೀನದಲ್ಲಿ ಕಾರ್ಯನಿರ್ವಹಿಸುವ ಎನ್​ಎಎಲ್​ನ ಏರೋಸ್ಪೇಸ್​ ಆರ್​ ಆ್ಯಂಡ್​ ಡಿ, ತಂತ್ರಜ್ಞಾನ ಅಭಿವೃದ್ಧಿ ಮತ್ತು ಸಂಬಂಧಿತ ಅಪ್ಲಿಕೇಷನ್​ಗಳ ಕೆಲಸ ನಿರ್ವಹಿಸಲು ಅಭ್ಯಥಿರ್ಗಳ ಹುಡುಕಾಟದಲ್ಲಿದೆ. ಇಲ್ಲಿ ನೇಮಕ ಮಾಡಿಕೊಳ್ಳಲಾಗುವ ಅಭ್ಯಥಿರ್ಗಳನ್ನು ದೇಶಾದ್ಯಂತ ಯಾವ ಭಾಗಕ್ಕೆ ಬೇಕಾದರೂ ವರ್ಗ ಮಾಡಬಹುದಾಗಿದೆ.
ಹುದ್ದೆಗಳ ವಿವರ* ಟೆಕ್ನಿಕಲ್​ ಅಸಿಸ್ಟೆಂಟ್​ (ಮೆಕ್ಯಾನಿಕಲ್​- 4, ಎಲೆಕ್ಟ್ರಿಕಲ್​/ ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಕಮ್ಯುನಿಕೇಷನ್​ ಇಂಜಿನಿಯರಿಂಗ್​ – 3, ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಇನ್​ಸ್ಟ್ರುಮೆಂಟೇಷನ್​- 3, ಸಿವಿಲ್​- 2, ಮೆಟಲಜಿರ್ – 2, ಕಂಪ್ಯೂಟರ್​ ಸೈನ್ಸ್​ ಡಿಪ್ಲೊಮಾ/ ಬಿಎಸ್ಸಿ- 2, ಹೋಟೆಲ್​ ಮ್ಯಾನೇಜ್​ಮೆಂಟ್​ – 1, ಏರ್​ಕ್ರಾಫ್ಟ್‌ ಮೈಟೇನೆನ್ಸ್​ – 2)- 19* ಟೆಕ್ನಿಕಲ್​ ಆಫೀಸರ್​ – 1* ಸೀನಿಯರ್​ ಟೆಕ್ನಿಕಲ್​ ಆಫೀಸರ್​ 1 – 2* ಸೀನಿಯರ್​ ಟೆಕ್ನಿಕಲ್​ ಆಫೀಸರ್​ 2 – 4
ಶೈಕ್ಷಣಿಕ ಅರ್ಹತೆ: ಮೆಕ್ಯಾನಿಕಲ್​, ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಕಮ್ಯುನಿಕೇಷನ್​, ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಇನ್​ಸ್ಟ್ರುಮೆಂಟೇಷನ್​, ಸಿವಿಲ್​, ಮೆಟಲಜಿರ್, ಕಂಪ್ಯೂಟರ್​ ಸೈನ್ಸ್​, ಹೋಟೆಲ್​ ಮ್ಯಾನೇಜ್​ಮೆಂಟ್​ನಲ್ಲಿ 3 ವರ್ಷದ ಡಿಪ್ಲೊಮಾ ಮಾಡಿದ್ದು, ಪ್ರಥಮ ದರ್ಜೆಯಲ್ಲೇ ಉತ್ತೀರ್ಣರಾಗಿರಬೇಕು. ಬಿಎಸ್ಸಿ, ಬಿಇ, ಬಿ.ಟೆಕ್​ ಮಾಡಿದ್ದು, ಕನಿಷ್ಠ ಶೇ.55 ಅಂಕ ಪಡೆದಿರಬೇಕು. ವೃತ್ತಿ ಅನುಭವ ಅವಶ್ಯ.
ವಯೋಮಿತಿ: ಟೆಕ್ನಿಕಲ್​ ಅಸಿಸ್ಟೆಂಟ್​ಗೆ ಗರಿಷ್ಠ 28 ವರ್ಷ, ಟೆಕ್ನಿಕಲ್​ ಆಫೀಸರ್​ಗೆ ಗರಿಷ್ಠ 30, ಸೀನಿಯರ್​ ಟೆಕ್ನಿಕಲ್​ ಆಫೀಸರ್​ಗೆ ಗರಿಷ್ಠ 35&40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯಥಿರ್ಗಳಿಗೆ ವಯೋಸಡಿಲಿಕೆ ಇದೆ.
ವೇತನ: ಮಾಸಿಕ ಎಲ್ಲ ಭತ್ಯೆಗಳನ್ನು ಸೇರಿಸಿ ಟೆಕ್ನಿಕಲ್​ ಅಸಿಸ್ಟೆಂಟ್​ಗೆ 49,000 ರೂ. ವೇತನ ಇದೆ.ಟೆಕ್ನಿಕಲ್​ ಆಫೀಸರ್​ಗೆ 67,000 ರೂ., ಸೀನಿಯರ್​ ಟೆಕ್ನಿಕಲ್​ ಆಫೀಸರ್​ಗೆ 87,000& 1,03,000 ರೂ. ವೇತನ ನಿಗದಿಪಡಿಸಲಾಗಿದೆ.
ಆಯ್ಕೆ ಪ್ರಕ್ರಿಯೆ: ಸೀನಿಯರ್​ ಟೆಕ್ನಿಕಲ್​ ಆಫೀಸರ್​ಗೆ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು. ಉಳಿದ ಹುದ್ದೆಗಳಿಗೆ ಸ್ಕಿಲ್​ ಟೆಸ್ಟ್​, ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸಲು ಕೊನೇ ದಿನ: 21.5.2021ಅಧಿಸೂಚನೆಗೆ:https://bit.ly/3v7lf6aಮಾಹಿತಿಗೆ:http://www.nal.res.in/en
ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/
ಎಸ್‌ಬಿಐನಲ್ಲಿ 67 ಹುದ್ದೆಗಳು: ಎಸ್‌ಎಸ್‌ಎಲ್‌ಸಿಯಾದವರಿಗೂ ಅವಕಾಶ- 50 ಸಾವಿರ ರೂ. ಸಂಬಳ
ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಭರ್ತಿಗೆ ಕಾಮರ್ಸ್‌ ಪದವೀಧರರಿಂದ ಅರ್ಜಿ ಆಹ್ವಾನ
ಕೇಂದ್ರ ಸರ್ಕಾರದ ಪಿಎಫ್​ಸಿ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಆಹ್ವಾನ- ಒಂದೂವರೆ ಲಕ್ಷ ರೂ. ಸಂಬಳ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
