ಹಿಂದುಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (ಎಚ್‍ಪಿಸಿಎಲ್) ಕೇಂದ್ರ ಸರ್ಕಾರದ ಮಹಾರತ್ನ ಸಂಸ್ಥೆಯಾಗಿದ್ದು, ಮುಂಬೈನ ಘಟಕದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಪ್ರತಿಭಾವಂತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಒಟ್ಟು ಹುದ್ದೆಗಳು: 200
ಎಚ್‍ಪಿಸಿಎಲ್‍ನಿಂದ ನೇಮಕ ಮಾಡಿಕೊಳ್ಳುವ ಅಭ್ಯರ್ಥಿಗಳನ್ನು ದೇಶದ ಯಾವುದೇ ಘಟಕ, ಪ್ರಾದೇಶಿಕ ಕಚೇರಿಗೆ ಬೇಕಾದರೂ ನೇಮಕ ಮಾಡಬಹುದಾಗಿದೆ. ಸಂಸ್ಥೆಯ ಅಗತ್ಯಕ್ಕೆ ತಕ್ಕಂತೆ ವರ್ಗಾವಣೆ ಮಾಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು ಒಂದು ವರ್ಷ ಪ್ರೊಬೆಷನರಿ ಅವಧಿಯಲ್ಲಿ ಕೆಲಸ ಮಾಡಬೇಕು. ಈ ಅವಧಿಯ ಮೊದಲ 6 ತಿಂಗಳು ವೇತನದಲ್ಲಿ ಮಾಸಿಕ 5000 ರೂ.ಗಳನ್ನು ಕಡಿತಗೊಳಿಸಲಾಗುವುದು. ಪ್ರೊಬೆಷನರಿ ಅವಧಿ ಮುಗಿಸಿ ಹುದ್ದೆಗೆ ನಿಯೋಜಿಸಿದ ನಂತರ ಈ ಮೊತ್ತವನ್ನು ಅಭ್ಯರ್ಥಿಗೆ ಹಿಂದಿರುಗಿಸಲಾಗುವುದು.
ಹುದ್ದೆ ವಿವರ* ಮೆಕ್ಯಾನಿಕಲ್ ಇಂಜಿನಿಯರ್ – 120* ಸಿವಿಲ್ ಇಂಜಿನಿಯರ್ – 30* ಎಲೆಕ್ಟ್ರಿಕಲ್ ಇಂಜಿನಿಯರ್ – 25* ಇನ್‍ಸ್ಟ್ರುಮೆಂಟೇಷನ್ ಇಂಜಿನಿಯರಿಂಗ್ – 25
ವಿದ್ಯಾರ್ಹತೆ:ಎಐಸಿಟಿಇಯಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್, ಮೆಕ್ಯಾನಿಕಲ್ ಆ್ಯಂಡ್ ಪ್ರೊಡಕ್ಷನ್, ಸಿವಿಲ್, ಎಲೆಕ್ಟ್ರಿಕಲ್, ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್, ಇನ್‍ಸ್ಟ್ರುಮೆಂಟೇಷನ್, ಇನ್‍ಸ್ಟ್ರುಮೆಂಟೇಷನ್ ಆ್ಯಂಡ್ ಕಂಟ್ರೋಲ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಇನ್‍ಸ್ಟ್ರುಮೆಂಟೇಷನ್‍ನಲ್ಲಿ ನಾಲ್ಕು ವರ್ಷದ ಇಂಜಿನಿಯರಿಂಗ್ ಪದವಿ ಪಡೆದಿರಬೇಕು. ಸಾಮಾನ್ಯ ವರ್ಗ, ಆರ್ಥಿಕವಾಗಿ ದುರ್ಬಲವಾಗಿರುವ, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳು ಕನಿಷ್ಠ ಶೇ.60 ಅಂಕ, ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳು ಕನಿಷ್ಠ ಶೇ.50 ಅಂಕ ಪಡೆದಿರಬೇಕು.
ಮೀಸಲಾತಿ:200 ಹುದ್ದೆಗಳಲ್ಲಿ ಎಸ್ಸಿಗೆ 20 ಸ್ಥಾನ, ಎಸ್ಟಿಗೆ 18, ಇತರ ಹಿಂದುಳಿದ ವರ್ಗಕ್ಕೆ 49, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 20, ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 93 ಸ್ಥಾನಗಳನ್ನು ಮೀಸಲಿರಿಸಲಾಗಿದೆ.
ವಯೋಮಿತಿ:ಗರಿಷ್ಠ 25 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಇದೆ.
ಆಯ್ಕೆ ಪ್ರಕ್ರಿಯೆ:ಕಂಪ್ಯೂಟರ್ ಆಧಾರಿತ ಪರೀಕ್ಷೆ, ಗುಂಪು ಚರ್ಚೆ ಹಾಗೂ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು. ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿ ಜನರಲ್ ಆಪ್ಟಿಟ್ಯೂಡ್ (ಇಂಗ್ಲಿಷ್ ಭಾಷಾ ಜ್ಞಾನ, ಕ್ವಾಂಟಿಟೇಟೀವ್ ಆಪ್ಟಿಟ್ಯೂಡ್, ಇಂಟೆಲೆಕ್ಚುವಲ್ ಪೆÇಟೆನ್ಷಿಯಲ್ ಟೆಸ್ಟ್), ಟೆಕ್ನಿಕಲ್/ಪ್ರೊಫೆಷನಲ್ ಜ್ಞಾನದ ಕುರಿತ ಪ್ರಶ್ನೆಗಳನ್ನು ಕೇಳಲಾಗುವುದು.
ವೇತನ:ಮಾಸಿಕ ಎಲ್ಲ ಭತ್ಯೆಗಳನ್ನು ಒಳಗೊಂಡು 50,000-1,60,000 ರೂ. ವೇತನ ನೀಡಲಾಗುವುದು.
ಅರ್ಜಿ ಶುಲ್ಕ:ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳನ್ನು ಹೊರತು ಪಡಿಸಿ ಉಳಿದ ಅಭ್ಯರ್ಥಿಗಳು 1180 ರೂ. ಪಾವತಿಸಬೇಕು.
ಅರ್ಜಿ ಸಲ್ಲಿಸಲು ಕೊನೇ ದಿನ: 15.4.2021ಅಧಿಸೂಚನೆಗೆ:https://bit.ly/3ctQJf5ಮಾಹಿತಿಗೆ:http://www.hindustanpetroleum.com
ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:
https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/
ಕ್ರೀಡಾ ಪ್ರಾಧಿಕಾರದಲ್ಲಿ ಕನ್ಸಲ್ಟಂಟ್ ಹುದ್ದೆ- ₹1 ಲಕ್ಷದವರೆಗೆ ವೇತನ- 55 ವರ್ಷದವರೆಗೂ ಆದ್ಯತೆ

ಟೈಪಿಂಗ್​, ಷಾರ್ಟ್​ಹ್ಯಾಂಡ್​ ಕಲಿತಿರುವಿರಾ? ಕೋರ್ಟ್​ನಲ್ಲಿವೆ 18 ಹುದ್ದೆಗಳು

ಕೃಷಿ, ಅರಣ್ಯ, ತೋಟಗಾರಿಕೆಯಲ್ಲಿ ಪದವೀಧರರೆ? ನಿಮಗಾಗಿ ಕಾದಿವೆ 189 ಸರ್ಕಾರಿ ಹುದ್ದೆಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 14 =
Remember me
