ನ್ಯಾಷನಲ್ ಹೈ ಸ್ಪೀಡ್ರೈಲ್ ಕಾರ್ಪೊರೇಷನ್ ಲಿಮಿಟೆಡ್‍ನಲ್ಲಿ (ಎನ್‍ಎಚ್‍ಎಸ್‍ಆರ್​ಸಿಎಲ್) ಕೈಗೊಳ್ಳಲಾಗುತ್ತಿರುವ ಹೈ ಸ್ಪೀಡ್ ಟ್ರೈನ್ ಕಾರಿಡಾರ್ ಯೋಜನೆಯಲ್ಲಿ ಕಾರ್ಯ ನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟೂ ಹುದ್ದೆಗಳು: 61ಮುಂಬೈ- ಅಹಮದಾಬಾದ್ ನಡುವೆ ದೇಶದ ಮೊದಲ ಹೈ ಸ್ಪೀಡ್ ರೈಲು ಸಂಚಾರ ಯೋಜನೆ ಅನುಷ್ಠಾನವಾಗುತ್ತಿದೆ.
ಎನ್‍ಎಚ್‍ಎಸ್‍ಆರ್​ಸಿಎಲ್ ಇದರ ಉಸ್ತುವಾರಿ ವಹಿಸಿದ್ದು, ವಿವಿಧ ಅಗತ್ಯಗಳಿಗೆ 61 ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ. ಹುದ್ದೆಗಳಲ್ಲಿ ಸಾಮಾನ್ಯವರ್ಗಕ್ಕೆ 29 ಸ್ಥಾನ, ಎಸ್‍ಸಿಗೆ 9, ಎಸ್‍ಟಿಗೆ 4, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 14, ಆರ್ಥಿಕವಾಗಿ ದುರ್ಬಲವಾಗಿರುವ ವರ್ಗದ ಅಭ್ಯರ್ಥಿಗಳಿಗೆ 5 ಸ್ಥಾನಗಳನ್ನು ಮೀಸಲಿರಿಸಲಾಗಿದೆ.
ಒಬ್ಬ ಅಭ್ಯರ್ಥಿಯು ಹಲವು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 40,000 ರೂ. ವೇತನ ಇದ್ದು, ಐಡಿಎ, ಮನೆ ಬಾಡಿಗೆ ಭತ್ಯೆ, ಲೀಸ್ ಭತ್ಯೆ, ವೈದ್ಯಕೀಯ ಭತ್ಯೆ, ಇಪಿಎï, ಗ್ರಾಚ್ಯುಟಿಯಂತಹ ವಿವಿಧ ಭತ್ಯೆಗಳನ್ನು ನೀಡಲಾಗುವುದು. ಅಭ್ಯರ್ಥಿಗಳು ಯೋಜನಾ ವ್ಯಾಪ್ತಿಯ ಯಾವುದೇ ಭಾಗದಲ್ಲಾದರೂ ಕೆಲಸ ಮಾಡಲು ಸಿದ್ಧರಿರಬೇಕು.
ಹುದ್ದೆ, ಸಂಖ್ಯೆ ವಿವರ* ಸೀನಿಯರ್ ಎಕ್ಸಿಕ್ಯೂಟೀವ್– ಸಿವಿಲ್ – 53– ಎಸ್ ಆ್ಯಂಡ್ ಟಿ – 3– ಎಲೆಕ್ಟ್ರಿಕಲ್ – 2– ಜನರಲ್ 2* ಅಸಿಸ್ಟೆಂಟ್ ಮ್ಯಾನೇಜರ್ (ಜನರಲ್) – 1
ಶೈಕ್ಷಣಿಕ ಅರ್ಹತೆ:ಹುದ್ದೆಗೆ ಅನುಗುಣವಾಗಿ ಸಿವಿಲ್, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ ಇಂಜಿನಿಯರಿಂಗ್‍ನಲ್ಲಿ ಡಿಪ್ಲೋಮಾ, ಬಿಇ, ಬಿ.ಟೆಕ್. ಯಾವುದೇ ಪದವಿ ಜತೆ ಎರಡರಿಮದ ನಾಲ್ಕು ವರ್ಷಗಳ ವೃತ್ತಿ ಅನುಭವ ಅವಶ್ಯ.
ವಯೋಮಿತಿ:31.12.2020ಕ್ಕೆ ಕನಿಷ್ಠ 20 ವರ್ಷ, ಗರಿಷ್ಠ 35 ವರ್ಷ ಆಗಿರಬೇಕು. (31.12.1985 ರಿಂದ 31.12.2000ದ ನಡುವೆ ಜನಿಸಿರಬೇಕು). ಮೀಸಲಾತಿ ಅಭ್ಯರ್ಥಿಗಳಿಗೆ ನಿಯಮದನ್ವಯ ವಯೋ ಸಡಿಲಿಕೆ ಇದೆ.
ಆಯ್ಕೆ ಪ್ರಕ್ರಿಯೆ:3 ಹಂತದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು. ಅಭ್ಯರ್ಥಿಗಳ ಶೈಕ್ಷಣಿಕ ಅಂಕ ಆಧರಿಸಿ ಮೊದಲ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ)ಗೆ ಆಹ್ವಾನಿಸಲಾಗುವುದು. ಇದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಲಾಗುವುದು. ನಂತರ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು. ಸಂದರ್ಶನದಲ್ಲಿ ಉತ್ತೀರ್ಣರಾಗಿ ವೈದ್ಯಕೀಯ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಅಭ್ಯರ್ಥಿಗಳನ್ನು ನಿರಾಕರಿಸಲಾಗುವುದು. ಸಿಬಿಟಿ, ಸಂದರ್ಶನ ಹಾಗೂ ಇತರ ಮಾಹಿತಿಗಳನ್ನು ವೆಬ್‍ಸೈಟ್‍ನಲ್ಲಿ ನೀಡಲಾಗುವುದು.
ಬಾಂಡ್ ಪತ್ರ ಅಗತ್ಯ:ಆಯ್ಕೆಯಾದ ಅಭ್ಯರ್ಥಿಗಳು ಸಂಸ್ಥೆಯಲ್ಲಿ ಕನಿಷ್ಠ 2 ವರ್ಷ ಸೇವೆ ಸಲ್ಲಿಸುವುದಾಗಿ 3 ಲಕ್ಷ ರೂ.ನ ಬಾಂಡ್ ನೀಡಬೇಕು. ಹಾಗೂ ಕೆಲಸ ಬಿಡುವ 90 ದಿನದ ಮುಂಚಿತವಾಗಿ ತಿಳಿಸಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನ: 1.1.2021ಅಧಿಸೂಚನೆಗೆ:https://bit.ly/3nJe7cT
ಮಾಹಿತಿಗೆ:http://www.nhsrcl.in
ವಿವಿಧ ಪದವೀಧರರಿಗೆ ಬ್ಯಾಂಕ್‍ನಲ್ಲಿದೆ ಉದ್ಯೋಗಾವಕಾಶ- 40 ಸಾವಿರ ಸ್ಟೈಪೆಂಡ್

ಸ್ಟೇಟ್ ಬ್ಯಾಂಕ್ ಆಫ್​ ಇಂಡಿಯಾದಲ್ಲಿ ಖಾಲಿ ಇವೆ ಫೈರ್ ಇಂಜಿನಿಯರ್ ಹುದ್ದೆಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + eight =
Remember me
