ಬೆಂಗಳೂರಿನ ರಾಜಾಜಿನಗರದಲ್ಲಿರುವ ನೌಕರರ ರಾಜ್ಯ ವಿಮೆ (ಇಎಸ್​ಐಸಿ) ಆಸ್ಪತ್ರೆಯ ವಿವಿಧ ವಿಭಾಗಳಲ್ಲಿ ಬೋಧಕ ಹುದ್ದೆಗಳಿಗೆ ಒಂದು ವರ್ಷ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ. ಹುದ್ದೆಗಳಲ್ಲಿ ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 15 ಸ್ಥಾನ, ಇತರ ಹಿಂದುಳಿದ ವರ್ಗಕ್ಕೆ 5, ಆರ್ಥಿಕವಾಗಿ ದುರ್ಬಲವಾಗಿರುವವರಿಗೆ 1, ಎಸ್ಸಿಗೆ 2, ಎಸ್ಟಿಗೆ 1 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಎಲ್ಲ ಹುದ್ದೆಗಳಿಗೂ ಗರಿಷ್ಠ ವಯೋಮಿತಿ 69 ವರ್ಷ ನಿಗದಿಪಡಿಸಲಾಗಿದೆ. ಸಂದರ್ಶನಕ್ಕೆ ಹಾಜರಾಗುವಾಗ ಕರೊನಾ ನಿಯಮಾವಳಿ ಪಾಲಿಸಲು ಸೂಚಿಸಲಾಗಿದೆ. ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಪ್ರತ್ಯೇಕ ಅರ್ಜಿ ಸಲ್ಲಿಸತಕ್ಕದ್ದು. ಸಂದರ್ಶನ ನಡೆದ ನಂತರ ಅಂತಿಮ ಆಯ್ಕೆ ಪಟ್ಟಿಯನ್ನು ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು ಕೂಡಲೆ ಕೆಲಸಕ್ಕೆ ಸೇರತಕ್ಕದ್ದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಹುದ್ದೆ ವಿವರ* ಪ್ರೊಫೆಸರ್​ -3ವಿಭಾಗಳು: ಚೆಸ್ಟ್​ ಆ್ಯಂಡ್​ ಟಿಬಿ, ಆಥೋರ್ಪೆಡಿಕ್ಸ್​, ರೇಡಿಯೋ&ಡಯಗ್ನೋಸಿಸ್​
* ಅಸೋಸಿಯೇಟ್​ ಪ್ರೊಫೆಸರ್​ – 8ವಿಭಾಗ: ಜನರಲ್​ ಮೆಡಿಸನ್​- 3, ಪೀಡಿಯಾಟ್ರಿಕ್ಸ್​-1, ಅನಸ್ತೇಷಿಯಾ-1, ರೇಡಿಯೋ& ಡಯಗ್ನೋಸಿಸ್​-1, ಮನೋವೈದ್ಯಶಾಸ್ತ್ರ-1, ಜನರಲ್​ ಸರ್ಜರಿ-1
* ಅಸಿಸ್ಟೆಂಟ್​ ಪ್ರೊಫೆಸರ್​ -13ವಿಭಾಗ: ಕಮ್ಯುನಿಟಿ ಮೆಡಿಸನ್​-2, ಜನರಲ್​ ಮೆಡಿಸನ್​- 3, ಚೆಸ್ಟ್​ ಟಿಬಿ- 1, ಸ್ಟಾ$ಟಿಸ್ಟೀಷಿಯನ್-1, ಅನಾಟಮಿ-1, ಪ್ಯಾಥೋಲಜಿ-1, ರೇಡಿಯೋ-ಡಯಗ್ನೋಸಿಸ್​-1, ಅನಸ್ತೇಷಿಯಾ-1, ಫೋರೆನ್ಸಿಕ್​ ಮೆಡಿಸನ್​-1, ಆಥೋರ್ಪೆಡಿಕ್ಸ್-1
ಶೈಕ್ಷಣಿಕ ಅರ್ಹತೆ:ನ್ಯಾಷನಲ್​ ಮೆಡಿಕಲ್​ ಕಮಿಷನ್​ (ಎಂಸಿಐ/ಎನ್​ಎಂಸಿ) ಅನ್ವಯ ಹುದ್ದೆಗಳಿಗೆ ಶೈಕ್ಷಣಿಕ ಅರ್ಹತೆ ನಿಗದಿಪಡಿಸಲಾಗಿದೆ.
ವೇತನ:ಪ್ರೊಫೆಸರ್​ ಹುದ್ದೆಗೆ 1,77,000 ರೂ., ಅಸೋಸಿಯೇಟ್​ ಪ್ರೊಫೆಸರ್​ – 1,16,000 ರೂ., ಅಸಿಸ್ಟೆಂಟ್​ ಪ್ರೊಫೆಸರ್​ – 1,01,000 ರೂ. ಮಾಸಿಕ ವೇತನ ಇದ್ದು, ಇತರ ಯಾವುದೇ ಭತ್ಯೆ ಇರುವುದಿಲ್ಲ.
ಸೇವಾ ಬಾಂಡ್​: ಎಲ್ಲ ಹುದ್ದೆಗಳಿಗೂ 85,000 ರೂ. ಮೌಲ್ಯದ ಸೇವಾ ಬಾಂಡ್​ ನೀಡಬೇಕು.
ಸಂದರ್ಶನ ನಡೆಯುವ ದಿನಾಂಕ:ಏ.28, 29 ರಂದು ಬೆಳಗ್ಗೆ 11 ಗಂಟೆಯಿಂದಸಂದರ್ಶನ ನಡೆಯುವ ಸ್ಥಳ:ಇಎಸ್​ಐ ಮೆಡಿಕಲ್​ ಕಾಲೇಜ್​ ಆ್ಯಂಡ್​ ಪಿಜಿಐಎಂಎಸ್​ಆರ್​ ಆ್ಯಂಡ್​ ಮೆಡಿಕಲ್​ ಕಾಲೇಜ್​, ರಾಜಾಜಿನಗರ, ಬೆಂಗಳೂರು – 560 010
ಅಧಿಸೂಚನೆಗೆ:https://bit.ly/2QEfgqwಮಾಹಿತಿಗೆ:www.esic.nic.in
ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:
https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/
ಎಚ್​ಎಂಟಿಗೆ ಬೇಕಾಗಿದ್ದಾರೆ ಪ್ರತಿಭಾನ್ವಿತರು: ವಿವಿಧ ಹುದ್ದೆಗಳಿಗೆ ಆಹ್ವಾನ- ಬೆಂಗಳೂರಿನಲ್ಲಿ ಕೆಲಸ

ಮಹಿಳಾ ಇಂಜಿನಿಯರಿಂಗ್​ ಪದವೀಧರರಿಗೆ ಗುಡ್​ ನ್ಯೂಸ್​: ಎನ್​ಟಿಪಿಸಿಯಲ್ಲಿ 50 ಹುದ್ದೆಗಳಿಗೆ ಆಹ್ವಾನ

ವಿವಿಧ ಪದವೀಧರರಿಗೆ ಎಣ್ಣೆಬೀಜ ಬೆಳೆಗಾರರ ಸಹಕಾರಿ ಸಂಘಕ್ಕೆ ಆಹ್ವಾನ: ₹70 ಸಾವಿರದವರೆಗೂ ವೇತನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − twelve =
Remember me
