ಕೋಲ್ಕತದ ಹೂಗ್ಲಿಕೊಚ್ಚಿನ್ ಶಿಪ್‍ಯಾರ್ಡ್ ಲಿಮಿಟೆಡ್‍ನಲ್ಲಿ (ಎಚ್‍ಸಿಎಸ್‍ಎಲ್) ಖಾಲಿ ಇರುವ 28 ಹುದ್ದೆಗಳಲ್ಲಿ ಸಾಮಾನ್ಯವರ್ಗಕ್ಕೆ 27 ಸ್ಥಾನ ಹಾಗೂ ಇತರ ಹಿಂದುಳಿದ ವರ್ಗಕ್ಕೆ ಒಂದು ಸ್ಥಾನ ಮೀಸಲಿರಿಸಲಾಗಿದೆ.
ಕೇಂದ್ರ ಸರ್ಕಾರದ ಮಿನಿರತ್ನ ಕಂಪನಿಗಳಲ್ಲಿ ಒಂದಾಗಿರುವ ಕೊಚ್ಚಿಯ ಹೂಗ್ಲಿ ಕೊಚ್ಚಿನ್ ಶಿಪ್‍ಯಾರ್ಡ್ ಲಿಮಿಟೆಡ್‍ನಲ್ಲಿ ಖಾಲಿ ಇರುವ ಹಲವು ಹುದ್ದೆಗೆ ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ.
ಹುದ್ದೆ, ಸಂಖ್ಯೆ ವಿವರ* ವೆಲ್ಡರ್ – 2* ಫಿಟ್ಟರ್ (ಎಲೆಕ್ಟ್ರಿಕಲ್, ಫೈಪ್) – 8* ಡೀಸೆಲ್ ಮೆಕ್ಯಾನಿಕ್ – 1* ಡ್ರಾಫ್ಟ್ಸ್​ಮನ್ (ಸಿವಿಲ್) – 1* ಆಪರೇಟರ್ (ವೇಬ್ರಿಡ್ಜ್, ಲೇತ್, ಮಿಲ್ಲಿಂಗ್ ಆ್ಯಂಡ್ ಡ್ರಿಲ್ಲಿಂಗ್, ಕ್ರೇನ್, ಎಂಎಚ್‍ಇ ಆ್ಯಂಡ್ ಟ್ರಾನ್ಸ್​ಪೋರ್ಟರ್​) – 6* ಸೆಮಿ ಸ್ಕಿಲ್ಡ್ ರಿಗ್ಗರ್ – 2* ಡ್ರೈವರ್ (ಅಂಬ್ಯುಲೆನ್ಸ್ ಹಾಗೂ ಇತರ ವಾಹನ) – 1* ನರ್ಸ್ – 1* ಪರ್ಸನಲ್ ಸೆಕ್ಟ್ರೆಟರಿ – 1* ಪ್ರಾಜೆಕ್ಟ್ ಅಸಿಸ್ಟೆಂಟ್ (ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್, ಮೆಟಿರಿಯಲ್ಸ್, ಕಮರ್ಷಿಯಲ್, ಫೈನಾನ್ಸ್) – 5
ಶೈಕ್ಷಣಿಕ ಅರ್ಹತೆ:4ನೇ ತರಗತಿ, ಎಸ್ಸೆಸ್ಸೆಲ್ಸಿ, ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್-ಐಟಿಐ, ನರ್ಸಿಂಗ್‍ನಲ್ಲಿ ಡಿಪ್ಲೋಮಾ, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್, ಕಮರ್ಷಿಯಲ್ ಪ್ರಾಕ್ಟೀಸ್, ಇನ್ಫಾರ್ಮೇಷನ್ ಟೆಕ್ನಾಲಜಿ, ಕಂಪ್ಯೂಟರ್ ಇಂಜಿನಿಯರಿಂಗ್‍ನಲ್ಲಿ ಡಿಪ್ಲೋಮಾ, ಬಿಎ, ಬಿಎಸ್ಸಿ, ಬಿಕಾಂ, ಬಿಸಿಎ ಪದವಿ. ಪದವಿಯಲ್ಲಿ ಕನಿಷ್ಠ ಶೇ.60 ಅಂಕ ಪಡೆದಿರಬೇಕು. ಆಯ್ದ ಹುದ್ದೆಗಳಿಗೆ ಟೈಪಿಂಗ್ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ವಯೋಮಿತಿ:11.2.2021ಕ್ಕೆ ಅನ್ವಯವಾಗುವಂತೆ ಗರಿಷ್ಠ 30 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.
ವೇತನ ಹಾಗೂ ಸೇವಾ ಅವಧಿ:ಎಲ್ಲ ಹುದ್ದೆಗಳು 3 ವರ್ಷದ ಅವಧಿಗೆ ಒಳಪಟ್ಟಿದ್ದು, ಅಭ್ಯರ್ಥಿಗಳ ಕಾರ್ಯಕ್ಷಮತೆ ಆಧರಿಸಿ ಅವಧಿ ವಿಸ್ತರಿಸಲಾಗುವುದು. ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ 23,300 ರೂ.ನಿಂದ 25,900 ರೂ. ವೇತನ ಜತೆ ಹೆಚ್ಚುವರಿ ಅವಧಿ ಕೆಲಸಕ್ಕಾಗಿ ಮಾಸಿಕ 4,900 ರೂ. ನಿಂದ 5,400 ರೂ. ನೀಡಲಾಗುವುದು. ಪ್ರತಿ ವರ್ಷ ವೇತನ ಹೆಚ್ಚಳವಾಗುವುದು.
ನೇರ ಸಂದರ್ಶನ ನಡೆಯುವ ದಿನ:2021ರ ಫೆ.9 ರಿಂದ 11ರ ವರೆಗೆ ಬೆಳಗ್ಗೆ 9 ರಿಂದ ಮಧ್ಯಾಹ್ನ 2 ರ ವರೆಗೆ.ಸಂದರ್ಶನ ನಡೆಯುವ ಸ್ಥಳ: Don Bosco Technical Institute, 23 Darga Road, Park Circus, Kolkata – 700017.
ಅಧಿಸೂಚನೆಗೆ:https://bit.ly/3q1VEteಮಾಹಿತಿಗೆ:https://cochinshipyard.com
ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:
https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/
ವಿವಿಧ ಇಂಜಿನಿಯರಿಂಗ್​ ಪದವೀಧರರಿಗೆ ಇಲ್ಲಿದೆ ಉದ್ಯೋಗಾವಕಾಶ- 38 ಹುದ್ದೆಗಳು ಖಾಲಿ

ಪಂಚಾಯತ್ ರಾಜ್ ಇಲಾಖೆಯಲ್ಲಿ ಕೆಲಸ ಮಾಡಲು ಇಲ್ಲಿದೆ ಸುವರ್ಣಾವಕಾಶ

ಡಿಜಿಟಲ್ ಶಿಕ್ಷಣ ಸಂಸ್ಥೆಯಲ್ಲಿ 433 ಹುದ್ದೆಗಳು ಖಾಲಿ- ಎಸ್​ಎಸ್​ಎಲ್​ಸಿಯಾದವರಿಗೂ ಅವಕಾಶ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:7 + 8 =
Remember me
