ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ(ಕೆಪಿಸಿಎಲ್) ಅಧೀನ ಸಂಸ್ಥೆ ಆಗಿರುವ ಯಲಹಂಕದಲ್ಲಿರುವ ಕೆಪಿಸಿ ಗ್ಯಾಸ್ ಪವರ್ ಕಾರ್ಪೋರೇಷನ್ ಲಿಮಿಟೆಡ್‍ನಲ್ಲಿ ಶಿಶಿಕ್ಷು ತರಬೇತಿಗೆ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ.ಒಟ್ಟು ಸ್ಥಾನಗಳು: 12
ಕೆಪಿಸಿಎಲ್‍ನಲ್ಲಿ ತರಬೇತಿ ನಂತರ ಅಭ್ಯರ್ಥಿಗಳನ್ನು ಬಿಡುಗಡೆ ಮಾಡಲಾಗುವುದು ಹಾಗೂ ಈ ಅಭ್ಯರ್ಥಿಗಳನ್ನು ನಿಗಮದ ಕಾಯಂ ಸೇವೆಗೆ ಪರಿಗಣಿಸಲಾಗುವುದಿಲ್ಲ. ಅಭ್ಯರ್ಥಿಗಳು ಕಡ್ಡಾಯವಾಗಿ ಆನ್‍ಲೈನ್ ಮೂಲಕವೇ ಅರ್ಜಿ ಸಲ್ಲಿಸತಕ್ಕದ್ದು.
ಶಿಶಿಕ್ಷು ವೃತ್ತಿ ವಿವರ* ಐಟಿಐ (ಎಲೆಕ್ಟ್ರಿಷಿಯನ್)- 3ಎಲೆಕ್ಟ್ರಿಷಿಯನ್‍ನಲ್ಲಿ ಐಟಿಐ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ತರಬೇತಿ ಅವಧಿಯು 1 ವರ್ಷದಾಗಿದೆ. ಈ ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಮಾಸಿಕ 10,000 ರೂ. ತರಬೇತಿ ಭತ್ಯೆ ನೀಡಲಾಗುವುದು.
* ಐಟಿಐ ಫಿಟ್ಟರ್ – 3ಫಿಟ್ಟರ್‍ನಲ್ಲಿ ಐಟಿಐ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಮಾಸಿಕ 10,000 ರೂ. ತರಬೇತಿ ಭತ್ಯೆ ಇದ್ದು, ತರಬೇತಿ ಅವಧಿಯು 1 ವರ್ಷದ್ದಾಗಿದೆ.
* ಅಸಿಸ್ಟೆಂಟ್ ಫ್ರಂಟ್​ ಆಫೀಸ್ ಮ್ಯಾನೇಜರ್ – 6ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ತರಬೇತಿ ಅವಧಿಯು 1 ವರ್ಷ 3 ತಿಂಗಳದ್ದಾಗಿದೆ. ಮಾಸಿಕ 7,000 ರೂ. ತರಬೇತಿ ಭತ್ಯೆ ನಿಗದಿಯಾಗಿದೆ.
ಸೂಚನೆ: ಕೆಪಿಸಿಎಲ್‍ನಲ್ಲಿ ಈಗಾಗಲೇ ಶಿಶಿಕ್ಷು ತರಬೇತಿ ಪಡೆದಿರುವ ಅಭ್ಯರ್ಥಿಗಳು ಮತ್ತೆ ತರಬೇತಿಗೆ ಅರ್ಹರಾಗಿರುವುದಿಲ್ಲ. ಆಫ್​ಲೈನ್ ಮೂಲಕ ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಅಭ್ಯರ್ಥಿಗಳು ಎಲ್ಲ ಅಗತ್ಯ ದಾಖಲೆಗಳನ್ನು ಚಾಲ್ತಿಯಲ್ಲಿರುವ ತಮ್ಮ ಸ್ವಂತ ಇಮೇಲ್ ಮೂಲಕ ಕಳುಹಿತಕ್ಕದ್ದು. ಆನ್‍ಲೈನ್ ಅರ್ಜಿಯಲ್ಲಿ ಅಭ್ಯರ್ಥಿಗಳು ಅಪೂರ್ಣ ಮಾಹಿತಿ ನೀಡಿದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ನೋಂದಾಯಿತರಾಗಿ: ಐಟಿಐ/ ಐಟಿಐಯೇತರ ಶಿಶಿಕ್ಷು ತರಬೇತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳುhttps://apprenticeshipindia.orgದಲ್ಲಿ ಮೊದಲು ಹೆಸರು ನೋಂದಣಿ ಮಾಡಿಕೊಳ್ಳಬೇಕು. ನಂತರ ಕೆಪಿಸಿಎಲ್ ಗ್ಯಾಸ್ ಪವರ್ ಕಾರ್ಪೋರೇಷನ್ ಯಲಹಂಕ ಕಂಬೈನ್ಡ ಸೈಕಲ್ ಪವರ್ ಪ್ಲಾಂಟ್ ಎಸ್ಟಾಬ್ಲಿಷ್‍ಮೆಂಟ್‍ಗೆ ಆನ್‍ಲೈನ್ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಕೊನೇ ದಿನ: 30.3.2021
ನೋಂದಾಯಿತರಾಗುವ ವೆಬ್‍ಸೈಟ್:https://apprenticeshipindia.orgಮಾಹಿತಿಗೆ ದೂ. ಸಂ.: 9008901376/ 7483246567
ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:
https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/
ವಿಜ್ಞಾನ ಪದವೀಧರರಿಗೆ ಉತ್ತಮ ಅವಕಾಶ: ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ

ಸೇನೆಗೆ ಸೇರುವ ಆಸೆಯೆ? ಇಲ್ಲಿದೆ ಉತ್ತಮ ಅವಕಾಶ- ಎಸ್​ಎಸ್​ಎಲ್​ಸಿ ಪಾಸಾದವರೂ ಪಾಲ್ಗೊಳ್ಳಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
