ಪ್ಲಾಸ್ಮಾ ರಿಸರ್ಚ್ ಇನ್​ಸ್ಟಿಟ್ಯೂಟ್ ಪರಮಾಣು ಶಕ್ತಿ ಇಲಾಖೆ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ಲಾಸ್ಮಾ ಫಿಜಿಕ್ಸ್, ಮ್ಯಾಗ್ನೆಟಿಕ್ ಕನ್​ಫೈನ್​ವೆುಂಟ್ ಫ್ಯೂಷನ್, ಇಂಡಸ್ಟ್ರಿಯಲ್ ಆಂಡ್ ಸೊಸೈಟಲ್ ಅಪ್ಲಿಕೇಷನ್ ಸಂಶೋಧನೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ ಸಂಸ್ಥೆಯ ವಿವಿಧ ವಿಭಾಗದಲ್ಲಿರುವ ಪ್ರಾಜೆಕ್ಟ್ ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಒಟ್ಟು ಸ್ಥಾನಗಳು: 81
ಗುಜರಾತ್​ನ ಗಾಂಧಿನಗರದಲ್ಲಿರುವ ಪ್ಲಾಸ್ಮಾ ಸಂಶೋಧನಾ ಕೇಂದ್ರ ಅಥವಾ ಲ್ಯಾಬೊರೇಟರಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಆನ್​ಲೈನ್ ಅರ್ಜಿಗಳಿಗೆ ಮಾತ್ರ ಅವಕಾಶ ಎಂದು ತಿಳಿಸಲಾಗಿದೆ.
ಹುದ್ದೆ ವಿವರ
* ಮೆಕಾನಿಕಲ್ – 28
* ಫಿಜಿಕ್ಸ್ – 16
* ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ಸ್ – 18
* ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್/ ಎಲೆಕ್ಟ್ರಾನಿಕ್ಸ್ ಆಂಡ್ ಇನ್​ಸ್ಟ್ರುಮೆಂಟೇಷನ್ – 10
* ಕಂಪ್ಯೂಟರ್ ಅಪ್ಲಿಕೇಷನ್ – 4
* ಇನ್​ಸ್ಟ್ರುಮೆಂಟೇಷನ್/ ಇನ್​ಸ್ಟ್ರುಮೆಂಟೇಷನ್ ಆಂಡ್ ಕಂಟ್ರೋಲ್ – 5
ವಿದ್ಯಾರ್ಹತೆ: ಕಂಪ್ಯೂಟರ್ ಅಪ್ಲಿಕೇಷನ್, ವಿಜ್ಞಾನ (ಫಿಜಿಕ್ಸ್)ದಲ್ಲಿ ಪದವಿ, ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್/ ಎಲೆಕ್ಟ್ರಾನಿಕ್ಸ್ ಆಂಡ್ ಇನ್​ಸ್ಟ್ರುಮೆಂಟೇಷನ್, ಇನ್​ಸ್ಟ್ರುಮೆಂಟೇಷನ್/ ಇನ್​ಸ್ಟ್ರುಮೆಂಟೇಷನ್ ಆಂಡ್ ಕಂಟ್ರೋಲ್ ಇಂಜಿನಿಯರಿಂಗ್, ಮೆಕಾನಿಕಲ್ ಇಂಜಿನಿಯರಿಂಗ್​ನಲ್ಲಿ ಡಿಪ್ಲೊಮಾ ಮಾಡಿರಬೇಕು.
ವೇತನ: ಎಲ್ಲ ಹುದ್ದೆಗೂ ಮಾಸಿಕ 20,000 ರೂ. ವೇತನ ಹಾಗೂ ಮನೆ ಬಾಡಿಗೆ ಭತ್ಯೆ ನೀಡಲಾಗುವುದು.
ವಯೋಮಿತಿ: ಗರಿಷ್ಠ 35 ವರ್ಷ ವಯೋಮಿತಿ ನಿಗಿಪಡಿಸಲಾಗಿದ್ದು, ಸರ್ಕಾರದ ನಿಯಮದನ್ವಯ ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.
ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ, ಮಾಜಿ ಸೈನಿಕ, ಆರ್ಥಿಕವಾಗಿ ದುರ್ಬಲವಾಗಿರುವ ಹಾಗೂ ಮಹಿಳಾ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳಿಗೆ 200 ರೂ. ಶುಲ್ಕ ನಿಗದಿಪಡಿಸಲಾಗಿದ್ದು, ಆನ್​ಲೈನ್ ಮೂಲಕ ಪಾವತಿಸಲು ಸೂಚಿಸಲಾಗಿದೆ.
* ಲೈಬ್ರರಿ ಟ್ರೇನಿ – 4
ಯುಜಿಸಿಯಿಂದ ಮಾನ್ಯತೆ ಪಡೆದ ವಿವಿಯಿಂದ ಲೈಬ್ರರಿ ಮತ್ತು ಇನ್​ಫಮೇಷನ್ ಸೈನ್ಸ್​ನಲ್ಲಿ ಸ್ನಾತಕೋತ್ತರ ಪದವಿಯನ್ನು 2019/ ಅದಕ್ಕಿಂತ ಹಿಂದಿನ ವರ್ಷದಲ್ಲಿ ಪಡೆದಿದ್ದು, ಕನಿಷ್ಠ ಶೇ.60 ಅಂಕ ಗಳಿಸಿರಬೇಕು. ಇಂಗ್ಲಿಷ್​ನಲ್ಲಿ ಉತ್ತಮ ಸಂವಹನ ಕೌಶಲ ಕೇಳಲಾಗಿದೆ. ಗರಿಷ್ಠ 26 ವರ್ಷ ವಯೋಮಿತಿ ನಿಗದಿಪಡಿಸಿದ್ದು, ಮಾಸಿಕ 20,000 ರೂ. ವೇತನ ಇದೆ. ಅರ್ಜಿ ಸಲ್ಲಿಸಲು 25.1.2022 ಕೊನೇ ದಿನವಾಗಿದ್ದು, ಅಧಿಸೂಚನೆಗೆ https://bit.ly/3JMPdVc ನೋಡಿ.
ಅರ್ಜಿ ಸಲ್ಲಿಸಲು ಕೊನೇ ದಿನ: 17.1.2022
ಅಧಿಸೂಚನೆಗೆ:https://bit.ly/3teKwO7
ಮಾಹಿತಿಗೆ:http://www.ipr.res.in
ಸ್ನಾತಕೋತ್ತರ ಪದವೀಧರರಿಗೆ ಗುಡ್‌ನ್ಯೂಸ್‌: ಕೇಂದ್ರ ಸರ್ಕಾರದಿಂದ 177 ಹುದ್ದೆಗಳಿಗೆ ಆಹ್ವಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
