ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ಶ್ರೀ ಅಟಲ್​ ಬಿಹಾರಿ ವಾಜಪೇಯಿ ವೈದ್ಯಕಿಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಮತ್ತು ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹೈದರಾಬಾದ್​ ಕರ್ನಾಟಕ ಅಭ್ಯರ್ಥಿಗಳಿಗೆ ಕೆಲ ಹುದ್ದೆಗಳನ್ನು ಮೀಸಲಿಡಲಾಗಿದೆ.
ಹುದ್ದೆಗಳ ವಿವರ* ಅಸಿಸ್ಟೆಂಟ್​ ಪ್ರೊಫೆಸರ್​-33ಅಟಾನಮಿ-2, ಸೈಕಾಲಜಿ-2, ಬಯೋಕೆಮಿಸ್ಟ್ರಿ-2, ಫಾರ್ಮಾಕಾಲಜಿ-2, ಪ್ಯಾಥಾಲಜಿ-1, ಮೈಕ್ರೋಬಯೋಲಜಿ-1, ಫಾರೆನ್ಸಿಕ್​ ಮೆಡಿಸಿನ್​-1, ಕಮ್ಯುನಿಟಿ ಮೆಡಿಸಿನ್​-4, ಜನರಲ್​ ಮೆಡಿಸಿನ್​-3, ಪೀಡಿಯಾಟ್ರಿಕ್​-1, ಲ್ಮನರಿ ಮೆಡಿಸಿನ್​-1, ಡರ್ಮಟಾಲಜಿ-1, ಸೈಕಿಯಾಟ್ರಿ-1, ಜನರಲ್​ ಸರ್ಜರಿ-3, ಆಥೋರ್ಪೆಡಿಕ್ಸ್​-1, ಇಎನ್​ಟಿ-1, ಆಪ್ತಲ್ಮಾಲಜಿ-1, ಒಬ್​ಸ್ಟೆಟ್ರಿಕ್ಸ್​ ಆ್ಯಂಡ್​ ಗೈನಕಾಲಜಿ-2, ಅನಸ್ತೇಷಿಯಾ-2, ರೇಡಿಯೋ-ಡಯೋಗ್ನಾಸಿಸ್​-1, ಡೆಂಟಿಸ್ಟ್ರಿ-1*ಪ್ರೊಫೆಸರ್​-6ಬಯೋಕೆಮಿಸ್ಟ್ರಿ-1, ಫಾರ್ಮಾಕಾಲಜಿ-1, ಜನರಲ್​ ಮೆಡಿಸಿನ್​-1, ಒಬ್​ಸ್ಟೆಟ್ರಿಕ್ಸ್​ ಆ್ಯಂಡ್​ ಗೈನಕಾಲಜಿ-1, ಅನಸ್ತೇಷಿಯಾಲಜಿ-1, ರೇಡಿಯೋ-ಡಯೋಗ್ನಾಸಿಸ್​-1* ಅಸೋಸಿಯೇಟ್​ ಪ್ರೊಫೆಸರ್​-22ಅನಾಟಮಿ-1, ಸೈಕಾಲಜಿ-1, ಬಯೋಕೆಮಿಸ್ಟ್ರಿ-1, ಫಾರ್ಮಕಾಲಜಿ-1, ಪ್ಯಾಥಾಲಜಿ-3, ಮೈಕ್ರೋಬಯಾಲಜಿ-1, ಫಾರೆನ್ಸಿಕ್​ ಮೆಡಿಸಿನ್​-1, ಕಮ್ಯುನಿಟಿ ಮೆಡಿಸಿನ್​-2, ಜನರಲ್​ ಮೆಡಿಸಿನ್​-2, ಪೀಡಿಯಾಟ್ರಿಕ್ಸ್​-1, ಜನರಲ್​ ಸರ್ಜರಿ-2, ಆಥೋರ್ಪೆಡಿಕ್ಸ್​-1, ಒಬ್​ಸ್ಟೆಟ್ರಿಕ್ಸ್​ ಆ್ಯಂಡ್​ ಗೈನಕಾಲಜಿ-1, ಅನಸ್ತೇಷಿಯಾಲಜಿ-2, ರೇಡಿಯೋ-ಡಯೋಗ್ನಾಸಿಸ್​-1, ಡೆಂಟಿಸ್ಟ್ರಿ-1
ವಿದ್ಯಾರ್ಹತೆಅಸಿಸ್ಟೆಂಟ್​ ಪ್ರೊಫೆಸರ್​ ಹುದ್ದೆಗೆ ಕಡ್ಡಾಯವಾಗಿ ಎಂಬಿಬಿಎಸ್​ ಪದವಿ ಪೂರ್ಣಗೊಳಿಸಿರಬೇಕು. ಇಂಡಿಯನ್​ ಮೆಡಿಕಲ್​ ಅಥವಾ ಸ್ಟೇಟ್​ ಮೆಡಿಕಲ್​ನಲ್ಲಿ ನೋಂದಣಿಯಾಗಿರಬೇಕು. ಉಳಿದ ಹುದ್ದೆಗಳಿಗೆ ಸರ್ಕಾರದ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಸಂಬಂಧಪಟ್ಟ ವಿಷಯಗಳಲ್ಲಿ ಎಂಡಿ/ಎಂಎಸ್​/ಡಿಎನ್​ಬಿ ಪದವಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹರು. ಕನಿಷ್ಠ 5ರಿಂದ 8 ವರ್ಷ ವೃತ್ತಿ ಅನುಭವ ಹೊಂದಿರಬೇಕು.
ವಯೋಮಿತಿಅಸಿಸ್ಟೆಂಟ್​ ಪ್ರೊಫೆಸರ್​ ಹುದ್ದೆಗೆ 45 ವರ್ಷ ವಯೋಮಿತಿ ನಿಗದಿಪಡಿಸಿದ್ದು, ಒಬಿಸಿ ಅಭ್ಯರ್ಥಿಗಳಿಗೆ 45 ವರ್ಷ, ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 50 ವರ್ಷ ವಯೋಸಡಿಲಿಕೆ ಇರಲಿದೆ. ಪ್ರೊಫೆಸರ್​ಗೆ 50 ವರ್ಷ, ಅಸೋಸಿಯೇಟ್​ ಪ್ರೊಫೆಸರ್​ಗೆ 45 ವರ್ಷ ವಯೋಮಿತಿ ನಿಗದಿಪಡಿಸಿದ್ದು, ಒಬಿಸಿ ಅಭ್ಯರ್ಥಿಗೆ 48, ಎಸ್ಸಿ, ಎಸ್ಟಿ ಅಭ್ಯರ್ಥಿಗೆ 50 ವರ್ಷ ನಿಗದಿಪಡಿಸಲಾಗಿದೆ.
ವೇತನಪ್ರೊಫೆಸರ್​ಗೆ 1,44,200ರಿಂದ 2,18,200 ರೂ., ಅಸೋಸಿಯೇಟ್​ ಪ್ರೊಫೆಸರ್​ಗೆ 1,31,400ರಿಂದ 2,17,100 ರೂ., ಅಸಿಸ್ಟೆಂಟ್​ ಪ್ರೊಫೆಸರ್​ಗೆ 79,800ರಿಂದ 2,11,500 ರೂ. ವರೆಗೆ ಮಾಸಿಕ ವೇತನ ಇರಲಿದೆ.
ಆಯ್ಕೆ ಪ್ರಕ್ರಿಯೆಶೈಣಿಕ ಅಂಕ ಮತ್ತು ವೃತ್ತಿ ಅನುಭವ ಆಧರಿಸಿ ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಅಲ್ಲಿನ ಅಂಕಗಳ ಆಧಾರದ ಮೇಲೆ ಅರ್ಹರನ್ನು ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸುವ ವಿಧಾನಗ್ರಾಮೀಣ, ಕನ್ನಡ ಮಾಧ್ಯಮ ಹೀಗೆ ಇತರ ಕೋಟಾದಡಿ ಅರ್ಜಿ ಸಲ್ಲಿಸುವವರು ದಾಖಲೆ ನಮೂದಿಸಬೇಕು. ಅರ್ಜಿಯನ್ನು ಡೌನ್​ಲೋಡ್​ ಮಾಡಿಕೊಂಡು ಅಗತ್ಯ ದಾಖಲೆಗಳೊಂದಿಗೆ ನಿಗದಿತ ದಿನಾಂಕದೊಳಗೆ 2,000 ರೂ. ಶುಲ್ಕದೊಂದಿಗೆ ತಿಳಿಸಿದ ವಿಳಾಸಕ್ಕೆ ಸಲ್ಲಿಸತಕ್ಕದ್ದು.
ಅರ್ಜಿ ಸಲ್ಲಿಸಲು ಕೊನೇ ದಿನ: 26.8.2022ಅರ್ಜಿ ಸಲ್ಲಿಸಬೇಕಾದ ವಿಳಾಸ: Director cum Dean Office, Shri Atal Bihari Vajapayee Medical College – Research Institute, Shivajinagar, Bengaluru – 560 001ಅಧಿಸೂಚನೆಗೆ:https://bit.ly/3d5OJgK, https://bit.ly/3BWYJUdಮಾಹಿತಿಗೆ:http://sabvmcri.karnataka.gov.in
ಜಿಮ್​ನಲ್ಲಿ ವರ್ಕ್​ಔಟ್​ ಮಾಡುತ್ತಿದ್ದಾಗ ಹೃದಯಾಘಾತ: ಜನಪ್ರಿಯ ಹಾಸ್ಯನಟ ರಾಜು ಶ್ರೀವಾಸ್ತವ್​ ಆಸ್ಪತ್ರೆಗೆ
VIDEO: ಮತ್ತೊಮ್ಮೆ ಬೆಚ್ಚಿಬಿದ್ದ ಪುಲ್ವಾಮಾ; ತಪ್ಪಿತು ಭಾರಿ ದುರಂತ- 30 ಕೆ.ಜಿ ಸ್ಫೋಟಕ ವಶಕ್ಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 8 =
Remember me
