ಮಂಗಳೂರು:ಮಂಗಳೂರಿನಲ್ಲಿರುವ ಒಎನ್‍ಜಿಸಿ ಮಂಗಳೂರು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಒಎಂಪಿಎಲ್) ಗ್ರಾಜುಯೇಟ್ ಮತ್ತು ಟೆಕ್ನೀಷಿಯನ್ ಅಪ್ರೆಂಟೀಸ್‍ಗೆ ಅರ್ಜಿ ಅಹ್ವಾನಿಸಿ ಅಧಿಸೂಚನೆ ಹೊರಡಿಸಿದೆ.
ಒಎಂಪಿಎಲ್‍ನಲ್ಲಿ ಖಾಲಿ ಇರುವ 25 ಹುದ್ದೆಗಳು ಒಂದು ವರ್ಷದ ಒಪ್ಪಂದಕ್ಕೆ ಒಳಪಟ್ಟಿದ್ದು, ಸಾಮಾನ್ಯವರ್ಗಕ್ಕೆ 13 ಸ್ಥಾನ, ಎಸ್‍ಸಿಗೆ 3, ಎಸ್‍ಟಿಗೆ 2, ಇತರ ಹಿಂದುಳಿದ ವರ್ಗಕ್ಕೆ 7 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಕಡ್ಡಾಯವಾಗಿ ಫೋಟೋ ಮತ್ತು ಸಹಿಯನ್ನು ಅಪ್‍ಲೋಡ್ ಮಾಡಬೇಕು.
ಹುದ್ದೆಗಳ ವಿವರ*ಗ್ರಾಜುಯೇಟ್ ಅಪ್ರೆಂಟೀಸ್ ತರಬೇತಿ– ಕೆಮಿಕಲ್ – 8– ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ – 3– ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್/ ಎಲೆಕ್ಟ್ರಾನಿಕ್ಸ್ ಆ್ಯಂಡ್ ಇನ್‍ಸ್ಟ್ರುಮೆಂಟೇಷನ್/ ಇನ್‍ಸ್ಟ್ರುಮೆಂಟೇಷನ್ – 2– ಮೆಕ್ಯಾನಿಕಲ್ – 4* ಟೆಕ್ನಿಷಿಯನ್ ಅಪ್ರೆಂಟೀಸ್ ತರಬೇತಿ– ಕೆಮಿಕಲ್ – 1– ಎಲೆಕ್ಟ್ರಿಕಲ್/ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ – 3– ಮೆಕ್ಯಾನಿಕಲ್ – 4
ಶೈಕ್ಷಣಿಕ ಅರ್ಹತೆ:ಹುದ್ದೆ ಸಂಬಂಧಿತ ವಿಷಯಗಳಲ್ಲಿ ಇಂಜಿನಿಯರಿಂಗ್ ಡಿಪೆÇ್ಲಮಾ. ಸಾಮಾನ್ಯ ವರ್ಗದ ಅಭ್ಯರ್ಥಿಗಳು ಕನಿಷ್ಠ ಶೇ.55 ಅಂಕ ಪಡೆದಿರಬೇಕು. ಮೀಸಲಾತಿ ಅಭ್ಯರ್ಥಿಗಳು ಶೇ.45-40 ಅಂಕ ಪಡೆದಿರಬೇಕು. ಅಭ್ಯರ್ಥಿಗಳು 2018, 2019, 2020ರಲ್ಲಿ ಉತ್ತೀರ್ಣರಾದವರು ಮಾತ್ರ ಅರ್ಜಿ ಸಲ್ಲಿಸಬೇಕು.
ಸ್ಟೈಪೆಂಡ್:ಗ್ರಾಜುಯೇಟ್ ಅಪ್ರೆಂಟೀಸ್‍ಗೆ ಮಾಸಿಕ 10,000 ರೂ. ಹಾಗೂ ಟೆಕ್ನಿಷಿಯನ್ ಅಪ್ರೆಂಟೀಸ್‍ಗೆ ಮಾಸಿಕ 8,000 ರೂ. ಸ್ಟೈಪೆಂಡ್ ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ:ಶೈಕ್ಷಣಿಕ ಅಂಕಗಳನ್ನು ಆಧರಿಸಿ ಆಯ್ಕೆ ಮಾಡಲಾಗುತ್ತದೆ. ಸಮಾನ ಅಂಕ ಪಡೆದ ಅಭ್ಯರ್ಥಿಗಳನ್ನು ವಯಸ್ಸಿನ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡಲಾಗುವುದು. (ಮೀಸಲಾತಿ ಅಭ್ಯರ್ಥಿಗಳಿಗೆ ಪ್ರತ್ಯೇಕ ಪಟ್ಟಿ ಸಿದ್ಧಪಡಿಸಲಾಗುವುದು) ಆಯ್ಕೆಯಾದ ಅಭ್ಯರ್ಥಿಗಳು 7 ದಿನದ ಒಳಗಾಗಿ ಮೇಲ್ ಮುಖಾಂತರ ಶೈಕ್ಷಣಿಕ ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ದಾಖಲೆಗಳ ಪರಿಶೀಲನೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಲಾಗುವುದು.
ಅರ್ಜಿ ಸಲ್ಲಿಸಲು ಕೊನೇ ದಿನ: 01.01.2021ಅಧಿಸೂಚನೆಗೆ ಇಲ್ಲಿ ಕ್ಲಿಕ್ಕಿಸಿ:https://bit.ly/2JAmQyG
ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ:https://www.ompl.co.in/
ಇನ್ನೂ ಹೆಚ್ಚಿನ ಉದ್ಯೋಗಗಳ ಮಾಹಿತಿಗೆhttps://www.vijayavani.net/ವಿಭಾಗದ ಅಂಕಣ ಕಾಲಂನಲ್ಲಿ ಉದ್ಯೋಗಮಿತ್ರ ಕ್ಲಿಕ್ಕಿಸಿ.
ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳಿಗೆ ಆಹ್ವಾನ

ಎಸ್​ಎಸ್​ಎಲ್​ಸಿ, ಡಿಪ್ಲೋಮಾ, ಪದವೀಧರರಿಗೆ ಕೇಂದ್ರ ಸರ್ಕಾರದ 74 ಹುದ್ದೆಗಳಿಗೆ ಆಹ್ವಾನ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four + 2 =
Remember me
