ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್​ (ಎನ್‍ಟಿಪಿಸಿ) ಲಿಮಿಟೆಡ್ ದೆಹಲಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ.ಒಟ್ಟು ಹುದ್ದೆಗಳು: 35
ಎನ್‍ಟಿಪಿಸಿಯಲ್ಲಿ ಸೇಫ್ಟಿ, ಐಟಿ, ಸೋಲಾರ್ ಪಿವಿ ವಿಭಾಗಗಳಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಪ್ರತಿ ಹುದ್ದೆಗೂ ಕನಿಷ್ಠ 3 ವರ್ಷದ ವೃತ್ತಿ ಅನುಭವ ಕೇಳಲಾಗಿದೆ. ಸರ್ಕಾರದ ನಿಯಮದನ್ವಯ ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.
ಹುದ್ದೆ ವಿವರ* ಎಕ್ಸಿಕ್ಯೂಟೀವ್ (ಸೇಫ್ಟಿ) – 25ಮೆಕ್ಯಾನಿಕಲ್/ ಪ್ರೊಡಕ್ಷನ್/ ಎಲೆಕ್ಟ್ರಿಕಲ್/ ಸಿವಿಲ್/ ಪವರ್ ಇಂಜಿನಿಯರಿಂಗ್/ ಇಂಡಸ್ಟ್ರಿಯಲ್ ಸೇಫ್ಟಿ/ ಫೈರ್ ಆ್ಯಂಡ್ ಸೇಫ್ಟಿಯಲ್ಲಿ ಪದವಿ ಪಡೆದಿದ್ದು, ಪದವಿಯಲ್ಲಿ ಕನಿಷ್ಠ ಶೇ.60 ಅಂಕ ಪಡೆದಿರಬೇಕು. ಇಂಡಸ್ಟ್ರಿಯಲ್ ಸೇಫ್ಟಿ/ ಯಲ್ಲಿ ಡಿಪೆÇ್ಲಮಾ ಮಾಡಿದ ಅಭ್ಯಥಿಗಳು ಅರ್ಜಿ ಸಲ್ಲಿಸಬಹುದು. ಗರಿಷ್ಠ 35 ವರ್ಷವಾಗಿದ್ದು, ವೃತ್ತಿ ಅನುಭವ ಇರುವವರು ಅರ್ಹರು.
* ಎಕ್ಸಿಕ್ಯೂಟೀವ್ (ಐಟಿ-ಡೇಟಾ ಸೆಂಟರ್/ ಡೇಟಾ ರಿಕವರಿ) – 8ಕಂಪ್ಯೂಟರ್ ಸೈನ್ಸ್/ ಐಟಿ/ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್‍ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದು, ಕನಿಷ್ಠ ಶೇ.60 ಅಂಕ ಪಡೆದಿರಬೇಕು. ಗರಿಷ್ಠ 35 ವರ್ಷ ವಯೋಮಿತಿ ನಿಗದಿಯಾಗಿದೆ.
* ಸೀನಿಯರ್ ಎಕ್ಸಿಕ್ಯೂಟೀವ್ (ಸೋಲಾರ್) – 1ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದು, ಶೇ. 60 ಅಂಕ ಪಡೆದಿರಬೇಕು. ಗರಿಷ್ಠ ವಯೋಮಿತಿ 45 ನಿಗದಿಯಾಗಿದ್ದು, ವೃತ್ತಿ ಅನುಭವ ಅವಶ್ಯ.
* ಸ್ಪೆಷಲಿಸ್ಟ್ (ಸೋಲಾರ್) – 1ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿಯಲ್ಲಿ ಶೇ.60 ಅಂಕ ಪಡೆದಿರಬೇಕು. ಎಂ.ಟೆಕ್, ಎಂಬಿಎ ಮಾಡಿದ ಅಭ್ಯರ್ಥಿಗಳಿಗೂ ಅವಕಾಶ ಇದೆ. ಗರಿಷ್ಠ ವಯೋಮಿತಿ 55 ವರ್ಷ.
ಮೀಸಲಾತಿ: ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 20 ಸ್ಥಾನ, ಇತರ ಹಿಂದುಳಿದ ವರ್ಗಕ್ಕೆ 8, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 2, ಎಸ್ಸಿಗೆ 4, ಎಸ್ಟಿಗೆ 1 ಸ್ಥಾನಗಳನ್ನು ಮೀಸಲಿರಿಸಲಾಗಿದೆ.
ವೇತನ: ಎಕ್ಸಿಕ್ಯೂಟೀವ್ ಹುದ್ದೆಗೆ ಮಾಸಿಕ 71,000 ರೂ. ನಿಗದಿಯಾಗಿದೆ. ಸೀನಿಯರ್ ಎಕ್ಸಿಕ್ಯೂಟೀವ್ ಹಾಗೂ ಸ್ಪೆಷಲಿಸ್ಟ್ ಹುದ್ದೆಗೆ ಅಭ್ಯರ್ಥಿಗಳ ವೃತ್ತಿ ಅನುಭವ ಆಧರಿಸಿ ವೇತನ ನಿಗದಿಪಡಿಸಲಾಗುವುದು.
ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ, ಮಾಜಿ ಸೈನಿಕ, ಮಹಿಳಾ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 300 ರೂ. ಪಾವತಿಸಬೇಕು.
ಅರ್ಜಿ ಸಲ್ಲಿಸಲು ಕೊನೇ ದಿನ: 15.4.2021ಅಧಿಸೂಚನಗೆ:https://bit.ly/3dqlSjOಮಾಹಿತಿಗೆ:http://www.ntpccareers.net
ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:
https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/
ಜಿಲ್ಲಾ ನ್ಯಾಯಾಧೀಶರಿಗೆ, ಪದವೀಧರರಿಗೆ ಉತ್ತಮ ಅವಕಾಶ: ರಾಜ್ಯ ಗ್ರಾಹಕರ ಆಯೋಗದಲ್ಲಿ ನೇಮಕಾತಿ

ಸಿರಿಧಾನ್ಯ ಸಂಶೋಧನಾ ಸಂಸ್ಥೆಗೆ ಬೇಕಾಗಿದ್ದಾರೆ ಟೆಕ್ನಿಕಲ್ ಅಸಿಸ್ಟೆಂಟ್ಸ್- ಕರ್ನಾಟಕದಲ್ಲಿಯೂ ಅವಕಾಶ

ಮಾನವ ಸಂಪನ್ಮೂಲ ವ್ಯಕ್ತಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಡಿಎಸ್​ಐಐಡಿಸಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + ten =
Remember me
