ಭಾರತೀಯ ನೌಕಾಪಡೆಯವಿವಿಧ ಶಾಖೆಗಳಲ್ಲಿ ನೇಮಕಾತಿಗೆ ಶಾರ್ಟ್ ಸರ್ವಿಸ್ ಕಮಿಷನ್(ಎಸ್‍ಎಸ್‍ಸಿ) ಮೂಲಕ ಆಫೀಸರ್ 210 ಹುದ್ದೆಗಳಿಗೆ ಕೇರಳದ ಭಾರತೀಯ ನೌಕಾ ಅಕಾಡೆಮಿ (ಐಎನ್‍ಎ) ಅವಿವಾಹಿತ ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ.
ಐಎನ್‍ಎಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ನವಲ್ ಓರಿಯೆಂಟೇಷನ್ ಕೋರ್ಸ್(ಎನ್‍ಒಸಿ), ನವಲ್ ಓರಿಯೆಂಟೇಷನ್ ಕೋರ್ಸ್ ರೆಗ್ಯುಲರ್, ಸ್ಪೆಷಲ್ ಎನ್‍ಒಸಿ ತರಬೇತಿಗಳನ್ನು ನೀಡಲಾಗುವುದು. ಈ ತರಬೇತಿಯ ಕಾಲಾವಧಿಯು ಹುದ್ದೆಗೆ ಅನುಗುಣವಾಗಿ 4 ವಾರದಿಂದ 44 ವಾರದ ವರೆಗೆ ಇರುತ್ತದೆ.
ಹುದ್ದೆಗಳ ವಿವರ– ಎಕ್ಸಿಕ್ಯೂಟೀವ್ ಶಾಖೆ* ಎಸ್‍ಎಸ್‍ಸಿ ಜನರಲ್ ಸರ್ವೀಸ್ (ಹೈಡ್ರೋ ಕೇಡರ್) – 40* ನವಲ್ ಆರ್ಮಮೆಂಟ್ (ಇನ್‍ಸ್ಪೆಕ್ಟೊರೇಟ್ ಕೇಡರ್) – 16* ಅಬ್ಸರ್ವರ್ – 6* ಪೈಲಟ್ – 15* ಲಾಜಿಸ್ಟಿಕ್ಸ್ – 20* ಎಸ್‍ಎಸ್‍ಸಿ ಎಕ್ಸ್ (ಐಟಿ) – 25
– ತಾಂತ್ರಿಕ ವಿಭಾಗ* ಇಂಜಿನಿಯರಿಂಗ್ ಬ್ರಾಂಚ್ – 30* ಎಲೆಕ್ಟ್ರಿಕಲ್ ವಿಭಾಗ – 40
– ಶೈಕ್ಷಣಿಕ ವಿಭಾಗ* ಎಸ್‍ಎಸ್‍ಸಿ ಎಜುಕೇಷನ್ – 18
ವಿದ್ಯಾರ್ಹತೆ:ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಮೈಕ್ರೋ ಎಲೆಕ್ಟ್ರಾನಿಕ್ಸ್, ಕಂಟ್ರೋಲ್ ಇಂಜಿನಿಯರಿಂಗ್, ಪ್ರೊಡಕ್ಷನ್​, ಇಂಡಸ್ಟ್ರಿಯಲ್  ಪ್ರೊಡಕ್ಷನ್​, ಕಂಪ್ಯೂಟರ್ ಅಪ್ಲಿಕೇಷನ್, ಮೆಟಲರ್ಜಿ, ಕೆಮಿಕಲ್, ಮೆಟಿರಿಯಲ್ ಸೈನ್ಸ್, ಏರೋ ಸ್ಪೇಸ್‍ನಲ್ಲಿ ಬಿಇ, ಬಿ.ಟೆಕ್, ಎಂಇ, ಎಂಟೆಕ್, ಎಂಇಎ, ಬಿಎಸ್ಸಿ, ಎಂಎಸ್ಸಿ(ಮ್ಯಾಥ್ಸ, ಆಪರೇಷನಲ್ ರಿಸರ್ಚ್, ಫಿಜಿಕ್ಸ್, ನ್ಯೂಕ್ಲಿಯರ್ ಫಿಜಿಕ್ಸ್, ಕೆಮಿಸ್ಟ್ರಿ), ಎಂಎ (ಇಂಗ್ಲಿಷ್, ಇತಿಹಾಸ) ಪದವಿಗಳಲ್ಲಿ ಕನಿಷ್ಠ ಶೇ.60 ಅಂಕ ಪಡೆದಿರಬೇಕು.
ವಯೋಮಿತಿ:ಅಬ್ಸರ್ವರ್ ಮತ್ತು ಪೈಲಟ್ ಹುದ್ದೆಗೆ 1997 ಜುಲೈ 2 ಹಾಗೂ 2002 ಜುಲೈ 1ರ ನಡುವೆ ಜನಿಸಿರಬೇಕು. ಶೈಕ್ಷಣಿಕ ವಿಭಾಗದ ಹುದ್ದೆಗಳಿಗೆ 1996 ಜುಲೈ 2 ಹಾಗೂ 2000 ಜುಲೈ 1ರ ನಡುವೆ ಜನಿಸಿರಬೇಕು. ಉಳಿದ ಹುದ್ದೆಗಳಿಗೆ 1996 ಜುಲೈ 2 ಹಾಗೂ 2002 ಜನವರಿ 1ರ ನಡುವೆ ಜನಿಸಿರಬೇಕು.
ಆಯ್ಕೆ ಪ್ರಕ್ರಿಯೆ:ಅಭ್ಯರ್ಥಿಗಳ ಶೈಕ್ಷಣಿಕ ಅಂಕ ಆಧರಿಸಿ ಆಯ್ದ ಅಭ್ಯರ್ಥಿಗಳನ್ನು 1 ಹುದ್ದೆಗೆ 40 ಜನರಂತೆ ಆಯ್ಕೆ ಮಾಡಲಾಗುವುದು. ನಂತರ ಆಯ್ಕೆ ಮಂಡಳಿಯು ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ. ಫೆಬ್ರುವರಿ 21ರ ನಂತರ ಬೆಂಗಳೂರು, ಭೋಪಾಲ್, ವಿಶಾಖಪಟ್ಟಣ, ಕೋಲ್ಕತ್ತಾಗಳಲ್ಲಿ ಸಂದರ್ಶನ ನಡೆಸಲಾಗುವುದು.
ಅರ್ಜಿ ಸಲ್ಲಿಸಲು ಕೊನೇ ದಿನ: 31.12.2020ಅಧಿಸೂಚನೆಗೆ:https://bit.ly/37HqYGVಮಾಹಿತಿಗೆ:http://www.joinindiannavy.gov.in
ಇನ್ನೂ ಹೆಚ್ಚಿನ ಉದ್ಯೋಗಗಳ ಮಾಹಿತಿಗೆ https://www.vijayavani.net/ ವಿಭಾಗದ ಅಂಕಣ ಕಾಲಂನಲ್ಲಿ ಉದ್ಯೋಗಮಿತ್ರ ಕ್ಲಿಕ್ಕಿಸಿ.
ಕೋರ್ಟ್‍ನಲ್ಲಿವೆ ವಿವಿಧ ಹುದ್ದೆಗಳು: ಎಸ್​ಎಸ್​ಎಲ್​ಸಿ ಪಾಸ್​ ಆದವರಿಗೂ ಇವೆ ಅವಕಾಶ

ಯಾವುದೇ ಪದವಿಧರರಾದರೂ ಬ್ಯಾಂಕ್ ಆಫ್ ಬರೋಡಾದಲ್ಲಿ ಕೆಲಸ ಖಾಲಿ ಇದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + twelve =
Remember me
