ಕೇಂದ್ರ ಸರ್ಕಾರದಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಬೆಂಗಳೂರಿನಲ್ಲಿರುವ ಎಂಪ್ಲಾಯೀಸ್ ಸ್ಟೇಟ್ ಇನ್ಶುರೆನ್ಸ್ ಕಾರ್ಪೋರೇಷನ್‌ (ಇಎಸ್‍ಐಸಿ) ಕಾಲೇಜ್ ಆಫ್‌ ನರ್ಸಿಂಗ್‍ನಲ್ಲಿ ವಿವಿಧ ವಿಷಯಗಳ ಬೋಧಕ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ. ಒಟ್ಟು ಹುದ್ದೆಗಳು: 10
ನರ್ಸಿಂಗ್ ಕಾಲೇಜಿನಲ್ಲಿ ನೇಮಕ ಮಾಡಿಕೊಳ್ಳುತ್ತಿರುವ ಹುದ್ದೆಗಳು ಒಂದು ವರ್ಷದ ಒಪ್ಪಂದಕ್ಕೆ ಒಳಪಟ್ಟಿವೆ. 10 ಹುದ್ದೆಗಳಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 6 ಸ್ಥಾನ, ಇತರ ಹಿಂದುಳಿದ ವರ್ಗಕ್ಕೆ 2, ಎಸ್‍ಸಿಗೆ 1, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 1 ಸ್ಥಾನ ಮೀಸಲಿರಿಸಲಾಗಿದೆ.
ಹುದ್ದೆ ವಿವರ– ಟ್ಯೂಟರ್ – 10* ಮೆಡಿಕಲ್ ಸರ್ಜಿಕಲ್ ನರ್ಸಿಂಗ್ – 5* ಪೆಡಿಯಾಟ್ರಿಕ್ ನರ್ಸಿಂಗ್ – 1* ಒಬಿಜಿ ನರ್ಸಿಂಗ್ – 1* ಮೆಂಟಲ್ ಹೆಲ್ತ್ ನರ್ಸಿಂಗ್ – 1* ಕಮ್ಯುನಿಟಿ ಹೆಲ್ತ್ ನರ್ಸಿಂಗ್ – 2
ಶೈಕ್ಷಣಿಕ ಅರ್ಹತೆ:ನರ್ಸಿಂಗ್‍ನಲ್ಲಿ ಎಂಎಸ್ಸಿ/ ಬಿಎಸ್ಸಿ/ ಪಿಬಿ ಬಿಎಸ್ಸಿ ನರ್ಸಿಂಗ್. ಬೋಧನೆ ಅನುಭವ ಇರುವವರಿಗೆ ಮೊದಲ ಆದ್ಯತೆ ನೀಡಲಾಗುವುದು. ಸ್ಟೇಟ್ ನರ್ಸಿಂಗ್ ಕೌನ್ಸಿಲ್‍ನಲ್ಲಿ ನೋಂದಾಯಿತರಾಗಿರಬೇಕು.
ವಯೋಮಿತಿ:ಅರ್ಜಿ ಸಲ್ಲಿಕೆ ಕೊನೇ ದಿನಕ್ಕೆ ಅನ್ವಯವಾಗುವಂತೆ ಗರಿಷ್ಠ 35 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.
ವೇತನ:ಮಾಸಿಕ 45,000 ರೂ.
ಸಂದರ್ಶನ ನಡೆಯುವ ದಿನಾಂಕ:22.2.2021
ಸೂಚನೆ:ಬೆಳಗ್ಗೆ 9 ರಿಂದ 10.30ರ ಒಳಗೆ ಹೆಸರು ನೋಂದಣಿ ಮಾಡಿಕೊಳ್ಳದ ಅಭ್ಯರ್ಥಿಗಳಿಗೆ ಅವಕಾಶ ಇರುವುದಿಲ್ಲ. 40 ಜನರಿಗಿಂತ ಹೆಚ್ಚು ಅಭ್ಯರ್ಥಿಗಳು ಹೆಸರು ನೋಂದಾಯಿಸಿ ಕೊಂಡರೆ ಸಂದರ್ಶನವನ್ನು ಮರುದಿನಕ್ಕೂ ಮುಂದುವರಿಸಲಾಗುವುದು. ವೈಯಕ್ತಿಕ ಸಂದರ್ಶನ ಪಾಲ್ಗೊಳ್ಳುವಿಕೆ, ಅಭ್ಯರ್ಥಿಯ ಶೈಕ್ಷಣಿಕ ಅರ್ಹತೆ, ವೃತ್ತಿ ಅನುಭವ ಆಧರಿಸಿ ಅಂತಿಮ ಆಯ್ಕೆ ಮಾಡಲಾಗುವುದು. ಅಂತಿಮ ಆಯ್ಕೆ ಪಟ್ಟಿಯನ್ನು ಇಎಸ್‍ಐಸಿ ವೆಬ್‍ಸೈಟ್‍ನ ನೇಮಕಾತಿ ಕಾಲಂನಲ್ಲಿ ಪ್ರಕಟಿಸಲಾಗುವುದು ಹಾಗೂ ಅಭ್ಯರ್ಥಿಗಳಿಗೆ ಮೇಲ್ ಮೂಲಕ ತಿಳಿಸಲಾಗುವುದು.
ಸಂದರ್ಶನ ನಡೆಯುವ ಸ್ಥಳ:ಇಎಸ್‍ಐಸಿ ಕಾಲೇಜ್ ಆಫ್‌ ನರ್ಸಿಂಗ್, 3ನೇ ಮಹಡಿ, ಬೋರ್ಡ್ ರೂಂ, ಇಂದಿರಾನಗರ, ಬೆಂಗಳೂರು – 560008
ಅಧಿಸೂಚನೆಗೆ:https://bit.ly/2NbnfcYಮಾಹಿತಿಗೆ:http://www.esic.nic.in
ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:
https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/
ವಿವಿಧ ವಿಷಯಗಳಲ್ಲಿ ಡಿಪ್ಲೋಮಾ, ಇಂಜಿನಿಯರಿಂಗ್​ ಮುಗಿಸಿದವರಿಗೆ ಇಲ್ಲಿದೆ ಭರ್ಜರಿ ಅವಕಾಶ

ಐಟಿಐ ಮುಗಿಸಿರುವಿರಾ? ಹಾಗಿದ್ದರೆ ಕೇಂದ್ರ ಸರ್ಕಾರದಲ್ಲಿ ಖಾಲಿ ಇವೆ ಟೆಕ್ನಿಷಿಯನ್​ ಹುದ್ದೆಗಳು

ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಕರಾಗುವ ಆಸೆಯೆ? ವಿವಿಧ ಪದವೀಧರರಿಗೆ ಅರ್ಜಿ ಆಹ್ವಾನ

ಮೈಸೂರಿನ ವಾಕ್ ಶ್ರವಣ ಸಂಸ್ಥೆಯಲ್ಲಿ ಉದ್ಯೋಗಾವಕಾಶ: 50 ಸಾವಿರ ರೂ.ವರೆಗೆ ಸಂಬಳ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:11 − 9 =
Remember me
