ಪವರ್​ ಫೈನಾನ್ಸ್​ ಕಾರ್ಪೋರೇಷನ್​​ ಲಿಮಿಟೆಡ್​ (ಪಿಎಫ್​ಸಿ) ನವರತ್ನ ಸಂಸ್ಥೆಗಳಲ್ಲಿ ಒಂದಾಗಿದ್ದು, ಪ್ರಸ್ತುತ ದೆಹಲಿ ವಿಭಾಗದಲ್ಲಿ ಕೆಲ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಹತೆಗಳನ್ನು ಪರಿಶೀಲಿಸಿಕೊಂಡು ಅರ್ಜಿ ಸಲ್ಲಿಸಬಹುದು.ಒಟ್ಟು ಹುದ್ದೆಗಳು: 11
ಪವರ್​ ಫೈನಾನ್ಸ್ ನಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿರುವ ಹುದ್ದೆಗಳಿಗೆ ಶಾರ್ಟ್​ಲಿಸ್ಟ್​ ಮಾಡಲಾಗುವ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಗೆ ಆಹ್ವಾನಿಸಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಸಂದರ್ಶನಕ್ಕೆ ಬೇರೆ ಊರಿನಿಂದ ಬರುವ ಅಭ್ಯರ್ಥಿಗಳಿಗೆ ಸಂಸ್ಥೆಯ ನಿಯಮದ ಪ್ರಕಾರ ಪ್ರಯಾಣ ಭತ್ಯೆ ನೀಡಲಾಗುವುದು.
* ಅಸಿಸ್ಟೆಂಟ್​ ಆಫೀಸರ್​ (ಇನ್​ಫ್ರಾಸ್ಟ್ರಕ್ಚರ್​ ಮ್ಯಾನೇಜ್​ಮೆಂಟ್​-1, ಅಪ್ಲಿಕೇಷನ್​ ಡೆವಲಪ್​ಮೆಂಟ್​-1, ಐಟಿ ಸೆಕ್ಯುರಿಟಿ – 1 ) – 3* ಡೆಪ್ಯುಟಿ ಮ್ಯಾನೇಜರ್​ (ಡಿಸಾಸ್ಟರ್​ ರಿಕವರಿ) – 1* ಡೆಪ್ಯುಟಿ ಆಫೀಸರ್​ (ಲೀಗಲ್​-2, ಎಚ್​ಆರ್​ – 1) – 3* ಮ್ಯಾನೇಜರ್​ – 2* ಮ್ಯಾನೇಜರ್​ ರಾಜ್​ಭಾಷಾ- 1* ಡೆಪ್ಯುಟಿ ಮ್ಯಾನೇಜರ್​ (ಪಿಆರ್​) – 1
ವಿದ್ಯಾರ್ಹತೆ: ಸಿಎಸ್​/ಐಟಿ, ಎಲೆಕ್ಟ್ರಿಕಲ್​ನಲ್ಲಿ ಬಿಇ, ಬಿಟೆಕ್​ ಎಂಎಸ್ಸಿ(ಐಟಿ)/ ಸ್ನಾತಕೋತ್ತರ ಡಿಪ್ಲೊಮಾ, ಎಂಕಾಂ, ಕನಿಷ್ಠ ಒಂದು ವರ್ಷದ ಐಟಿ ತರಬೇತಿ, ಎಂಸಿಎ/ ಪಿಜಿಡಿಸಿಎ, ಎಂಬಿಎ/ ಎಂಇ/ ಎಂಟೆಕ್​, ಎಲ್​ಎಲ್​ಬಿ ಪದವಿ, ಯಾವುದೇ ಪದವಿಯೊಂದಿಗೆ ಕನಿಷ್ಠ 2 ವರ್ಷದ ಪರ್ಸನಲ್​ ಮ್ಯಾನೇಜ್​ಮೆಂಟ್​/ ಎಚ್​ಆರ್​ನಲ್ಲಿ ಡಿಪ್ಲೊಮಾ, ಸಿಎ/ಸಿಎಂಎ, ಇಂಗ್ಲಿಷ್​ ಒಂದು ವಿಷಯವಾಗಿ ಹಿಂದಿ ಸ್ನಾತಕೋತ್ತರ ಪದವಿ/ ಟ್ರಾನ್ಸ್​ಲೇಷನ್​ನಲ್ಲಿ ಪದವಿ/ ಡಿಪ್ಲೊಮಾ, ಪಿಆರ್​/ ಮಾಸ್​ ಕಮ್ಯುನಿಕೇಷನ್​/ ರ್ಜನಲಿಸಂನಲ್ಲಿ ಸ್ನಾತಕೋತ್ತರ ಪದವಿ/ 2 ವರ್ಷದ ಡಿಪ್ಲೊಮಾ ಮಾಡಿದ್ದು, ಕನಿಷ್ಠ ಶೇ.55&60 ಅಂಕ ಪಡೆದಿರಬೇಕು.
ವಯೋಮಿತಿ: ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ ವಯೋಮಿತಿ 31, 32, 34, 37ವರ್ಷ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.
ವೇತನ: ಅಸಿಸ್ಟೆಂಟ್​ ಆಫೀಸರ್​ಗೆ ಮಾಸಿಕ 53,000 ರೂ., ಡೆಪ್ಯುಟಿ ಆಫೀಸರ್​ಗೆ ಮಾಸಿಕ 71,000 ರೂ., ಆಫೀಸರ್​ಗೆ ಮಾಸಿಕ 89,000, ಅಸಿಸ್ಟೆಂಟ್​ ಮ್ಯಾನೇಜರ್​ಗೆ 1,06,000 ರೂ., ಡೆಪ್ಯುಟಿ ಮ್ಯಾನೇಜರ್​ಗೆ ಮಾಸಿಕ 1,24,000 ರೂ. ಹಾಗೂ ಮ್ಯಾನೇಜರ್​ಗೆ 1,42,000 ರೂ. ವೇತನ ಇದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 23.4.2021ಅಧಿಸೂಚನೆಗೆ:https://bit.ly/3szlPYIಮಾಹಿತಿಗೆ:http://www.pfcindia.com
ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:
https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/
ಎಚ್​ಎಂಟಿಗೆ ಬೇಕಾಗಿದ್ದಾರೆ ಪ್ರತಿಭಾನ್ವಿತರು: ವಿವಿಧ ಹುದ್ದೆಗಳಿಗೆ ಆಹ್ವಾನ- ಬೆಂಗಳೂರಿನಲ್ಲಿ ಕೆಲಸ

ಮಹಿಳಾ ಇಂಜಿನಿಯರಿಂಗ್​ ಪದವೀಧರರಿಗೆ ಗುಡ್​ ನ್ಯೂಸ್​: ಎನ್​ಟಿಪಿಸಿಯಲ್ಲಿ 50 ಹುದ್ದೆಗಳಿಗೆ ಆಹ್ವಾನ

ವಿವಿಧ ಪದವೀಧರರಿಗೆ ಎಣ್ಣೆಬೀಜ ಬೆಳೆಗಾರರ ಸಹಕಾರಿ ಸಂಘಕ್ಕೆ ಆಹ್ವಾನ: ₹70 ಸಾವಿರದವರೆಗೂ ವೇತನ

ಮಹಾನಗರ ಪಾಲಿಕೆಗಳಲ್ಲಿ 219 ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 18 =
Remember me
