ನವದೆಹಲಿ:ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಖಾಲಿ ಇರುವ 241 ಸೆಕ್ಯುರಿಟಿ ಗಾರ್ಡ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.
10ನೇ ತರಗತಿ ಪಾಸಾದವರೂ ಅರ್ಜಿ ಸಲ್ಲಿಸಬಹುದು. ಜನವರಿ 1, 2021ರ ಅನ್ವಯ 25 ರಿಂದ 45 ವರ್ಷ ವಯೋಮಿತಿ ಇರುವವರು ಈ ಅರ್ಜಿ ಸಲ್ಲಿಸಬಹುದಾಗಿದೆ. ಆನ್‌ಲೈನ್ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುವುದು.ಸೆಕ್ಯುರಿಟಿ ಗಾರ್ಡ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 10,940ರೂ ವೇತನವನ್ನು ನೀಡಲಾಗುವುದು. ಅರ್ಜಿದಾರರು 50 ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಿರುತ್ತದೆ.
ಜನರಲ್‌ ಮೆರಿಟ್‌- 113, ಒಬಿಸಿ- 45, ಇಡಬ್ಲ್ಯುಎಸ್‌-18, ಎಸ್‌ಸಿ-32 ಮತ್ತು ಎಸ್‌ಟಿ-33 ಮೀಸಲಾತಿ ಇದೆ.
ಅರ್ಹ ಅಭ್ಯರ್ಥಿಗಳು ಆನ್‌ಲೈನ್​ನಲ್ಲಿ ಅಧಿಕೃತ ವೆಬ್‌ಸೈಟ್https://www.rbi.org.in/ಗೆ ಭೇಟಿ ನೀಡಿ. ಅಲ್ಲಿ ನೀಡಲಾಗಿರುವ ಮಾಹಿತಿಯನ್ನು ನಂತರ ಭರ್ತಿ ಮಾಡುವ ಮೂಲಕ ಫೆಬ್ರವರಿ 12,2021ರೊಳಗೆ ಅರ್ಜಿಯನ್ನು ಸಲ್ಲಿಸಬೇಕು.
ಎಲ್ಲೆಲ್ಲಿ ಹುದ್ದೆ?ಬೆಂಗಳೂರು- 12; ಅಹಮದಾಬಾದ್‌-7; ಭೋಪಾಲ್‌-10; ಭುವನೇಶ್ವರ-8; ಚಂಡೀಗಢ-2; ಚೆನ್ನೈ-22; ಗುವಾಹಟಿ-11; ಹೈದರಾಬಾದ್‌ 3; ಜೈಪುರ 10; ಜಮ್ಮು-4; ಕಾನ್ಪುರ-5, ಕೋಲ್ಕತಾ-15; ಲಖನೌ-5; ಮುಂಬೈ 84; ನಾಗ್ಪುರ-12; ನವದೆಹಲಿ- 17; ‍ಪಟ್ನಾ-11; ತಿರುವನಂತಪುರಂ-3.
ರಿಜಿಸ್ಟರ್‌ ಮಾಡಿಕೊಳ್ಳಲುhttps://ibpsonline.ibps.in/rbirpsgdec20/ಹೆಚ್ಚಿನ ಮಾಹಿತಿಗೆ:https://bit.ly/367Lpvu
ಹೆಚ್ಚಿನ ಉದ್ಯೋಗ ಮಾಹಿತಿಗೆ ನೋಡಿ https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/
ಎಸ್​ಎಸ್​ಎಲ್​ಸಿಯಿಂದ ಉನ್ನತ ಪದವಿಯವರೆಗೂ ಔಷಧ ಸಂಶೋಧನಾ ಸಂಸ್ಥೆಯಲ್ಲಿ ಖಾಲಿಯಿವೆ ಹುದ್ದೆಗಳು

ಪದವೀಧರರು ಪಡೆಯಬಹುದು ₹62 ಸಾವಿರ ವೇತನ- ಇಸಿಜಿಸಿನಲ್ಲಿ ಪ್ರೊಬೇಷನರಿ ಆಫೀಸರ್ಸ್​ ನೇಮಕ

ಹೈಸ್ಕೂಲ್​ ಪಾಸಾದವರಿಗೂ ಇಲ್ಲಿದೆ ಉದ್ಯೋಗ: ಬುಕ್​ ಟ್ರಸ್ಟ್​ನಲ್ಲಿವೆ ಅವಕಾಶ

ಪದವೀಧರರು ಪಡೆಯಬಹುದು ₹62 ಸಾವಿರ ವೇತನ- ಇಸಿಜಿಸಿನಲ್ಲಿ ಪ್ರೊಬೇಷನರಿ ಆಫೀಸರ್ಸ್​ ನೇಮಕ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 1 =
Remember me
