ಬೆಂಗಳೂರಿನಲ್ಲಿರುವ ಕರ್ನಾಟಕರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ ನಿಯಮಿತದ ವಿವಿಧ ವೃಂದದಲ್ಲಿ 43 ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು ಹುದ್ದೆಗಳು: 43ಒಬ್ಬ ಅಭ್ಯರ್ಥಿ ಒಂದಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದಾದರೆ ಪ್ರತ್ಯೇಕ ಅರ್ಜಿ ಶುಲ್ಕ ಹಾಗೂ ಅರ್ಜಿ ಸಲ್ಲಿಸತಕ್ಕದ್ದು. ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಕನ್ನಡ ಬರೆಯಲು, ಓದಲು, ಮಾತನಾಡಲು ಬರಬೇಕು.
ಮೀಸಲಾತಿ: ರಾಜ್ಯಮಟ್ಟದ ಉಳಿಕೆ ವೃಂದ ಹಾಗೂ ಕಲ್ಯಾಣ ಕರ್ನಾಟಕ ವೃಂದದ ಅಭ್ಯರ್ಥಿಗಳೆಂದು ವಿಭಾಗ ಮಾಡಿ ಅದರಲ್ಲಿ ಸಾಮಾನ್ಯವರ್ಗ, ಎಸ್ಸಿ, ಎಸ್ಟಿ, ಪ್ರವರ್ಗ 1, 2ಎ, 2ಬಿ, 3ಎ, 3ಬಿ, ಮಹಿಳಾ ಅಭ್ಯರ್ಥಿ, ಗ್ರಾಮೀಣ, ಅಂಗವಿಕಲ, ಇತರೆ ಅಭ್ಯರ್ಥಿಗಳೆಂದು ಮೀಸಲಾತಿ ನಿಗದಿಪಡಿಸಲಾಗಿದೆ. ಮಹಿಳೆ/ ಗ್ರಾಮೀಣ ಅಭ್ಯರ್ಥಿಗಳಿಗೆ ಮೀಸಲಿರುವ ಸ್ಥಾನಗಳಿಗೆ ಅರ್ಹ ಅಭ್ಯರ್ಥಿಗಳು ಲಭ್ಯವಾಗದಿದ್ದರೆ, ಆಯಾ ವರ್ಗಕ್ಕೆ ಸೇರಿದ ಇತರೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು.
ಹುದ್ದೆ ವಿವರ*ಲೆಕ್ಕಿಗರು – 5ಬಿಕಾಂ/ ಸಹಕಾರ/ ಮ್ಯಾನೇಜ್‍ಮೆಂಟ್‍ನಲ್ಲಿ ಪದವೀಧರರಾಗಿದ್ದು, ಕಂಪ್ಯೂಟರ್ ಆಪರೇಷನ್ಸ್ ಮತ್ತು ಅಪ್ಲಿಕೇಷನ್ ಜ್ಞಾನದ ಜತೆ ಟ್ಯಾಲಿ ಕೋರ್ಸ್ ತಿಳಿದಿರಬೇಕು. ಮಾಸಿಕ 19,000- 34,500 ರೂ. ವೇತನ ಇದೆ.
*ಪ್ರಥಮ ದರ್ಜೆ ಗುಮಾಸ್ತ – 10ಯಾವುದೇ ಪದವಿಯಲ್ಲಿ ತೇರ್ಗಡೆಯಾಗಿದ್ದು, ಕಂಪ್ಯೂಟರ್ ಆಪರೇಷನ್ಸ್ ಮತ್ತು ಅಪ್ಲಿಕೇಷನ್ ಜ್ಞಾನ ಹೊಂದಿರಬೇಕು. ಮಾಸಿಕ 13,600- 26,000 ರೂ. ವೇತನ ಇದೆ.
* ವಿಕ್ರಯ ಸಹಾಯಕರು – 10ದ್ವಿತೀಯ ಪಿಯುಸಿ ಉತ್ತೀರ್ಣರಾಗಿದ್ದು, ಕಂಪ್ಯೂಟರ್ ಆಪರೇಷನ್ಸ್ ಮತ್ತು ಅಪ್ಲಿಕೇಷನ್ ಜ್ಞಾನ ಅವಶ್ಯ. ಮಾಸಿಕ 12,500- 24,000 ರೂ. ವೇತನ ನೀಡಲಾಗುವುದು.
*ಬೆರಳಚ್ಚುಗಾರ – 8ದ್ವಿತೀಯ ಪಿಯುಸಿ ಅಥವಾ ಕಮರ್ಷಿಯಲ್ ಪ್ರಾಕ್ಟೀಸ್‍ನಲ್ಲಿ 3 ವರ್ಷದ ಡಿಪ್ಲೋಮಾ ಉತ್ತೀರ್ಣರಾಗುವುದರ ಜತೆಗೆ ಸೀನಿಯರ್ ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್ ಉತ್ತೀರ್ಣರಾಗಿರಬೇಕು. ಮಾಸಿಕ 12,500-24,000 ರೂ. ವೇತನ ಇದೆ.
* ಜವಾನರು – 10ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿದ್ದು, ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು. ಮಾಸಿಕ 10,400- 16,400 ರೂ. ವೇತನ ನೀಡಲಾಗುವುದು.
ಬ್ಯಾಕ್‍ಲಾಗ್ ಹುದ್ದೆ* ಕಿರಿಯ ಫಾರ್ಮಾಸಿಸ್ಟ್ – 2ಡಿಪ್ಲೋಮಾ ಇನ್ ಫಾರ್ಮಾಸಿಸ್ಟ್ ಮಾಡಿದ್ದು, ಕಂಪ್ಯೂಟರ್ ಆಪರೇಷನ್ಸ್ ಮತ್ತು ಅಪ್ಲಿಕೇಷನ್ ಜ್ಞಾನ ಅವಶ್ಯ. ಮಾಸಿಕ 14,550-26,700 ರೂ. ವೇತನ ಇದೆ.
ವಯೋಮಿತಿ:ಅರ್ಜಿ ಸಲ್ಲಿಕೆ ಕೊನೇ ದಿನಕ್ಕೆ ಅನ್ವಯವಾಗುವಂತೆ ಕನಿಷ್ಠ 18 ವರ್ಷ, ಗರಿಷ್ಠ ಸಾಮಾನ್ಯ ವರ್ಗಕ್ಕೆ 35, ಪ್ರವರ್ಗ 2ಎ, 2ಬಿ, 3ಎ, 3ಬಿಗೆ 38 ವರ್ಷ, ಎಸ್ಸಿ, ಎಸ್ಟಿ, ಪ್ರವರ್ಗ 1ಕ್ಕೆ 40 ವರ್ಷ. ಮಾಜಿ ಸೈನಿಕರಿಗೆ, ಅಂಗವಿಕಲರಿಗೆ, ವಿಧವೆಯರಿಗೆ 10 ವರ್ಷ ವಯೋ ಸಡಿಲಿಕೆ ಇದೆ.
ಅರ್ಜಿಶುಲ್ಕ:ಎಸ್ಸಿ, ಎಸ್ಟಿ, ಪ್ರವರ್ಗ 1ಕ್ಕೆ ಅಂಚೆ ಕಚೇರಿ ಶುಲ್ಕ ಸೇರಿ 530 ರೂ., ಇತರ ಅಭ್ಯರ್ಥಿಗಳಿಗೆ ಅಂಚೆ ಕಚೇರಿ ಶುಲ್ಕ ಸೇರಿ 1030 ರೂ.
ಆಯ್ಕೆ ಪ್ರಕ್ರಿಯೆ:ಅಭ್ಯರ್ಥಿಗಳ ಶೈಕ್ಷಣಿಕ ಅಂಕ, ಅಗತ್ಯ ದಾಖಲಾತಿಗಳ ಆಧಾರದ ಮೇಲೆ ಶಾರ್ಟ್‍ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಗೆ ಆಹ್ವಾನಿಸಲಾಗುವುದು. ಒಂದು ಹುದ್ದೆಗೆ 1:5 ರ ಅನುಪಾತದಲ್ಲಿ ಸಂದರ್ಶನಕ್ಕೆ ಆಹ್ವಾನಿಸಲಾಗುವುದು.
ಅರ್ಜಿ ಸಲ್ಲಿಸಲು ಕೊನೇ ದಿನ: 5.4.2021ಅಧಿಸೂಚನೆಗೆ:https://bit.ly/38cmUOIಮಾಹಿತಿಗೆ:http://www.recruitapp.in/ksccf2021
ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:
https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/
ಕೇಂದ್ರ ಸರ್ಕಾರದ ಸಚಿವಾಲಯಗಳಲ್ಲಿ ಉನ್ನತ ಪದವೀಧರರಿಗೆ ಉದ್ಯೋಗ: 89 ಹುದ್ದೆಗಳು ಖಾಲಿ

ಕೇಂದ್ರ ಸರ್ಕಾರದ ಉದ್ಯೋಗ ಆಕಾಂಕ್ಷಿಗಳಾ? ಇಲ್ಲಿದೆ 152 ಹುದ್ದೆಗಳು- ₹2 ಲಕ್ಷಕ್ಕೂ ಅಧಿಕ ಸಂಬಳ

ಎಸ್​ಎಸ್​ಎಲ್​ಸಿಯಾದ ಮಹಿಳೆಯರಿಗೆ ಗುಡ್​ನ್ಯೂಸ್​: 159 ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:six + fourteen =
Remember me
