ಭಾರತೀಯ ಕ್ರೀಡಾ ಪ್ರಾಧಿಕಾರದ (ಸ್ಪೋರ್ಟ್ಸ್​ ಅಥಾರಿಟಿ ಆಫ್‌​ ಇಂಡಿಯಾ- ಎಸ್​ಎಐ) ದೆಹಲಿಯ ಕಚೇರಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯಥಿರ್ಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ.ಒಟ್ಟು ಹುದ್ದೆಗಳು: 14
ಎಸ್​ಎಐನಲ್ಲಿ ಅಭ್ಯರ್ಥಿಗಳನ್ನು ಆರಂಭಿಕವಾಗಿ 2 ವರ್ಷದ ಒಪ್ಪಂದದ ಮೇರೆಗೆ ನೇಮಕ ಮಾಡಿಕೊಳ್ಳಲಾಗುವುದು. ನಂತರ ಸಂಸ್ಥೆಯ ಅಗತ್ಯತೆ ಹಾಗೂ ಅಭ್ಯಥಿರ್ಗಳ ಕಾರ್ಯಕ್ಷಮತೆ ಆಧರಿಸಿ ಅವಧಿಯನ್ನು 1 ವರ್ಷ ವಿಸ್ತರಿಸಲಾಗುವುದು.
ಹುದ್ದೆ ವಿವರ* ಯಂಗ್​ ಪ್ರೊಫೆಷನಲ್ಸ್​ (ಲೀಗಲ್​)- 1ಕಾನೂನು ಪದವಿ/ ಸ್ನಾತಕೋತ್ತರ ಪದವಿ, ಕ್ರೀಡಾ ಕಾನೂನಿನಲ್ಲಿ ಸ್ಪೇಷಲೈಸೇಷನ್​ ಮಾಡಿರುವ ಅಭ್ಯಥಿರ್ಗಳು ಅರ್ಹರು.ಹುದ್ದೆ ಜವಾಬ್ದಾರಿ: ಇಲಾಖೆ/ ವಿಭಾಗಕ್ಕೆ ಸಂಬಂಧಿಸಿದ ಎಲ್ಲ ಕಾನೂನು ವಿಷಯಗಳನ್ನು ನಿರ್ವಹಿಸುವುದು, ಎಸ್​ಎಐಗೆ ಸಂಬಂಧಿಸಿದ ಒಪ್ಪಂದಗಳು, ತಿಳಿವಳಿಕೆ ಪತ್ರ (ಎಂಒಯು) ಮತ್ತು ಇತರ ಕಾನೂನು ದಾಖಲೆಗಳ ಕರಡು ಸಿದ್ಧಪಡಿಸುವುದು ಮತ್ತು ನೋಡಿಕೊಳ್ಳುವುದು ಇತ್ಯಾದಿ.
* ಯಂಗ್​ ಪ್ರೊಫೆಷನಲ್ಸ್​ (ಪ್ರಾಜೆಕ್ಟ್​ ಆ್ಯಂಡ್​ ಅಡ್ಮಿನ್​) -1ಬಿಬಿಎ/ ಎಂಬಿಎ/ ಪಿಜಿಡಿಸಿಎ/ ಸ್ಪೋರ್ಟ್ಸ್​ ಮ್ಯಾನೇಜ್​ಮೆಂಟ್​ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.ಹುದ್ದೆ ಜವಾಬ್ದಾರಿ: ಎನ್​ಸಿಒಇಯ ಅಂದಿನ ಆಡಳಿತಾತ್ಮಕ ಕೆಲಸಗಳನ್ನು ಮಾಡುವುದು, ನಿದಿರ್ಷ್ಟ ಯೋಜನೆಗಳ ಕಾರ್ಯಾಚರಣೆಗಳ ಕಾರ್ಯಕ್ರಮ, ನಿರ್ವಹಣೆ, ಯೋಜನೆಗಳನ್ನು ಕಾರ್ಯಗತಗೊಳಿಸುವುದು, ಪರಿಶೀಲಿಸುವುದು ಮತ್ತು ವರದಿ ಮಾಡುವುದು ಇತ್ಯಾದಿ.
* ಯಂಗ್​ ಪ್ರೊಫೆಷನಲ್ಸ್​ (ಅಥ್ಲೀಟ್​ ರಿಲೇಷನ್​ ಮ್ಯಾನೇಜರ್​) – 12ಯಾವುದೇ ಪದವಿ ಮಾಡಿದ್ದು, ಸ್ಪೋರ್ಟ್ಸ್​ ಮ್ಯಾನೇಜ್​ಮೆಂಟ್​ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಮಾಡಿರುವ ಅಭ್ಯರ್ಥಿಗಳು ಹಾಗೂ ಬಿ.ಟೆಕ್​/ ಎಂಎಸ್​ಸಿ/ ಎಂಸಿಎ ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.ಹುದ್ದೆ ಜವಾಬ್ದಾರಿ: ಅಭ್ಯರ್ಥಿಗೆ ನಿಯೋಜಿಸಲಾದ ಕ್ರೀಡಾಪಟುಗಳ ಅಗತ್ಯ ಸೇವೆ ಸಲ್ಲಿಸುವುದು, ಎಸ್​ಎಐನಲ್ಲಿ ಕ್ರೀಡಾಪಟುವಿನ ಪ್ರಸ್ತಾಪದ ಬಗ್ಗೆ ಆರಂಭದಿಂದ ಕೊನೆಯವರೆಗೆ ನೋಡಿಕೊಳ್ಳುವುದು, ಅಗತ್ಯವಿದ್ದಾಗ ಕ್ರೀಡಾಪಟುವಿನ ಜತೆ ವೈಯಕ್ತಿಕ ಸಂವಹನ ನಡೆಸಿ ಬೆಂಬಲ ನೀಡುವುದು ಇತ್ಯಾದಿ.
ವಯೋಮಿತಿ: ಗರಿಷ್ಠ 35 ವರ್ಷ.
ವೇತನ: ಮಾಸಿಕ 40,000- 60,000 ರೂ. ವರೆಗೆ ಇದೆ. ಇತರ ಯಾವುದೇ ಭತ್ಯೆ ಇರುವುದಿಲ್ಲ.
ಆಯ್ಕೆ ಪ್ರಕ್ರಿಯೆ: ಅಭ್ಯಥಿರ್ಗಳ ಶೈಕ್ಷಣಿಕ ಅಂಕ, ವೃತ್ತಿ ಅನುಭವ, ಕ್ರೀಡಾ ಕ್ಷೇತ್ರದಲ್ಲಿನ ವೃತ್ತಿ ಅನುಭವ, ಸರ್ಕಾರಿ/ ಖಾಸಗಿ ಸಂಸ್ಥೆಯಲ್ಲಿನ ವೃತ್ತಿ ಅನುಭವ, ರಾಷ್ಟ್ರೀಯ, ಅಂತಾರಾಷ್ಟ್ರಿಯ ಕ್ರೀಡೆಯಲ್ಲಿ ಪಾಲ್ಗೊಂಡ ಅನುಭವ ಆಧರಿಸಿ ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯಥಿರ್ಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಸಂದರ್ಶನದ ನಂತರ ಅಂತಿಮ ಮೆರಿಟ್​ ಲಿಸ್ಟ್​ ಬಿಡುಗಡೆ ಮಾಡಲಾಗುವುದು.
ಅರ್ಜಿ ಸಲ್ಲಿಸಲು ಕೊನೇ ದಿನ: 4.5.2021ಅಧಿಸೂಚನೆಗೆ:https://bit.ly/3vbkg4Kಮಾಹಿತಿಗೆ:https://sportsauthorityofindia.nic.in
ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/
ಕ್ರೀಡಾ ಪಟುಗಳಿಗೆ ಭರ್ಜರಿ ಅವಕಾಶ‌: ಸ್ಪೋರ್ಟ್ಸ್​ ಅಥಾರಿಟಿ ಆಫ್‌ ಇಂಡಿಯಾದಲ್ಲಿ 220 ಹುದ್ದೆಗಳಿಗೆ ಆಹ್ವಾನ

ವಿಜ್ಞಾನ ಪದವೀಧರರಿಗೆ ಇಲ್ಲಿದೆ ಬಂಪರ್‌ ಅವಕಾಶ: ದಕ್ಷಿಣ ರೈಲ್ವೆಯಲ್ಲಿ 191 ಹುದ್ದೆಗಳಿಗೆ ಆಹ್ವಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − two =
Remember me
