ಗದಗ:ಗದಗ ಜಿಲ್ಲೆಯ ಜಿಲ್ಲಾ ಮತ್ತು ಸೆಷನ್ಸ್​ ನ್ಯಾಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹಿಂದೆಯೇ ಅಧಿಸೂಚನೆ ಹೊರಡಿಸಲಾಗಿದ್ದು, ಕೋವಿಡ್ ಕಾರಣದಿಂದಾಗಿ ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸಲಾಗಿದೆ.
ಹುದ್ದೆ, ಸಂಖ್ಯೆ ವಿವರ* ಸ್ಟೆನೋಗ್ರಾಫರ್ – 2* ಟೈಪಿಸ್ಟ್ – 1* ಟೈಪಿಸ್ಟ್-ಕಾಪಿಯಿಸ್ಟ್ – 1
ಸ್ಟೆನೋಗ್ರಾಫರ್ ಹುದ್ದೆಯಲ್ಲಿ ತಲಾ ಒಂದು ಹುದ್ದೆಗಳನ್ನು ಎಸ್‍ಸಿ ಹಾಗೂ ಸಾಮಾನ್ಯ ವರ್ಗದ ಮಹಿಳಾ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ. ಟೈಪಿಸ್ಟ್ ಹುದ್ದೆಯನ್ನು ಸಾಮಾನ್ಯ ವರ್ಗದ ಅಂಗವಿಕಲ ಅಭ್ಯರ್ಥಿಗೆ ಹಾಗೂ ಟೈಪಿಸ್ಟ್-ಕಾಪಿಯಿಸ್ಟ್ ಹುದ್ದೆಯನ್ನು ಸಾಮಾನ್ಯವರ್ಗದ ಗ್ರಾಮೀಣ ಅಭ್ಯರ್ಥಿಗೆ ಮೀಸಲಿರಿಸಲಾಗಿದೆ.
ಏನು ಓದಿರಬೇಕು?:ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ವಿದ್ಯಾರ್ಹತೆ. ಕನ್ನಡ ಮತ್ತು ಇಂಗ್ಲಿಷ್‍ನಲ್ಲಿ ಸೀನಿಯರ್ ಟೈಪ್ ರೈಟಿಂಗ್ ಮತ್ತು ಸೀನಿಯರ್ ಷಾರ್ಟ್‍ಹ್ಯಾಂಡ್ ಆಗಿರಬೇಕು.
ವಯೋಮಿತಿ:ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ. ಎಸ್‍ಸಿ, ಎಸ್‍ಟಿಗೆ ಗರಿಷ್ಠ 40, ಪ್ರವರ್ಗ 2ಎ, 2ಬಿ, 3ಎ, 3ಬಿ ಮತ್ತು ಇತರ ಹಿಂದುಳಿದ ವರ್ಗಕ್ಕೆ ಗರಿಷ್ಠ 38 ವರ್ಷ.
ಆಯ್ಕೆ ಪ್ರಕ್ರಿಯೆ:ಕ್ವಾಲಿಫೈಯಿಂಗ್ ಟೆಸ್ಟ್- ಹುದ್ದೆಗೆ ಅನುಗುಣವಾಗಿ 5 ರಿಂದ 15 ನಿಮಿಷ ಡಿಕ್ಟೇಷನ್ ಮಾಡಲಾಗುವುದು. ನಿಮಿಷಕ್ಕೆ 120 ಪದಗಳ ಟೈಂಪಿಂಗ್ ವೇಗ ಅಗತ್ಯ. ನಂತರ ಸಂದರ್ಶನ ನಡೆಸಲಾಗುವುದು.
ಅರ್ಜಿ ಶುಲ್ಕ:ಪ್ರವರ್ಗ 1, ಎಸ್‍ಸಿ, ಎಸ್‍ಟಿ ಅಭ್ಯರ್ಥಿಗಳು 50 ರೂ, ಇನ್ನುಳಿದ ಅಭ್ಯರ್ಥಿಗಳು 100 ರೂ. ಪಾವತಿಸತಕ್ಕದ್ದು.
ಅರ್ಜಿ ಸಲ್ಲಿಸಲು ಕೊನೇ ದಿನ: 15.12.2020ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸಿರುವ ಅಧಿಸೂಚನೆ:https://bit.ly/3mUGSTnಅಧಿಸೂಚನೆಗೆ ಇಲ್ಲಿ ಕ್ಲಿಕ್ಕಿಸಿ:https://bit.ly/3n0jQdSಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ:https://districts.ecourts.gov.in/
ಇನ್ನೂ ಹೆಚ್ಚಿನ ಉದ್ಯೋಗಗಳ ಮಾಹಿತಿಗೆ https://www.vijayavani.net/ ವಿಭಾಗದ ಅಂಕಣ ಕಾಲಂನಲ್ಲಿ ಉದ್ಯೋಗಮಿತ್ರ ಕ್ಲಿಕ್ಕಿಸಿ
ನೀವು ಕ್ರೀಡಾಪಟುಗಳೆ? ಹಾಗಿದ್ದರೆ ರೈಲ್ವೆಯಲ್ಲಿ ನಿಮಗಿದೆ ಉದ್ಯೋಗಾವಕಾಶ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × three =
Remember me
