ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ(ಕೆಎಟಿ) ಬೆಂಗಳೂರು, ಬೆಳಗಾವಿ ಮತ್ತು ಕಲಬುರಗಿಯಲ್ಲಿ ಖಾಲಿ ಇರುವ ಉಳಿದ ಮೂಲ ವೃಂದ ಮತ್ತು ಸ್ಥಳೀಯ ವೃಂದದ ಶೀಘ್ರಲಿಪಿಗಾರ ಹಾಗೂ ಬೆರಳಚ್ಚುಗಾರ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತಿದೆ. ಒಟ್ಟು ಹುದ್ದೆಗಳು: 16
ಕೆಎಟಿಯಲ್ಲಿರುವ ಹುದ್ದೆಗಳಲ್ಲಿ ಗ್ರಾಮೀಣ, ಕನ್ನಡ ಮಾಧ್ಯಮ, ಅಂಗವಿಕಲ, ಮಹಿಳಾ ಅಭ್ಯರ್ಥಿ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಮೀಸಲಾತಿ ನಿಗದಿಪಡಿಸಲಾಗಿದೆ. ಕಲ್ಯಾಣ ಕರ್ನಾಟಕ ಮೀಸಲಾತಿ ಕೋರುವ ಅಭ್ಯರ್ಥಿಗಳು ಅಗತ್ಯ ಪ್ರಮಾಣಪತ್ರ ಸಲ್ಲಿಸಬೇಕಿದೆ. ಅರ್ಜಿಗಳನ್ನು ಕೆಸ್ಯಾಟ್ ವೆಬ್‍ಸೈಟ್‍ನಿಂದ ಡೌನ್‍ಲೋಡ್ ಮಾಡಿಕೊಳ್ಳತಕ್ಕದ್ದು.
ಹುದ್ದೆ, ಸಂಖ್ಯೆ ವಿವರ* ಶೀಘ್ರಲಿಪಿಗಾರ – 13 (ಉಳಿದ ಮೂಲ ವೃಂದ -11, ಸ್ಥಳೀಯ ವೃಂದ 2)* ಬೆರಳಚ್ಚುಗಾರ – 3 (ಉಳಿದ ಮೂಲ ವೃಂದ)
ಶೈಕ್ಷಣಿಕ ಅರ್ಹತೆ:ಎಸ್ಸೆಸ್ಸೆಲ್ಸಿ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಕನ್ನಡ ಮತ್ತು ಆಂಗ್ಲ ಭಾಷೆಯ ಬೆರಳಚ್ಚು, ಶೀಘ್ರಲಿಪಿ ಪರೀಕ್ಷೆ ಪ್ರೌಢದರ್ಜೆ (ಸೀನಿಯರ್ ಗ್ರೇಡ್) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಿತಿ:ಕನಿಷ್ಠ 18 ವರ್ಷ, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ, ಎಸ್ಸಿ, ಎಸ್ಸಿ, ಪ್ರವರ್ಗ-1ಕ್ಕೆ ಗರಿಷ್ಠ 40, 2ಎ,2ಬಿ, 3ಎ, 3ಬಿ ಗೆ ಗರಿಷ್ಠ 38 ವರ್ಷ.
ವೇತನ:ಶೀಘ್ರಲಿಪಿಗಾರರಿಗೆ ಮಾಸಿಕ 30,350 ರೂ. ನಿಂದ 58,250 ರೂ. ವೇತನ ಇದೆ. ಟೈಪಿಸ್ಟ್‍ಗೆ ಮಾಸಿಕ 21,400 ರೂ. ನಿಂದ 42,000 ರೂ. ವೇತನ ಇದೆ.
ಸೂಚನೆ:ಹುದ್ದೆಗಳ ಆಯ್ಕೆಗಾಗಿ ಮಂಡಳಿ ನಿಗದಿಪಡಿಸಿರುವ ನಮೂನೆಯಲ್ಲಿಯೇ ಅರ್ಜಿ ಸಲ್ಲಿಸಬೇಕು. ಇತರ ಯಾವುದೇ ನಮೂನೆ ಅಥವಾ ಬೆರಳಚ್ಚು/ ಛಾಯಾ ಪ್ರತಿಯಿಂದ ಮಾಡಿರುವ, ಕೈ ಬರಹದಿಂದ ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಅಂಚೆ ಮೂಲಕ ಅಥವಾ ಖುದ್ದಾಗಿ ಅರ್ಜಿ ಸಲ್ಲಿಸತಕ್ಕದ್ದು.
ಅರ್ಜಿ ಶುಲ್ಕ:ಎಸ್ಸಿ, ಎಸ್ಟಿ, ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳನ್ನು ಹೊರತು ಪಡಿಸಿ ಉಳಿದ ಅಭ್ಯರ್ಥಿಗಳು 150 ರೂ. ಶುಲ್ಕ ಪಾವತಿಸಬೇಕು.
ಆಯ್ಕೆ ವಿಧಾನ:ಅಭ್ಯರ್ಥಿಯ ಶೈಕ್ಷಣಿಕ ಅಂಕ, ಸಂದರ್ಶನದಲ್ಲಿ ಪಡೆದ ಅಂಕಗಳನ್ನು ಆಧರಿಸಿ ಮತ್ತು ಚಾಲ್ತಿಯಲ್ಲಿರುವ ಮೀಸಲಾತಿ ನಿಯಮದನ್ವಯ ನೇಮಕಾತಿಗೆ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸಲು ಕೊನೇ ದಿನ: 25.2.2021ಅರ್ಜಿ ಸಲ್ಲಿಕೆ ವಿಳಾಸ: ವಿಲೇಖನಾಧಿಕಾರಿಗಳು, ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಕಂದಾಯ ಭವನ, 7ನೇ ಮಹಡಿ, ಕೆ.ಜಿ. ರಸ್ತೆ ಬೆಂಗಳೂರು- 560 009ಅಧಿಸೂಚನೆಗೆ:http://www.ksat.karnataka.gov.in/recruitmentಮಾಹಿತಿಗೆ:http://www.ksat.karnataka.gov.in
ಹೆಚ್ಚಿನ ಉದ್ಯೋಗಾವಕಾಶಗಳ ಸುದ್ದಿಗಳಿಗೆ ಇಲ್ಲಿ ಕ್ಲಿಕ್ಕಿಸಿ
https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/
ಕೇಂದ್ರ ಸರ್ಕಾರಿ ಉದ್ಯೋಗಿ ಆಗುವ ಆಸೆ ಇದೆಯೆ? ಹಾಗಿದ್ದರೆ ಇಲ್ಲಿವೆ ಭರಪೂರ ಅವಕಾಶ

ಎಸ್‌ಎಸ್‌ಎಲ್‌ಸಿ ಆಗಿದ್ಯಾ? ಹಾಗಿದ್ರೆ ಆರ್‌ಬಿಐನಲ್ಲಿದೆ ಉದ್ಯೋಗ- ಬೆಂಗಳೂರಿನಲ್ಲೂ ಅವಕಾಶ

ಅಂಚೆ ಕಚೇರಿಯಲ್ಲಿವೆ ಡಾಕ್ ಸೇವಕ್‌ ಹುದ್ದೆಗಳು: ಎಸ್‌ಎಸ್‌ಎಲ್‌ಸಿ ಆದವರಿಗೂ ಅವಕಾಶ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:12 + sixteen =
Remember me
