ವಿದ್ಯುತ್ ಕ್ಷೇತ್ರದ ವಿವಿಧ ಘಟಕಗಳಿಗೆ ಹಣಕಾಸಿನ ನೆರವು ನೀಡುವ ಪವರ್ ಫೈನಾನ್ಸ್ ಕಾರ್ಪೋರೇಷನ್​ ಲಿಮಿಟೆಡ್ (ಪಿಎಫ್​ಸಿ) ಭಾರತ ಸರ್ಕಾರದಿಂದ ಅತ್ಯುತ್ತಮ ಗ್ರೇಡ್ ಪಡೆದಿದೆ. ಇಂತಹ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಲು ಆಸಕ್ತಿ ಹೊಂದಿದವರಿಗೆ ಇಲ್ಲಿದೆ ಅವಕಾಶ. 41 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಇಂಟಿಗ್ರೇಟೆಡ್ ಪವರ್ ಡೆವಲಪ್‍ಮೆಂಟ್ ಸ್ಕೀಮ್ (ಐಪಿಡಿಎಸ್) ಅನುಷ್ಠಾನದ ಹೊಣೆಯನ್ನು ಪಿಎಫ್​ಸಿಗೆ ನೀಡಲಾಗಿದೆ.
ಇದಕ್ಕಾಗಿ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳನ್ನು ದೇಶದ ಯಾವ ಭಾಗದಲ್ಲಿ ಬೇಕಾದರೂ ನೇಮಕ ಮಾಡಬಹುದು. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಪ್ರಾಂತ್ಯವಾರು ಆದ್ಯತೆ ನೀಡಿ ಅರ್ಜಿ ಭರ್ತಿಮಾಡಬೇಕು. ಹುದ್ದೆಗಳು 2 ವರ್ಷದ ಅವಧಿಗೆ ಒಳಪಟ್ಟಿದ್ದು, ಅವಶ್ಯಕತೆಗೆ ಅನುಗುಣವಾಗಿ ಗರಿಷ್ಠ 4 ವರ್ಷ ವಿಸ್ತರಿಸಬಹುದು.
ನೇಮಕ ಮಾಡಿಕೊಳ್ಳಲಾಗುತ್ತಿರುವ ಹುದ್ದೆಗಳಲ್ಲಿ ಸಾಮಾನ್ಯ ವರ್ಗಕ್ಕೆ 10 ಸ್ಥಾನ, ಪರಿಶಿಷ್ಟ ಜಾತಿಗೆ 7, ಪರಿಶಿಷ್ಟ ಪಂಗಡಕ್ಕೆ 4, ಇತರ ಹಿಂದುಳಿದ ವರ್ಗಕ್ಕೆ 13, ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಕ್ಕೆ 4, ಅಂಗವಿಕಲ ಅಭ್ಯರ್ಥಿಗಳಿಗೆ 3 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋಮಿತಿ, ವೃತ್ತಿ ಅನುಭವ, ಶೇಕಡವಾರು ಅಂಕಗಳಲ್ಲಿ ವಿನಾಯಿತಿ/ಸಡಿಲಿಕೆ ಇರುತ್ತದೆ.
ಹುದ್ದೆ, ಸಂಖ್ಯೆ ವಿವರ* ಪ್ರಾಜೆಕ್ಟ್ ಕೊಆರ್ಡಿನೇಟರ್ – 34* ಕನ್ಸಲ್ಟಂಟ್ ಟೆಕ್ನಿಕಲ್-ಐ – 6* ಕನ್ಸಲ್ಟಂಟ್ ಟೆಕ್ನಿಕಲ್-ಐಐ – 1
ವಿದ್ಯಾರ್ಹತೆ:ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್/ ಐಟಿ/ ಕಂಪ್ಯೂಟರ್ ಸೈನ್ಸ್ ನಲ್ಲಿ ಬಿಇ, ಬಿ.ಟೆಕ್/ ಎಂಸಿಎ ಪದವಿ. ಹುದ್ದೆಗೆ ಅನುಗುಣವಾಗಿ ವೃತ್ತಿ ಅನುಭವ ಹೊಂದಿರಬೇಕು.
ವಯೋಮಿತಿ:18.1.2021ಕ್ಕೆ ಕನಿಷ್ಠ 21 ವರ್ಷ. ಗರಿಷ್ಠ 45 ವರ್ಷ.
ವಿಶೇಷ ಸೂಚನೆ:ಅಭ್ಯರ್ಥಿಗಳ ದಾಖಲೆಗಳು ಹಿಂದಿ/ ಇಂಗ್ಲಿಷ್ ಭಾಷೆಯಲ್ಲಿಲ್ಲದಿದ್ದರೆ ಅಭ್ಯರ್ಥಿಗಳು ಸ್ವ- ಪ್ರಾಮಾಣಿಕೃತ ಅನುವಾದಿತ ಪ್ರತಿಯನ್ನು ಸಲ್ಲಿಸಬೇಕು. ಅಭ್ಯರ್ಥಿಗಳು ದೈಹಿಕ ದೃಢತೆಯ ಪ್ರಮಾಣಪತ್ರ ಸಲ್ಲಿಸಬೇಕಿದೆ. ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ರಾಜ್ಯದಿಂದಲೇ ಕಾರ್ಯನಿರ್ವಹಿಸುವ ಸಲುವಾಗಿ ತಮ್ಮ ಬಳಿ ಫೋನ್, ಕಂಪ್ಯೂಟರ್/ಲ್ಯಾಪ್‍ಟಾಪ್, ಇಂಟರ್‍ನೆಟ್ ಸೌಲಭ್ಯ ಹೊಂದಿರಬೇಕು.
ವೇತನ:1 ರಿಂದ 5 ವರ್ಷ ವೃತ್ತಿ ಅನುಭವ ಹೊಂದಿದ್ದರೆ ಮಾಸಿಕ 61,000 ರೂ., 5ವರ್ಷಕ್ಕಿಂತ ಹೆಚ್ಚು ವೃತ್ತಿ ಅನುಭವ ಹೊಂದಿದ್ದರೆ ಮಾಸಿಕ 68,000 ರೂ. ವೇತನ ನೀಡಲಾಗುತ್ತದೆ.
ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ, ಮಾಜಿ ಸೈನಿಕ ಅಭ್ಯರ್ಥಿಗಳನ್ನು ಹೊರತು ಪಡಿಸಿ ಉಳಿದ ಅಭ್ಯರ್ಥಿಗಳಿಗೆ 100 ರೂ. ಶುಲ್ಕ ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 18.1.2021ಅಧಿಸೂಚನೆಗೆ:https://bit.ly/38UCD4Cಮಾಹಿತಿಗೆ:http://www.pfcindia.com
ಹೆಚ್ಚಿನ ಉದ್ಯೋಗದ ಮಾಹಿತಿಗೆ ಈ ಲಿಂಕ್​ ಕ್ಲಿಕ್ಕಿಸಿ:
https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/
ವಿವಿಧ ಪದವಿ, ಸ್ನಾತಕೋತ್ತರ ಪದವೀಧರರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ

ಡಿಪ್ಲೋಮಾ ಕಲಿತವರಿಗೆ ಇಲ್ಲಿದೆ ಅವಕಾಶ: ಉತ್ತಮ ಸ್ಟೈಪೆಂಡ್​ ಜತೆ ನೇಮಕಾತಿ

ನಿರುದ್ಯೋಗಿಗಳಿಗೆ ಬಂಪರ್‌ ಅವಕಾಶ: ಅಂಚೆ ಇಲಾಖೆಯಲ್ಲಿದೆ 2443 ಹುದ್ದೆ- ಕರ್ನಾಟಕದಲ್ಲಿ ಕೆಲಸ

ಪಿಯುಸಿ ಪಾಸ್​ ಆಗಿರುವಿರಾ? ಹಾಗಿದ್ದರೆ ಬೆಂಗಳೂರಿನಲ್ಲಿ ಐಸಿಎಂಆರ್​ನಲ್ಲಿವೆ ಉದ್ಯೋಗ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen + two =
Remember me
