ಕೀವ್ (ಯೂಕ್ರೇನ್‌):ರಷ್ಯಾದ ದಾಳಿಗೆ ತತ್ತರಿಸಿ ಹೋಗಿರುವ ಯೂಕ್ರೇನ್‌ ದೇಶದ ನೆರವಿಗೆ ಯಾರೂ ಬರುತ್ತಿಲ್ಲ. ಇದರಿಂದ ಕಂಗಾಲಾಗಿರುವ ಯೂಕ್ರೇನ್‌ ಭಾರತದ ಕಾಲು ಹಿಡಿದಿದೆ. ‘ಈ ಯುದ್ಧವನ್ನು ಪ್ರಧಾನಿ ನರೇಂದ್ರ ಮೋದಿಯವರು ನಿಲ್ಲಿಸಲು ಸಾಧ್ಯ. ಇವರು ವಿಶ್ವದ ಪ್ರಭಾವಿ ನಾಯಕರು. ಯುದ್ಧ ನಿಲ್ಲಿಸಲು ಇವರ ಪಾತ್ರ ಬಹುಮುಖ್ಯವಾಗಿದೆ. ಆದ್ದರಿಂದ ಮಧ್ಯೆ ಪ್ರವೇಶ ಮಾಡಿ ಯುದ್ಧವನ್ನು ನಿಲ್ಲಿಸಿ’ ಎಂದು ಭಾರತದಲ್ಲಿರುವ ಯೂಕ್ರೇನ್​ ರಾಯಭಾರಿ ಇಗೋರ್​ ಪೊಲಿಕಾ ಪ್ರಧಾನಿಗೆ ನಿನ್ನೆ (ಗುರುವಾರ) ಮನವಿ ಸಲ್ಲಿಸಿದ್ದರು.
ಯುರೋಪಿನಲ್ಲಿ ಯಾವುದೇ ನಾಗರಿಕತೆ ಇಲ್ಲದಿದ್ದಾಗ ಭಾರತ ಹಲವಾರು ಸಾವಿರ ವರ್ಷಗಳ ಹಿಂದೆಯೇ ಕೌಟಿಲ್ಯ, ಚಾಣಕ್ಯನ ಮೂಲಕ ರಾಜತಾಂತ್ರಿಕತೆಗೆ ಅರ್ಹತೆ ಪಡೆದಿತ್ತು. ಮಹಾಭಾರತದ ಯುದ್ಧದ ಸಮಯದಲ್ಲಿ ಕೊನೆಗೆ ಧರ್ಮಕ್ಕೆ ಗೆಲುವಾಗಿತ್ತು. ಇವುಗಳನ್ನೆಲ್ಲಾ ನೆನಪಿಸಿಕೊಂಡಾಗ ಪ್ರಧಾನಿ ನರೇಂದ್ರ ಮೋದಿಯವರಿಂದಲೇ ಯುದ್ಧ ನಿಲ್ಲಿಸಲು ಸಾಧ್ಯ ಎಂದು ರಾಯಭಾರಿ ಕೇಳಿಕೊಂಡಿದ್ದಾರೆ.
ಆದರೆ ಇದೇ ಯೂಕ್ರೇನ್‌ ಕೆಲ ವರ್ಷಗಳ ಹಿಂದೆ ಮಾಡಿರುವ ಕೆಲಸ ಕೇಳಿದರೆ ಯಾವುದೇ ಭಾರತೀಯನಿಗೆ ಯೂಕ್ರೇನ್‌ ಮೇಲೆ ಸಿಟ್ಟು ಉಕ್ಕೇಳುವುದು ಸಹಜ.
ಇದು ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದ ಅವಧಿ. ಅಂದರೆ 1998ನೇ ಇಸ್ವಿ. ಈ ಸಾಲಿನ ಮೇ 11ರಂದು ಭಾರತ ಸರ್ಕಾರ ರಾಜಸ್ಥಾನದ ಪೋಖ್ರಾನ್​ನಲ್ಲಿ ಪರಮಾಣು ಪರೀಕ್ಷೆಯನ್ನು ನಡೆಸುವ ಮೂಲಕ ಇಡೀ ಪ್ರಪಂಚವನ್ನೇ ಅಚ್ಚರಿಗೊಳಿಸಿತ್ತು. ಅಟಲ್ ಬಿಹಾರಿ ವಾಜಪೇಯಿ ಅವರಿಗೆ ವೈಜ್ಞಾನಿಕ ಸಲಹೆಗಾರರಾಗಿದ್ದ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ನೇತೃತ್ವದಲ್ಲಿ ನಡೆದಿದ್ದ ಈ ಪರಮಾಣ ಪರೀಕ್ಷೆಯ ಬಗ್ಗೆ ಭಾರತ ಬಹಳ ಗೋಪ್ಯತೆಯನ್ನು ಕಾಪಾಡಿಕೊಂಡಿದ್ದರಿಂದ ಭಾರತದ ಈ ನಡೆ ಇಡೀ ಜಗತ್ತಿಗೆ ಅಚ್ಚರಿ ಉಂಟುಮಾಡಿತ್ತು.
ಆದರೆ, ಆ ಅಣ್ವಸ್ತ್ರ ಪರೀಕ್ಷೆಗೆ ಇಸ್ರೇಲ್ ಒಂದನ್ನು ಹೊರತುಪಡಿಸಿ ಉಳಿದ ದೇಶಗಳು ವಿರೋಧ ವ್ಯಕ್ತಪಡಿಸಿದ್ದವು. ಆಗ ಇದೇ ಯೂಕ್ರೇನ್‌ ಕೂಡ ಭಾರತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಇತರ 25 ದೇಶಗಳೊಂದಿಗೆ ಭಾರತದ ಭದ್ರತಾ ಹಿತಾಸಕ್ತಿಗಳ ವಿರುದ್ಧ ಇದು ನಿಂತಿತ್ತು. ಸಾಲದು ಎಂಬುದಕ್ಕೆ ಪರಮಾಣು ಪರೀಕ್ಷೆಗಳನ್ನು ಖಂಡಿಸಿದ ಯುಎನ್ ರೆಸಲ್ಯೂಶನ್ 1172ರ ಪರವಾಗಿ ಯೂಕ್ರೇನ್‌ ಸಹಿ ಹಾಕಿತ್ತು. ಭಾರತದ ಪರಮಾಣು ಪರೀಕ್ಷೆಗಳ ನಂತರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು 1172ರ ನಿರ್ಣಯವನ್ನು ಅಂಗೀಕರಿಸಿತು. ಆ ಮೂಲಕ ಭಾರತವು ಹೆಚ್ಚಿನ ಪರಮಾಣು ಪರೀಕ್ಷೆಗಳಿಂದ ದೂರವಿರಲು ಒತ್ತಾಯಿಸಿತು.
ಭಾರತದ ಭದ್ರತೆ ಮತ್ತು ಕಾರ್ಯತಂತ್ರದ ಉದ್ದೇಶಗಳಿಗೆ ವಿರುದ್ಧವಾದ ನಿಲುವನ್ನು ತೆಗೆದುಕೊಂಡ 22 ವರ್ಷಗಳ ನಂತರ ಯೂಕ್ರೇನ್ ಇಂದು ಭಾರತ ರಷ್ಯಾದ ವಿರುದ್ಧ ತನಗೆ ಬೆನ್ನೆಲುಬಾಗಿ ನಿಂತು ಸಹಾಯ ಮಾಡಬೇಕೆಂದು ಬಯಸುತ್ತಿದೆ. ಇದರ ಜತೆ ಕಾಶ್ಮೀರದ ವಿಷಯಕ್ಕೆ ಸಂಬಂಧಿಸಿದಂತೆ ಭಾರತದ ವಿರುದ್ಧ ಕೂಡ ಯೂಕ್ರೇನ್‌ ಮೂಗುತೂರಿಸಿ ಭಾರತದ ವಿರುದ್ಧ ಮತ ಚಲಾಯಿಸಿದೆ.
ಪ್ಲೀಸ್​ ಯುದ್ಧ ನಿಲ್ಲಿಸಿ, ಇದು ನಿಮ್ಮಿಂದ ಸಾಧ್ಯ: ಮಹಾಭಾರತ ಉಲ್ಲೇಖಿಸಿ ಪ್ರಧಾನಿ ಮೋದಿಗೆ ಯೂಕ್ರೇನ್​ ಮನವಿ

ಮತ್ತೆ ನಿಜವಾಯ್ತಾ ಕೋಡಿಮಠ ಶ್ರೀಗಳ ಭವಿಷ್ಯ? ಅವರು ಹೇಳಿದ ದೇಶವೇ ಯೂಕ್ರೇನಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + nine =
Remember me
