ಯೂಕ್ರೇನ್​: ಯೂಕ್ರೇನ್​ ವಿರುದ್ಧ ರಷ್ಯಾ ಸಮರ ಸಾರಿ ಆರು ತಿಂಗಳು ಕಳೆಯುತ್ತಾ ಬಂದಿದೆ. ಯುದ್ಧ ದಿನೇ ದಿನೇ ಭೀಕರ ರೂಪ ಪಡೆಯುತ್ತಲೇ ಇದೆ. ಇದರಲ್ಲಿ ಸಹಸ್ರಾರು ಮಂದಿ ಮೃತಪಟ್ಟಿದ್ದು, ಸದ್ಯ ಯುದ್ಧ ನಿಲ್ಲುವಂತೆ ಕಾಣುತ್ತಿಲ್ಲ. ತಾವೂ ಯೋಧನ ಡ್ರೆಸ್​ ತೊಟ್ಟು ಯುದ್ಧದ ಕಣಕ್ಕಿಳಿಯುವಂತೆ ಫೋಟೋಗಳಿಗೆ ಪೋಸ್​ ನೀಡಿ ಜಗತ್ತಿನ ಗಮನ ಸೆಳೆದಿದ್ದ ಯೂಕ್ರೇನ್​ ಅಧ್ಯಕ್ಷ ವೊಲೊದಿಮಿರ್ ಝೆಲೆನ್​ಸ್ಕಿ ಈಗ ಪತ್ನಿಯೊಂದಿಗೆ ಫೋಟೋ ಶೂಟ್​ ಮಾಡಿಸಿಕೊಂಡಿದ್ದಾರೆ.
ಯುದ್ಧಭೂಮಿಗೆ ಇಳಿದಿರುವುದಾಗಿ ಹೇಳಿದಾಗ ಇವರನ್ನು ಹೊಗಳಿದವರೇ ಇದೀಗ ಇವರ ವಿರುದ್ಧ ಟೀಕಾ ಪ್ರಹಾರ ಶುರು ಮಾಡಿದ್ದಾರೆ. ಅದೂ ಫ್ಯಾಷನ್​ ಮ್ಯಾಗಜೀನ್‌ಗಾಗಿ ಯುದ್ಧಭೂಮಿಯ ನಡುವೆಯೇ ಪತ್ನಿ ಒಲೆನಾ ಜತೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ ಅಧ್ಯಕ್ಷ!‘
ಈ ಚಿತ್ರಗಳನ್ನು ಒಲೆನಾ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಸಂತಸದಿಂದ ಹಂಚಿಕೊಂಡಿದ್ದಾರೆ. ವೋಗ್ ನಿಯತಕಾಲಿಕದ ಮುಖಪುಟದಲ್ಲಿ ಕಾಣಿಸಿಕೊಳ್ಳುವುದು ಅನೇಕ ಜನರ ಕನಸು ಮತ್ತು ಇದು ಅತ್ಯಂತ ಪ್ರತಿಷ್ಠೆಯ ವಿಷಯವಾಗಿದೆ, ಈ ಆಸೆ ಈಡೇರಿದೆ ಎಂದು ಒಲೆನಾ ಬರೆದುಕೊಂಡಿದ್ದಾರೆ.
ಯುದ್ಧದ ಬಗ್ಗೆಯೂ ಮಾತನಾಡಿದ ಅವರು, ಯುದ್ಧದಿಂದ ಬಳಲುತ್ತಿರುವ ಯೂಕ್ರೇನ್​ನ ಪ್ರತಿಯೊಬ್ಬ ಮಹಿಳೆಯನ್ನು ನಿರಾಶ್ರಿತರ ಶಿಬಿರಗಳಲ್ಲಿ ನೋಡಲು ನಾನು ಬಯಸುತ್ತೇನೆ ಎಂದಿದ್ದಾರೆ. ಆದರೆ ಫೋಟೋಶೂಟ್​ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿದೆ.
ಸೈನಿಕರಿಗೆ ತಾವು ಬೆಂಬಲಿಸುತ್ತಿರುವುದಾಗಿ ಸೈನಿಕರ ಸಮವಸ್ತ್ರ ಧರಿಸಿ, ಕೈಯಲ್ಲಿ ಬಂದೂಕು ಹಿಡಿದು ಇವರು ಫೋಟೋಗೆ ಪೋಸ್​ ಕೊಟ್ಟಾಗ, ಇವರೇ ಯುದ್ಧಭೂಮಿಗೆ ಇಳಿದು ಶತ್ರುಗಳ ಜತೆ ಸೆಣೆಸಾಡಿದರು ಎಂದು ಭಾರಿ ಸುದ್ದಿಯಾಗಿತ್ತು. ಇವರ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗಿತ್ತು. ತಮ್ಮ ತಮ್ಮ ದೇಶದ ನಾಯಕನನ್ನು ಇವರಿಗೆ ಹೋಲಿಸಿ, ಯುದ್ಧ ಭೂಮಿಗೆ ಹೋಗದ ತಮ್ಮ ನಾಯಕರನ್ನು ಟೀಕಿಸಿದವರೇ ಹೆಚ್ಚು.
ಅಂದ ಹಾಗೆ ಈ ಜೋಡಿ ಒಂದೇ ಶಾಲೆಯಲ್ಲಿ ಅಧ್ಯಯನ ಮಾಡಿದವರು, ಪ್ರೀತಿಸಿ ಮದುವೆಯಾಗಿದ್ದಾರೆ. ಒಲೆನಾ ವಾಸ್ತುಶಿಲ್ಪವನ್ನು ಅಧ್ಯಯನ ಮಾಡಿದ್ದಾರೆ. ನಂತರ ಬರವಣಿಗೆಯಲ್ಲಿ ಆಸಕ್ತಿ ತೋರಿದರು. ವೊಲೊಡಿಮಿರ್ ರಾಜಕೀಯಕ್ಕೆ ಬರುವ ಮೊದಲು ಹಾಸ್ಯನಟ ಎಂದು ಗುರುತಿಸಿಕೊಂಡವರು. ಆಗ ಇವರ ವಿವಾಹ ನಡೆದಿದೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.(ಏಜೆನ್ಸೀಸ್​)
ತಿರುಪತಿ ಬಳಿ ಕಾರು- ಲಾರಿ ಡಿಕ್ಕಿ: ಕರ್ನಾಟಕದ ಇಬ್ಬರ ಸಾವು, ಮೂವರಿಗೆ ಗಂಭೀರ ಗಾಯ

ಎರಡು ತಿಂಗಳ ಕಂದನಿಗೆ ಎದೆಹಾಲು ಕುಡಿಸುತ್ತಲೇ ಪ್ರಾಣಬಿಟ್ಟ ಅಮ್ಮ: ಹೃದಯಾಘಾತದಿಂದ ಸಾವು

ಹೈ ಪ್ರೊಫೈಲ್​ ವೇಶ್ಯಾವಾಟಿಕೆ: ಬೆಂಗಳೂರಿನ ಯುವತಿಯೂ ಅರೆಸ್ಟ್​- ಮೊಬೈಲ್​ನಲ್ಲಿ ರಾಜಕಾರಣಿಗಳ ಹೆಸರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + fifteen =
Remember me
