ಬೊಗೋಟಾ (ಕೋಲಂಬಿಯಾ):ಕೆಲವರಿಗೆ ಏನೇನೋ ಚಿತ್ರ ವಿಚಿತ್ರ ಎನಿಸುವ ಸಾಹಸಕ್ಕೆ ಕೈಹಾಕುವುದು ಎಂದರೆ ಬಲು ಪ್ರೀತಿ. ಅದೇ ರೀತಿ ತಾವು ಕಟ್ಟುವ ಮನೆ ವಿಭಿನ್ನವಾಗಿರಬೇಕು, ಎಲ್ಲರಿಗಿಂತಲೂ ಈ ಮನೆ ಸುಂದರವಾಗಿ ಕಾಣಿಸಬೇಕು ಎಂದು ಬಹುತೇಕ ಎಲ್ಲರೂ ಬಯಸುತ್ತಾರೆ. ಹಾಗಂತ ಮನೆಯನ್ನು ಕಟ್ಟುವಾಗ ವಿಚಿತ್ರ ಸಾಹಸ ಮಾಡಿ ಬುಡಮೇಲಾಗಿ ಕಟ್ಟಿದರೆ ಆದೀತೆ?
ಆದರೆ ಇಲ್ಲೊಬ್ಬ ಆಸಾಮಿ ಮನೆಯನ್ನು ಬುಡೇಮೇಲಾಗಿ ಕಟ್ಟಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ. ಕೊಲಂಬಿಯಾದ ಬೊಗೋಟಾ ಪ್ರದೇಶದಲ್ಲಿ ಈ ಮನೆಯನ್ನು ನಿರ್ಮಿಸಲಾಗಿದೆ. ಇಂಥದ್ದೊಂದು ಮನೆಯನ್ನು ನೋಡಬಹುದು. ಗುರುತ್ವಾಕರ್ಷಣೆಗೆ ವಿರುದ್ಧವಾಗಿ ಅಂದರೆ ಮನೆಯ ಮಹಡಿಯನ್ನು ನೆಲಕ್ಕೆ ಇರಿಸಿ ಉಲ್ಟಾ ಮನೆಯನ್ನು ಕಟ್ಟಲಾಗಿದೆ. ಸದ್ಯ ಇದರ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

An upside down house in Colombia is capturing the imagination of visitors looking for fun following pandemic restrictionshttps://t.co/wAqMJBrTEM📷@LuisaFGphotopic.twitter.com/RfPmm0wAQY— Reuters Pictures (@reuterspictures)January 24, 2022
An upside down house in Colombia is capturing the imagination of visitors looking for fun following pandemic restrictionshttps://t.co/wAqMJBrTEM📷@LuisaFGphotopic.twitter.com/RfPmm0wAQY
ಅಂದಹಾಗೆ ಈ ಮನೆಯನ್ನು ನಿರ್ಮಿಸಿರುವವರು ಫ್ರಿಟ್ಜ್ ಶಲ್ ಎನ್ನುವವರು. 22 ವರ್ಷಗಳಿದ ಕೋಲಂಬಿಯಾದಲ್ಲಿ ನೆಲೆಸಿರುವ ಇವರು, ತಮ್ಮ ಮನೆ ಬೇರೆ ಮನೆಗಳಿಗಿಂತ ಡಿಫರೆಂಟ್‌ ಆಗಿರಬೇಕು ಎನ್ನಿಸಿ ತಲೆಕೆಳಗಾದ ಮನೆಯನ್ನು ನಿರ್ಮಿಸಲು ಯೋಚಿಸಿದ್ದರು. ನಂತರ ಪ್ರವಾಸದ ವೇಲೆ ಅವರು ಆಪ್ಟಿಕಲ್​ ಇಲ್ಯೂಷನ್​ ಸೃಷ್ಟಿಸುವ ಮನೆಯ ಮಾದರಿಯನ್ನು ನೋಡಿದ್ದರು. ಇದರಿಂದ ಪ್ರೇರಿತಗೊಂಡು ಅದೇ ರೀತಿ ಮನೆಯನ್ನು ನಿರ್ಮಿಸಿದ್ದಾರೆ.
ಈ ಮನೆಯ ಮಹಡಿಯು ನೆಲಕ್ಕೆ ಹಾಗೂ ಕಾರ್​ ಪಾರ್ಕ್ ಮಾಡಿರುವುದು ಮೇಲಕ್ಕೆ ಇದೆ. ಮನೆಯು ಐದು ಡಿಗ್ರಿ ಎಡಕ್ಕೆ ಮತ್ತು ಐದು ಡಿಗ್ರಿ ಹಿಂದಕ್ಕೆ ವಾಲಿಕೊಂಡಿದೆ. ಇದನ್ನು ನೋಡಲು ದೇಶ, ವಿದೇಶಗಳಿದ ಪ್ರವಾಸಿಗರ ಗುಂಪು ಬರುತ್ತಿವೆ. ಹೀಗೆ ಮನೆ ನೋಡಲು ಬರುವವರಿಗೆ ಮೊದಲೇ ಎಚ್ಚರಿಕೆ ನೀಡಲಾಗುತ್ತದೆ. ಏಕೆಂದರೆ ಮನೆಯ ಒಳಗೆ ಪ್ರವೇಶಿಸಿದಾಗ ತಲೆ ಸುತ್ತಿದ ಅನುಭವವಾಗುವ ಸಾಧ್ಯತೆ ಇರುತ್ತದೆ. ಏಕೆಂದರೆ ಒಳಗಿರುವ ಎಲ್ಲಾ ವಸ್ತುಗಳೂ ತಲೆಕೆಳಗಾಗಿವೆ.
ಇದರ ವಿಡಿಯೋ ಇಲ್ಲಿದೆ ನೋಡಿ: (ಕೃಪೆ- ನೋ ಕಮೆಂಟ್ಸ್‌ ಟಿವಿ)

Sign in to your account
Please enter an answer in digits:thirteen + 17 =
Remember me
