ನವದೆಹಲಿ:ಕರೊನಾ ವೈರಸ್​ ಕ್ಷಣಕ್ಷಣಕ್ಕೂ ಆತಂಕ, ತಲ್ಲಣವನ್ನು ಸೃಷ್ಟಿಸುತ್ತಲೇ ಸಾಗಿದೆ. ಇದಾಗಲೇ ಹಲವಾರು ರಾಜಕೀಯ ಮುಖಂಡರನ್ನೂ ಆವರಿಸಿ, ಕೆಲವರ ಪ್ರಾಣ ತೆಗೆದಿದೆ ಈ ವೈರಸ್​.
ಇದೀಗ ಬಿಜೆಪಿ ನಾಯಕಿ ಉಮಾ ಭಾರತಿ ಅವರ ಸರದಿ. ನಿನ್ನೆ ತಡರಾತ್ರಿ ಟ್ವಿಟರ್​ ಮೂಲಕ ಮಾಹಿತಿ ನೀಡಿರುವ ಉಮಾ ಭಾರತಿ, ತಮಗೆ ಕರೊನಾ ಪಾಸಿಟಿವ್​ ಬಂದಿರುವುದಾಗಿ ಹೇಳಿದ್ದಾರೆ.
ಕಳೆದ ಮೂರು ದಿನಗಳಿಂದ ಅವರು ಅಲ್ಪ ಜ್ವರದಿಂದ ಬಳಲುತ್ತಿದ್ದೆ. ಈ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿಸಿಕೊಂಡಾಗ ಕರೊನಾ ಪಾಸಿಟಿವ್​ ಎಂಬ ವರದಿ ಬಂದಿದೆ ಎಂದಿರುವ ಉಮಾ ಭಾರತಿ, ತಮ್ಮೊಂದಿಗೆ ಸಂಪರ್ಕಕ್ಕೆ ಬಂದವರು ಕೋವಿಡ್ ಪರೀಕ್ಷೆಗೆ ಒಳಗಾಗುವಂತೆ ಮನವಿ ಮಾಡಿಕೊಂಡಿದ್ದಾರೆ.
१) मै आपकी जानकारी मै यह डाल रही हू की मैंने आज अपनी पहाड़ की यात्रा के समाप्ति के अन्तिम दिन प्रशासन को आग्रह करके कोरोना टेस्ट के टीम को बुलवाया क्यूँकि मुझे ३ दिन से हलका बुख़ार था ।
— Uma Bharti (@umasribharti)September 26, 2020

ಕಳೆದ ಕೆಲವು ದಿನಗಳಿಂದ ಪ್ರವಾಸದಲ್ಲಿ ಇದ್ದೆ. ಈ ಸಂದರ್ಭದಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರಿಕೆಗಳನ್ನೂ ತೆಗೆದುಕೊಂಡಿದ್ದೆ. ಆದರೂ ಕರೊನಾ ಪಾಸಿಟಿವ್​ ಎಂಬ ವರದಿ ಬಂದಿದೆ ಎಂದಿದ್ದಾರೆ. ಹರಿದ್ವಾರ ಮತ್ತು ಋಷಿಕೇಶ್ ನಡುವೆ ಇರುವ ವಂದೇ ಮಾತರಂ ಕುಂಜ್​ನಲ್ಲಿ ಸದ್ಯ ಐಸಲೇಷನ್​ನಲ್ಲಿ ಇರುವುದಾಗಿ ಹೇಳಿದ್ದಾರೆ.
ನಾಲ್ಕು ದಿನಗಳ ನಂತರ ಮತ್ತೊಂದು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುತ್ತೇನೆ. ಒಂದು ವೇಳೆ ಪರಿಸ್ಥಿತಿ ಹಾಗೇ ಇದ್ದರೆ ವೈದ್ಯರನ್ನು ಸಂಪರ್ಕಿಸುತ್ತೇನೆ ಎಂದು ಉಮಾ ಭಾರತಿ ಟ್ವೀಟ್​ನಲ್ಲಿ ತಿಳಿಸಿದ್ದಾರೆ.
ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಕರೊನಾ ಸೋಂಕಿತೆ!

ವಂಚನೆ ಪ್ರಕರಣ: ಕಣ್ವ ಬ್ಯಾಂಕ್​ನ 255 ಕೋಟಿ ಆಸ್ತಿ ಮುಟ್ಟುಗೋಲು

VIDEO: ಅಭಿಮಾನಿಗಳಿಗೆ ಗಾನ ಗಂಧರ್ವ ಹೇಳಿದ್ದ ಕೊನೆಯ ಮಾತುಗಳಿವು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 7 =
Remember me
