ಕರೊನಾದಈ ಸಮಯದಲ್ಲಿ ಎಲ್ಲರೂ ಆತಂಕದಲ್ಲಿಯೇ ಬದುಕುವಂತಾಗಿದೆ. ಈ ನಡುವೆಯೇ ಕೆಲವರು ಮಾತ್ರ ಇದೇ ಸಮಯದಲ್ಲಿ ವಿಶಿಷ್ಟ ರೀತಿಯ ಪ್ರತಿಭೆಗಳಿಂದ ಜನರನ್ನು ಉಲ್ಲಾಸಭರಿತರನ್ನಾಗಿ ಮಾಡುವಲ್ಲಿ ನಿರತರಾಗಿದ್ದಾರೆ. ಅಂಥದ್ದರಲ್ಲಿ ಒಂದು ಈ ನೃತ್ಯ.
ನೀರಿನೊಳಗೆ ನೃತ್ಯ ಮಾಡುವ ಮೂಲಕ ಜಯದೀಪ್ ಗೋಹಿಲ್ ಎಂಬ ಯುವಕ ಎಲ್ಲರ ಹುಬ್ಬೇರಿಸಿದ್ದಾನೆ. ತನ್ನ ಇನ್​ಸ್ಟಾಗ್ರಾಂನಲ್ಲಿ ನೃತ್ಯವನ್ನು ಅಪ್​ಲೋಡ್ ಮಾಡಿರುವ ಯುವಕನಿಗೆ ಇದಾಗಲೇ ಸಹಸ್ರಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಮ್ಮನ್ನು ತಾವು ಭಾರತದ ಮೊದಲ ಅಂಡರ್​ವಾಟರ್​ ಡಾನ್ಸರ್​ ಎಂದು ಕರೆಸಿಕೊಂಡಿರುವ ಈ ಯುವಕ, ಬಾಲಿವುಡ್​ನ ಹಲವು ಖ್ಯಾತನಾಮರ ನೃತ್ಯಕ್ಕೆ ನೀರಿನೊಳಗೇ ನೃತ್ಯ ಮಾಡುವ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.
ಇವರ ಅಂಡರ್​ವಾಟರ್​ ನೃತ್ಯದ ಪುಟಕ್ಕೆ ಸುಮಾರು 3 ಲಕ್ಷ ಫಾಲೋವರ್ಸ್​ ಇದ್ದಾರೆ. ಬಾಲಿವುಡ್​ ತಾರೆಯರಾದ ಹೃತಿಕ್​ ರೋಷನ್​ ಸೇರಿದಂತೆ ಹಲವು ಮಂದಿ ಕೂಡ ಇವರ ನೃತ್ಯವನ್ನು ಮೆಚ್ಚಿ ಫೇಸ್​ಬುಕ್​ನಲ್ಲಿ ಫಾಲೋವರ್​ ಆಗಿದ್ದಾರೆ.
ಜಯದೀಪ್ ಗೋಹಿಲ್ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಅಪ್​ಲೋಡ್​ ಮಾಡಿರುವ ಕೆಲವೊಂದು ನೃತ್ಯದ ತುಣುಕುಗಳು ಇಲ್ಲಿವೆ ನೋಡಿ…
https://www.instagram.com/p/CFG4Y0EhJF3/
https://www.instagram.com/p/CFUFpvFhhtM/
https://www.instagram.com/p/CE0OIXCBEbC/
https://www.instagram.com/p/CFnEZZ8hOuL/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 3 =
Remember me
