
ಲಖನೌ:ಪ್ರೇಮವನ್ನು ನಿರಾಕರಿಸಿದ್ದ ಕಾರಣಕ್ಕೆ ಬಾಲಕಿ ಸೇರಿದಂತೆ ಆಕೆಯ ಸ್ನೇಹಿತರಿಗೆ ವಿಷ ಸೇವನೆ ಮಾಡಿಸಿ ಇಬ್ಬರ ಸಾವಿಗೆ ಕಾರಣವಾಗಿರುವ ಆರೋಪ ಹೊತ್ತ ಉತ್ತರ ಪ್ರದೇಶದ ಉನ್ನಾವ್‌ನ ಯುವಕ ವಿನಯ್‌ನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಜಾನುವಾರುಗಳಿಗೆ ಮೇವು ತರಲು ತೆರಳಿದ್ದ ಇಬ್ಬರು ದಲಿತ ಬಾಲಕಿಯರು ನಿಗೂಢವಾಗಿ ಮೃತಪಟ್ಟಿದ್ದರೆ, ಇನ್ನೊಬ್ಬ ಬಾಲಕಿ ಗಂಭೀರ ಸ್ಥಿತಿಯಲ್ಲಿ ಕಂಡುಬಂದಿದ್ದಳು. ಈ ಪ್ರಕರಣ ಅನೇಕ ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿತ್ತು. ನಂತರ ಆರೋಪಿ ವಿನಯ್‌ನನ್ನು ಪೊಲೀಸರು ಸತ್ಯವನ್ನು ಬಹಿರಂಗಪಡಿಸಿದ್ದ.
ವಿನಯ್‌ ಮೃತಪಟ್ಟಿರುವ ಬಾಲಕಿಯ ಪೈಕಿ ಒಬ್ಬಳನ್ನು ಪ್ರೀತಿಸುತ್ತಿದ್ದ. ಲಾಕ್ ಡೌನ್ ವೇಳೆ ಪರಿಚಿತರಾಗಿದ್ದರು, ಪರಿಚಯ ಸ್ನೇಹವಾಗಿ ತಿರುಗಿತ್ತು. ಇಬ್ಬರೂ ಪ್ರತಿನಿತ್ಯ ಊರ ಹೊರಗಿನ ಜಮೀನಿನಲ್ಲಿ ಭೇಟಿಯಾಗುತ್ತಿದ್ದರಂತೆ.
ಹೀಗೆ ಕರೆದಾಗಲೆಲ್ಲಾ ಬರುತ್ತಿದ್ದ ಬಾಲಕಿಗೂ ತನ್ನ ಮೇಲೆ ಪ್ರೀತಿ ಇರುವುದಾಗಿ ಭಾವಿಸಿದ್ದ ಯುವಕ, ಆಕೆಯನ್ನು ಪ್ರೀತಿ ಮಾಡಲು ಶುರು ಮಾಡಿದ್ದ. ಒಂದು ದಿನ ಅವಳು ಭೇಟಿಯಾಗಲು ಬಂದಾಗ ವಿಷಯ ಪ್ರಸ್ತಾಪಿಸಿದ್ದಾನೆ. ಆದರೆ ಆಕೆ ನಿರಾಕರಿಸಿದ್ದಾಳೆ. ಇದರಿಂದ ಯುವಕನಿಗೆ ಸಿಟ್ಟುಬಂದಿದೆಯಂತೆ.
ಮೊನ್ನೆ, ಆ ಬಾಲಕಿ ತನ್ನ ಇನ್ನಿಬ್ಬರು ಸಂಬಂಧಿಕರಾಗಿರುವ ಬಾಲಕಿಯರ ಜತೆ ತೋಟಕ್ಕೆ ಹೋಗಿದ್ದಾಳೆ. ಈ ವೇಳೆ ಭಗ್ನಪ್ರೇಮದಿಂದ ಸಿಟ್ಟಿಗೆದ್ದಿದ್ದ ಯುವಕ, ತನ್ನ ಪ್ರೀತಿ ನಿರಾಕರಿಸಿದ್ದ ಬಾಲಕಿಯ ಕೊಲೆಗೆ ಸಂಚುರೂಪಿಸಿದ್ದ. ಆಕೆಗೆಂದು ಒಂದಿಷ್ಟು ತಿಂಡಿ ತಂದಿದ್ದ, ನೀರು ಕೂಡ ತಂದಿದ್ದ, ಆದರೆ ನೀರಿನಲ್ಲಿ ಕೀಟನಾಶಕ ಬೆರೆಸಿದ್ದ. ಬಾಲಕಿಯ ಜತೆ ಇನ್ನಿಬ್ಬರು ಇದ್ದುದ್ದನ್ನು ಕಂಡ ಆತ ಅವರಿಗೂ ಇದನ್ನು ನೀಡಿದ್ದ. ಕ್ರಿಮಿನಾಶಕ ಇರುವ ನೀರನ್ನು ಕುಡಿದು ಇಬ್ಬರು ಮೃತಪಟ್ಟರೆ, ಒಬ್ಬಾಕೆಯ ಸ್ಥಿತಿ ಗಂಭೀರವಾಗಿದೆ.
ಮುಂದಿನ ವಿಚಾರಣೆಗಾಗಿ ವಿನಯ್‌ನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅಂದು ಕಾರಸೇವಕರ ಮೇಲೆ ಶೂಟೌಟ್‌ಗೆ ಆದೇಶಿಸಿದ್ದ ಮಾವ: ಇಂದು ರಾಮಮಂದಿರಕ್ಕೆ 11 ಲಕ್ಷ ರೂ ದೇಣಿಗೆ ಕೊಟ್ಟ ಸೊಸೆ!

ಪತಿಯ ಕಣ್ತಪ್ಪಿಸಿ ನಡುರಾತ್ರಿ ಪ್ರೇಮಿಯ ಜತೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಬೆಳಗಾವಿ ಬೆಡಗಿ: ಮುಂದೇನಾಯ್ತು?

ಗಣರಾಜ್ಯೋತ್ಸವದ ದಿನ ರೈತರ ಹೆಸರಿನಲ್ಲಿ ಹಿಂಸಾಚಾರ- ಪೊಲೀಸರಿಂದ ಇನ್ನಷ್ಟು ಫೋಟೋ ಬಿಡುಗಡೆ

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ಸ್​ ಮಾಡಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × 2 =
Remember me
