ಕಾಞಂಗಾಡ್( (ಕೇರಳ):ಆನ್‌ಲೈನ್‌ ತರಗತಿ ಮತ್ತೆ ಹಲವೆಡೆ ಶುರುವಾಗಿರುವ ಬೆನ್ನಲ್ಲೇ ಅಸಂಬದ್ಧ ವಿಡಿಯೋಗಳು ಹರಿದಾಡುವುದು ಶುರುವಾಗಿದೆ. ನಕಲಿ ಐಪಿ ಅಡ್ರೆಸ್​ ಬಳಸಿಕೊಂಡು ದುಷ್ಕರ್ಮಿಗಳು ವಿಡಿಯೋ ಹರಿಬಿಡುತ್ತಿದ್ದಾರೆ. ಅಂಥದ್ದೇ ಒಂದು ಅಶ್ಲೀಲ ವಿಡಿಯೋ ಕೇರಳದ ಕಾಞಂಗಾಡ್ದಲ್ಲಿ ನಡೆದಿದೆ.
ಇಲ್ಲಿಯ ಶಾಲೆಯೊಂದರ ಆನ್‌ಲೈನ್‌ ಕ್ಲಾಸ್‌ ನಡೆಯುತ್ತಿದ್ದ ವೇಳೆ ಯಾವುದೋ ಒಬ್ಬ ವ್ಯಕ್ತಿ ಮುಖ ಮುಚ್ಚಿಕೊಂಡು, ಅರೆಬೆತ್ತಲೆಯಾಗಿ ಡಾನ್ಸ್‌ ಮಾಡಿದ್ದು, ಅದು ಆನ್‌ಲೈನ್‌ಲ್ಲಿ ಇರುವ ಮಕ್ಕಳಿಗೆ ಕಾಣಿಸಿದೆ. ಮಕ್ಕಳು ಹಾಗೂ ಶಿಕ್ಷಕರು ಅರೆಕ್ಷಣ ಇದನ್ನು ನೋಡಿ ದಂಗಾಗಿದ್ದಾರೆ.
ಕೂಡಲೇ ಶಿಕ್ಷಕರು ವಿದ್ಯಾರ್ಥಿಗಳಿಗೆ ಆಫ್‌ಲೈನ್‌ ಆಗುವಂತೆ ಸೂಚಿಸಿದ್ದಾರೆ. ಈ ಬಗ್ಗೆ ಕೇರಳ ಶಿಕ್ಷಣ ಸಚಿವ ವಿ. ಶಿವನ್​ಕುಟ್ಟಿ ತನಿಖೆ ಅವರಿಗೆ ಶಿಕ್ಷಕರು ಮಾಹಿತಿ ನೀಡಿದ್ದಾರೆ.
ಶಿಕ್ಷಣ ಇಲಾಖೆ ಪ್ರಾದೇಶಿಕ ಉಪನಿರ್ದೇಶಕರು ಶಾಲೆಗೆ ಭೇಟಿ ನೀಡಿ ಪ್ರಾಥಮಿಕ ವಿಚಾರಣೆ ನಡೆಸಿದ್ದಾರೆ. ಈ ಕುರಿತು ಶಾಲಾ ಆಡಳಿತ ಮಂಡಳಿ ಪ್ರತಿಕ್ರಿಯೆ ನೀಡಿದ್ದು, ತಮ್ಮ ಶಾಲೆಯ ಯಾವುದೇ ವಿದ್ಯಾರ್ಥಿ ಐಪಿ ಅಡ್ರೆಸ್​​ ದುರುಪಯೋಗ ಪಡಿಸಿಕೊಂಡಿಲ್ಲ ಎಂದಿದೆ. ಇದುವರೆಗೆ ಶಾಲಾ ಆಡಳಿತ ಮಂಡಳಿಯಿಂದ ಯಾವುದೇ ರೀತಿಯ ದೂರು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಕೋಲಾಹಲ: 32 ವರ್ಷಗಳ ಕಾಂಗ್ರೆಸ್‌ ‘ಸ್ಟಾರ್‌ ಪ್ರಚಾರಕ’ ರಾತ್ರೋರಾತ್ರಿ ಬಿಜೆಪಿಗೆ!

ಚಿನ್ನ ಕೊಡ್ಸಿ, ಒಳ್ಳೊಳ್ಳೆ ಬಟ್ಟೆ ಕೊಡ್ಸಿ… ಹೊರಗೆಲ್ಲಾ ಸುತ್ತಾಡಿಸಿ… ಅಂತಿದ್ದ ಪತ್ನಿಯ ಮಾತು ಕೇಳಿ ಕೇಳಿ ಪತಿ ಆತ್ಮಹತ್ಯೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
