ಲಖನೌ:ಈ ಬಾರಿಯ ಚುನಾವಣೆಯಲ್ಲಿ ಹಲವು ದಾಖಲೆಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿರುವ ಉತ್ತರಪ್ರದೇಶದಲ್ಲಿ ಇನ್ನೊಂದು ಇತಿಹಾಸ ಸೃಷ್ಟಿಯಾಗಿದೆ. ಅದೇನೆಂದರೆ ಈ ಬಾರಿ ಅತಿ ಹೆಚ್ಚು ಎಂದರೆ 36 ಮುಸ್ಲಿಂ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ಕಳೆದ ಚುನಾವಣೆಯಲ್ಲಿ 34 ಅಭ್ಯರ್ಥಿಗಳಿದ್ದು, ಈ ಬಾರಿ ಇವರ ಸಂಖ್ಯೆ ಎರಡು ಹೆಚ್ಚಾಗಿದೆ.
ವಿಧಾನಸಭಾ ಚುನಾವಣಾ ಅಂಗಳದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ನೇರ ಸ್ಪರ್ಧೆಯನ್ನು ಗಮನಿಸಿರುವ ಮತದಾರರು ಈ ಬಾರಿ 36 ಮುಸ್ಲಿಂ ಅಭ್ಯರ್ಥಿಗಳನ್ನು ವಿಧಾನಸಭೆಗೆ ಆಯ್ಕೆ ಮಾಡಿದ್ದಾರೆ. ಕಳೆದ ಬಾರಿಗಿಂತ ಈ ಸಲ ಇಬ್ಬರು ಅಭ್ಯರ್ಥಿಗಳನ್ನು ಹೆಚ್ಚಾಗಿ ಆಯ್ಕೆ ಮಾಡಿದ್ದಾರೆ. ಶೇ.20 ಕ್ಕಿಂತ ಹೆಚ್ಚು ಮುಸ್ಲಿಂ ಜನಸಂಖ್ಯೆ ಇರುವ ರಾಜ್ಯದ ಒಟ್ಟು 403 ಶಾಸಕರಲ್ಲಿ ಹೊಸದಾಗಿ ಚುನಾಯಿತರಾದ ಶಾಸಕರಲ್ಲಿ ಶೇಕಡಾ 8.93 ರಷ್ಟು ಮುಸ್ಲಿಮರಿದ್ದಾರೆ.
ಈ ಬಾರಿ ಬಿಎಸ್​ಪಿ 88, ಕಾಂಗ್ರೆಸ್​ 75 ಹಾಗೂ ಸಮಾಜವಾದಿ ಪಕ್ಷ 74 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಕೂಡ ಸಮುದಾಯದ 60 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.
ಪ್ರಮುಖರು ಯಾರು?ಜೈಲಿಗೆ ಹೋಗಿದ್ದ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ 1,21,755 ಮತಗಳನ್ನು ಗಳಿಸಿ, ಬಿಜೆಪಿಯ ಆಕಾಶ್ ಸಕ್ಸೇನಾ ಅವರನ್ನು ಸೋಲಿಸಿದ್ದಾರೆ. ರಾಜಕಾರಣಿಯಾಗಿ ಬದಲಾದ ಗ್ಯಾಂಗ್‌ಸ್ಟರ್ ಮುಖ್ತಾರ್ ಅನ್ಸಾರಿ ಅವರ ಮಗ ಅಬ್ಬಾಸ್ ಮತ್ತು ಸೋದರಳಿಯ ಮನ್ನು ಜಯಭೇರಿ ಬಾರಿಸಿದ್ದಾರೆ.
ಸುವಾರ್ ವಿಧಾನಸಭಾ ಕ್ಷೇತ್ರದಲ್ಲಿ ಅಪ್ನಾ ದಳದಿಂದ ಸ್ಪರ್ಧಿಸಿದ್ದ ಹೈದರ್ ಅಲಿ ಖಾನ್ ಅಲಿಯಾಸ್​ ಹಮ್ಜಾ ಮಿಯಾನ್ 1,26,162 ಮತಗಳನ್ನು ಪಡೆದು ಅಜಂ ಖಾನ್​ ಅವರ ಪುತ್ರ ಅಬ್ದುಲ್ಲಾ ಅಜಮ್ ಅವರನ್ನು ಸೋಲಿಸಿದರು. ಮೌ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಸ್‌ಬಿಎಸ್‌ಪಿ ಅಭ್ಯರ್ಥಿ ಮುಖ್ತಾರ್ ಅನ್ಸಾರಿ ಅವರ ಪುತ್ರ ಅಬ್ಬಾಸ್ ಅನ್ಸಾರಿ ಬಿಜೆಪಿಯ ಅಶೋಕ್ ಕುಮಾರ್ ಸಿಂಗ್ ಅವರನ್ನು ಸೋಲಿಸಿದರು.
ಮೊಹಮ್ಮದಾಬಾದ್​ನಲ್ಲಿ ಮಾಜಿ ಶಾಸಕ ಸಿಬ್ಗತುಲ್ಲಾ ಅನ್ಸಾರಿ ಅವರ ಪುತ್ರ ಮತ್ತು ಮುಖ್ತಾರ್ ಅವರ ಸೋದರಳಿಯ ಸುಹೈಬ್ ಅನ್ಸಾರಿ ಅಲಿಯಾಸ್​ ಮನ್ನು 18,199 ಮತಗಳ ಅಂತರದಿಂದ ಬಿಜೆಪಿಯ ಹಾಲಿ ಶಾಸಕಿ ಅಲ್ಕಾ ರೈ ಅವರನ್ನು ಸೋಲಿಸಿದ್ದಾರೆ. ಕೈರಾನಾ ಕ್ಷೇತ್ರದಲ್ಲಿ ಎಸ್‌ಪಿ ಅಭ್ಯರ್ಥಿ ನಹಿದ್ ಹಸನ್ ಅವರು ಬಿಜೆಪಿ ಅಭ್ಯರ್ಥಿ ಮೃಗಾಂಕಾ ಸಿಂಗ್ ಅವರನ್ನು ಪರಾಭವಗೊಳಿಸಿದ್ದರೆ, ನಿಜಾಮಾಬಾದ್‌ನಲ್ಲಿ ಎಸ್‌ಪಿಯ 85 ವರ್ಷದ ಅನುಭವಿ ಆಲಂ ಬಾಡಿ ಅವರು ಬಿಜೆಪಿಯ ಮನೋಜ್ ಅವರನ್ನು 34,187 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಮೀರತ್‌ನ ಕಿಥೋರ್ ಅಸೆಂಬ್ಲಿ ಕ್ಷೇತ್ರದಲ್ಲಿ ಎಸ್‌ಪಿಯ ಶಾಹಿದ್ ಮಜೂರ್ ಅವರು ಬಿಜೆಪಿಯ ಸತ್ವಿರ್ ಸಿಂಗ್ ಅವರನ್ನು ಕೇವಲ 2,180 ಮತಗಳ ಅಂತರದಿಂದ ಸೋಲಿಸಿದರು. ಕುಂದರ್ಕಿ ಕ್ಷೇತ್ರದಲ್ಲಿ ಎಸ್‌ಪಿ ಸಂಸದ ಶಫೀಕರ್ ರಹಮಾನ್ ಬಾರ್ಕ್ ಅವರ ಪುತ್ರ ಜಿಯಾ-ಉರ್-ರೆಹಮಾನ್ ಬಿಜೆಪಿಯ ಕಮಲ್ ಕುಮಾರ್ ಅವರನ್ನು 43,162 ಮತಗಳಿಂದ ಸೋಲಿಸಿದ್ದಾರೆ.
VIDEO: ಕಿವಿ ತೆರೆದು ಕೇಳಿಸಿಕೊಳ್ಳಿ… ಮಾರ್ಚ್​ 11ರಿಂದ ನಿಮ್ಮ ಕೌಂಟ್​ಡೌನ್​ ಶುರು… ನಿಮ್ಮ ಆಟ ಕ್ಲೋಸ್​…

ಯಾರೂ ಕಾಲಿಡದ ಜಾಗಕ್ಕೆ ಭೇಟಿ ನೀಡಿ ಗೆದ್ದು ಬೀಗಿದ ಯೋಗಿ: 29 ವರ್ಷಗಳ ನಂಬಿಕೆಯೇ ಸುಳ್ಳಾಗೋಯ್ತು!

ಯಾವ ರಾಜಕಾರಣಿಯೂ ಬೇಡ ಎಂದು “ನೋಟಾ” ಒತ್ತಿದ ಎಂಟು ಲಕ್ಷ ಮತದಾರರು- ಎಲ್ಲೆಲ್ಲಿ ಎಷ್ಟೆಷ್ಟು?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × one =
Remember me
