ಫಿರೋಜಾಬಾದ್ ​​(ಉತ್ತರ ಪ್ರದೇಶ):ಪುಟ್ಟ ಕಂದನ ನಿರೀಕ್ಷೆಯಲ್ಲಿದ್ದ ತುಂಬು ಗರ್ಭಿಣಿಯೊಬ್ಬರು, ಅಮ್ಮನ ಮನೆಗೆ ಹೋಗುತ್ತಿದ್ದಾಗ ಭಾರಿ ದುರಂತ ನಡೆದುಹೋಗಿದೆ. ಪತಿಯ ಜತೆ ಬೈಕ್​ನಲ್ಲಿ ಹೋಗುವಾಗ ಟ್ರಕ್​ ಡಿಕ್ಕಿ ಹೊಡೆದು ಮಹಿಳೆ ನಡುರಸ್ತೆಯಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಆದರೆ ಅದೇ ವೇಳೆ ಮಗುವಿಗೆ ಜನ್ಮ ನೀಡಿದ್ದಾರೆ!
ಉತ್ತರ ಪ್ರದೇಶದ ಫಿರೋಜಾಬಾದ್​​ನ ನರಖಿ ಪೊಲೀಸ್​ ಠಾಣಾ ವ್ಯಾಪ್ತಿಯ ಬರ್ತಾರಾ ಗ್ರಾಮದ ಬಳಿ ಈ ಘಟನೆ ನಡೆದಿದೆ. ಆಗ್ರಾ ಜಿಲ್ಲೆಯ ಧನೌಲಾ ಗ್ರಾಮದ ನಿವಾಸಿ ಕಾಮಿನಿ ಈ ದುರಂತ ಸಾವು ಕಂಡವರು.
ತುಂಬು ಗರ್ಭಿಣಿಯಾಗಿದ್ದ ಕಾಮಿನಿ, ಪತಿ ರಾಮು ಜತೆ ಬೈಕ್​ನಲ್ಲಿ ತವರಿಗೆ ಹೋಗುತ್ತಿದ್ದರು. ಬರ್ತಾರಾ ಗ್ರಾಮದ ಸಮೀಪ ಎದುರಿಗಿನಿಂದ ಬಂದ್​ ಟ್ರಕ್ ಇವರ ಬೈಕ್​ಗೆ ಡಿಕ್ಕಿ ಹೊಡೆದಿದೆ. ಈ ರಭಸಕ್ಕೆ ಬೈಕ್​ ಪಲ್ಟಿಯಾಗಿದೆ. ದಂಪತಿ ಇಬ್ಬರೂ ರಸ್ತೆಯ ಮೇಲೆ ಬಿದ್ದರು. ಆದರೆ ಕಾಮಿನಿ ಅವರು ಬಿದ್ದ ತಕ್ಷಣವೇ, ಹಿಂಬದಿಯಿಂದ ಟ್ರಕ್​ ಒಂದು ರಭಸದಿಂದ ಬಂದು ಕಾಮಿನಿಯವರಿಗೆ ಗುದ್ದಿದೆ. ಈ ಆಘಾತದಲ್ಲಿ ಕಾಮಿನಿಯವರಿಗೆ ಪ್ರಸವವಾಗಿದೆ. ಹೆಣ್ಣುಮಗುವಿಗೆ ಜನ್ಮ ನೀಡಿ ಅಲ್ಲಿಯೇ ಮೃತಪಟ್ಟಿದ್ದಾರೆ.
ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದು ಆರೋಗ್ಯವಾಗಿದೆ. ಕಾಮಿನಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಹೆಂಡತಿ ಸಾವಿನಿಂದ ಗಂಡನ ಆಕ್ರಂದನ ಮುಗಿಲು ಮುಟ್ಟಿದೆ.(ಏಜೆನ್ಸೀಸ್​)
ಶಿಂಧೆ ಸಂಪುಟದಲ್ಲಿ ಸಚಿವ ಸ್ಥಾನಕ್ಕೆ 90 ಕೋಟಿ ರೂ.ಗೆ ಡೀಲ್​: ಮುಂದೇನಾಯ್ತು ನೋಡಿ…

ಯುವಕ ಬೀಸಿದ ಬಲೆಗೆ ಬಿದ್ದರು ಈ ನಾಲ್ವರು ಶಾಸಕಿಯರು! ಕಣ್ಣೀರಿಗೆ ಕರಗಿ ಹಣ ಕಳೆದುಕೊಂಡರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 11 =
Remember me
