ಅಲಿಗಢ (ಉತ್ತರಪ್ರದೇಶ):ಉತ್ತರಪ್ರದೇಶದ ಬಿಜೆಪಿ ನಾಯಕಿ ರೂಬಿ ಖಾನ್​ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ಕಾರಣಕ್ಕೆ ಅವರ ವಿರುದ್ಧ ಫತ್ವಾವನ್ನು ಹೊರಡಿಸಲಾಗಿದೆ.
ಇಸ್ಲಾಂನಲ್ಲಿ ಮೂರ್ತಿ ಪೂಜೆ ನಿಷಿದ್ಧ ಇರುವ ಕಾರಣ, ಅವರ ವಿರುದ್ಧ ದಿಯೋಬಂದಿ ಧರ್ಮಗುರು ಫತ್ವಾ ಹೊರಡಿಸಿದ್ದಾರೆ. ಉತ್ತರಪ್ರದೇಶದ ಅಲಿಗಢದಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ವಿಭಾಗೀಯ ಉಪಾಧ್ಯಕ್ಷೆಯೂ ಆಗಿರುವ ರೂಬಿ ಖಾನ್​ ಎಲ್ಲರೂ ಒಂದೇ ಎನ್ನುವ ಭಾವನೆಯಿಂದ ಗಣೇಶನನ್ನು ಪೂಜೆ ಮಾಡಿದ್ದರು. ಗಣೇಶ ಚತುರ್ಥಿಯ ದಿನದಂದು ಅವರು ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಿಸಿದ್ದರು.
ಇದೇ ಅವರಿಗೆ ಈಗ ಮುಳುವಾಗಿದೆ. ಇಸ್ಲಾಂ ಕಟ್ಟಳೆ ಮುರಿದ ಆರೋಪದ ಮೇಲೆ ಅವರ ವಿರುದ್ಧ ಫತ್ವಾ ಹೊರಡಿಸಿದ್ದಾರೆ. ಗಣೇಶನನ್ನು ಹಿಂದೂಗಳು ಪೂಜಿಸುತ್ತಾರೆ. ಇಸ್ಲಾಂನಲ್ಲಿ ಮೂರ್ತಿ ಪೂಜೆ ಇಲ್ಲ. ಗಣೇಶನ ಪೂಜೆ ಮಾಡಿರುವುದಕ್ಕೆ ಧರ್ಮಗುರು ಮುಫ್ತಿ ಅರ್ಷದ್ ಫಾರೂಕಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇಸ್ಲಾಂನಲ್ಲಿ ಅಲ್ಲಾನನ್ನು ಹೊರತುಪಡಿಸಿ ಯಾರನ್ನೂ ಪೂಜಿಸಲಾಗುವುದಿಲ್ಲ. ಇದನ್ನು ಮಾಡಿದವರು ಇಸ್ಲಾಂ ವಿರೋಧಿಗಳು ಮತ್ತು ಇದು ಇಸ್ಲಾಂ ವಿರೋಧಿ ಕೃತ್ಯವಾಗಿದೆ ಎಂದಿದ್ದಾರೆ.
ತಮ್ಮ ವಿರುದ್ಧ ಫತ್ವಾ ಹೊರಡಿಸಿರುವುದಕ್ಕೆ ರೂಬಿ ಖಾನ್​ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಧರ್ಮಗುರುಗಳಾದವರು ಶಾಂತಿ ಬಿತ್ತಬೇಕು. ಈ ರೀತಿ ಧರ್ಮಾಚರಣೆಯಲ್ಲಿ ಬೇಧ ಮಾಡಬಾರದು. ಹೀಗೆ ನನ್ನ ವಿರುದ್ಧ ಫತ್ವಾ ಹೊರಡಿಸಿ ನನ್ನನ್ನು ಮುಸ್ಲಿಂ ವಿರೋಧಿ ಎಂದ ಮುಫ್ತಿಗಳು ಮತ್ತು ಮೌಲಾನಾಗಳು ಉಗ್ರಗಾಮಿಗಳು. ಅವರು ಜಿಹಾದಿ ಮನಸ್ಥಿತಿಯನ್ನು ಹೊಂದಿದ್ದಾರೆ. ಇವರೆಲ್ಲ ಧರ್ಮ ತಾರತಮ್ಯ ಅನುಸರಿಸುತ್ತಾರೆ. ಮುಫ್ತಿ ನಿಜವಾದ ಮುಸಲ್ಮಾನನಾಗಿದ್ದರೆ ಈ ರೀತಿ ಮಾತನಾಡುತ್ತಿರಲಿಲ್ಲ ಎಂದಿದ್ದಾರೆ (ಏಜೆನ್ಸೀಸ್​)
VIDEO: ಭಯೋತ್ಪಾದನೆ ನಂಟು; ಮೂರನೇ ಮದರಸಾವೂ ನೆಲಸಮ- ಎಂಟು ಬುಲ್ಡೋಜರ್​ ಬಳಸಿ ಧ್ವಂಸ ಕಾರ್ಯಾಚರಣೆ

VIDEO: ಇದೇ ನನ್ನ ಅಂತಿಮ ಮಾತಾಗಿರ್ಬೋದು , ಯಾವುದೇ ಕ್ಷಣ ಕೊಲೆಯಾಗ್ಬೋದು… ವೈದ್ಯಕೀಯ ವಿದ್ಯಾರ್ಥಿನಿ ವಿಡಿಯೋ ವೈರಲ್​

VIDEO: ಸಿಎಂ ಮಮತಾ ಬಾಯಲ್ಲಿ ಆರ್​ಎಸ್​ಎಸ್​ನ ಶ್ಲಾಘನೆ- ರಾಜಕೀಯ ವಲಯದಲ್ಲಿ ಭಾರಿ ಕೋಲಾಹಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
