ಬಿಜ್ನೋರ್ (ಉತ್ತರ ಪ್ರದೇಶ): ಕೋಮುದ್ವೇಷದ ಜ್ವಾಲೆ ಎಲ್ಲೆಡೆ ಹರಡಿರುವ ಮಧ್ಯೆಯೇ ಉತ್ತರ ಪ್ರದೇಶದಲ್ಲೊಂದು ಆಘಾತಕಾರಿ ಘಟನೆ ನಡೆದಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಮನೆಮನೆಗೆ ಧ್ವಜವನ್ನು ಹಂಚಿರುವ ಕಾರಣಕ್ಕೆ ಹಿಂದೂ ಕುಟುಂಬವೊಂದಕ್ಕೆ ಪ್ರಾಣ ಬೆದರಿಕೆ ಹಾಕಲಾಗಿದೆ!
ಬಿಜ್ನೋರ್​ ಜಿಲ್ಲೆಯ ಕಿರಾತ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅರುಣ್ ಕುಮಾರ್ ಎಂಬವವರ ಕುಟುಂಬಕ್ಕೆ ಈ ಬೆದರಿಕೆ ಬಂದಿದೆ.
ಅರುಣ್​ ಅವರ ಪತ್ನಿ ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಅವರ ಕರೆಯ ಮೇರೆಗೆ ಘರ್​ ಘರ್​ ಮೇ ತಿರಂಗಾ ಯೋಜನೆ ಹಿನ್ನೆಲೆಯಲ್ಲಿ ಮನೆಮನೆಗೆ ಧ್ವಜ ಹಂಚುವ ಕೆಲಸ ಅರುಣ್​ ಅವರಿಗೂ ನೀಡಲಾಗಿತ್ತು. ಅರುಣ್​ ಅವರ ಪತ್ನಿ ಪತಿಯ ಜತೆ ಧ್ವಜ ವಿತರಣೆ ಮಾಡಿದ್ದರು.
ಇದೇ ಕಾರಣಕ್ಕೆ ಅವರಿಗೆ ಜೀವ ಬೆದರಿಕೆ ಬಂದಿದೆ. ಅವರ ಮನೆಯ ಹೊರಗಡೆಯ ಗೋಡೆಗೆ ಜೀವ ಬೆದರಿಕೆ ಪತ್ರ ಅಂಟಿಸಲಾಗಿದೆ. ಸದ್ಯ ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಪ್ರಕಾರ ಎಫ್‌ಐಆರ್ ದಾಖಲಿಸಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ರಂಜನ್ ಸಿಂಗ್ ಹೇಳಿದ್ದಾರೆ.(ಏಜೆನ್ಸೀಸ್​)
ನಿಷೇಧಾಜ್ಞೆ ನಡುವೆಯೂ ಶಿವಮೊಗ್ಗದಲ್ಲಿ ನಿಲ್ಲದ ಹಿಂಸಾಚಾರ: ಮತ್ತೋರ್ವ ಹಿಂದೂ ಯುವಕನಿಗೆ ಚಾಕು ಇರಿತ

ಪಾಕ್​ನಲ್ಲಿ ಭಾರತದ ಜೈಜೈಕಾರ: ಮೋದಿಯನ್ನು ಹಾಡಿ ಹೊಗಳಿದ ಮಾಜಿ ಪಿಎಂ ಇಮ್ರಾನ್​, ಖ್ಯಾತ ಪತ್ರಕರ್ತ!

VIDEO: ಪ್ರಧಾನಿಯ ಎರಡು ಟೀಕೆಗಳಿಗೆ ಉತ್ತರಿಸಲಾಗದೇ ‘ಸ್ವತಂತ್ರ ದಿನದ ಶುಭಾಶಯ’ ಎಂದು ಕಾರು ಹತ್ತಿದ ರಾಹುಲ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − nine =
Remember me
