ಲಖನೌ (ಉತ್ತರ ಪ್ರದೇಶ):ಉತ್ತರ ಪ್ರದೇಶ ಸರ್ಕಾರವು ಅಲಹಾಬಾದ್​ ಹೈಕೋರ್ಟ್​ಗೆ ನೇಮಕವಾಗಿದ್ದ 841 ಸರ್ಕಾರಿ ವಕೀಲರನ್ನು ಕೆಲಸದಿಂದ ತೆಗೆದು ಹಾಕಿದೆ. ಅಲಹಾಬಾದ್ ಹೈಕೋರ್ಟ್‌ನ ಪ್ರಧಾನ ಪೀಠದಿಂದ 505 ವಕೀಲರು, ಹೈಕೋರ್ಟ್‌ನ ಲಖನೌ ಪೀಠದಿಂದ 336 ಸರ್ಕಾರಿ ವಕೀಲರು ಇದರಲ್ಲಿ ಸೇರಿದ್ದಾರೆ. ಇವರಲ್ಲಿ ಅಲಹಾಬಾದ್ ಹೈಕೋರ್ಟ್‌ನ ಹೆಚ್ಚುವರಿ ಅಡ್ವೊಕೇಟ್ ಜನರಲ್ ವಿನೋದ್ ಕಾಂತ್ ಕೂಡ ಸೇರಿದ್ದಾರೆ.
ಇದರೊಂದಿಗೆ ಪ್ರಧಾನ ಪೀಠದ ಪ್ರಯಾಗ್‌ರಾಜ್‌ನಲ್ಲಿ 26 ಹೆಚ್ಚುವರಿ ಮುಖ್ಯ ಕಾಯಂ ವಕೀಲರನ್ನು ತೆಗೆದುಹಾಕಲಾಗಿದೆ. ಇದಿಷ್ಟೇ ಅಲ್ಲದೇ 33 ಹೆಚ್ಚುವರಿ ಸರ್ಕಾರಿ ವಕೀಲರನ್ನು, 66 ಮಂದಿ ಕ್ರಿಮಿನಲ್​ ಪ್ರಕರಣಗಳ ವಕೀಲರು ಹಾಗೂ 176 ಮಂದಿ ಸಿವಿಲ್​ ಪ್ರಕರಣಗಳ ವಕೀಲರನ್ನು ವಜಾಗೊಳಿಸಲಾಗಿದೆ.
59 ಹೆಚ್ಚುವರಿ ಮುಖ್ಯ ವಕೀಲರು ಹಾಗೂ 179 ಕಾಯಂ ವಕೀಲರನ್ನು ಸಹ ಬಿಡುಗಡೆ ಮಾಡಲಾಗಿದೆ. ಇದೇ ವೇಳೆ, ಅಲಹಾಬಾದ್​ ಹೈಕೋರ್ಟ್​ಗೆ 366 ಹೊಸ ಪಬ್ಲಿಕ್​ ಪ್ರಾಸಿಕ್ಯೂಟರ್​ ಹಾಗೂ ಲಖನೌ ಪೀಠಕ್ಕೆ 220 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ.
ಎಲ್ಲರ ಸೇವೆಯನ್ನು ವಜಾಗೊಳಿಸಿರುವುದಕ್ಕೆ ಯಾವುದೇ ಕಾರಣವನ್ನು ಸರ್ಕಾರ ನೀಡಲಿಲ್ಲ. ಆದರೆ ಕಳೆದ ಮೇ ತಿಂಗಳಿನಲ್ಲಿ ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದು ಹೈಕೋರ್ಟ್​, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಇಷ್ಟೊಂದು ಸಂಖ್ಯೆಯಲ್ಲಿ ಸರ್ಕಾರಿ ವಕೀಲರ ನೇಮಕ ಮಾಡಿಕೊಳ್ಳುವ ಅಗತ್ಯವೇನಿದೆ ಎಂದು ಪ್ರಶ್ನಿಸಿತ್ತು. ಅನಗತ್ಯ ಎನ್ನಿಸುವಷ್ಟು ಮಂದಿ ವಕೀಲರು ಇದ್ದಾರೆ ಎಂದು ಕೋರ್ಟ್​ ಅಭಿಪ್ರಾಯ ಪಟ್ಟಿತ್ತು. ಇದರ ಬೆನ್ನಲ್ಲೇ ಇಂಥದ್ದೊಂದು ಆದೇಶ ಹೊರಬಂದಿದೆ.(ಏಜೆನ್ಸೀಸ್​)
‘ರಾಹುಲ್​ಜೀ… ನಿಮ್ಮ ತಂದೆಯ ಕೊಲೆಪಾತಕಿಗಳನ್ನು ಬೆಂಬಲಿಸಿದವರಿಂದಲೇ ಇವ್ರು ಪ್ರಶಸ್ತಿ ಪಡೆದ್ರಲ್ಲ, ನಿಮ್ಗೆ ಒಪ್ಪಿಗೆನಾ?’

ಸಿದ್ದರಾಮೋತ್ಸವಕ್ಕೆ ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ ಗೈರು! ಅವರು ಕೊಟ್ಟ ಕಾರಣ ಹೀಗಿದೆ…

VIDEO: ಬ್ಯಾಗ್​ ಕೆಳಗಿಟ್ಟು ಟ್ರೋಲ್ ಆದ ಸಂಸದೆ!​ ಕ್ಯಾಮೆರಾ ಕಣ್ಣಿಗೆ ಬಿದ್ದು ರಟ್ಟಾಗೋಯ್ತು ಈ ಗುಟ್ಟು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − nine =
Remember me
